Advertisement
ಎರಡು ವಾರಗಳ ಕಾಲ ನಡೆದ ಶೃಂಗದಲ್ಲಿ ಹವಾಮಾನ ಬದಲಾವಣೆ, ತಾಪಮಾನ ಹೆಚ್ಚಳದ ಕುರಿತಂತೆ ಈ ಹಿಂದೆ ಜಾಗತಿಕವಾಗಿ ಕೈಗೊಳ್ಳಲಾದ ಒಪ್ಪಂದ, ನಿರ್ಧಾರಗಳ ಅನುಷ್ಠಾನಕ್ಕೆ ಮುಂದುವರಿದ ದೇಶಗಳು ಅಷ್ಟೊಂದು ಆಸಕ್ತಿ ತೋರದಿರುವ ಬಗೆಗೆ ಅಭಿವೃದ್ಧಿಶೀಲ ಮತ್ತು ಬಡರಾಷ್ಟ್ರಗಳಿಂದ ಅಸಮಾ ಧಾನ ವ್ಯಕ್ತವಾದವು. ಪಳೆಯುಳಿಕೆ ಇಂಧನಗಳ ಬಳಕೆಯನ್ನು ಕಡಿಮೆ ಗೊಳಿಸಲು ಪರ್ಯಾಯ ಇಂಧನ ಮೂಲಗಳನ್ನು ಕಂಡುಕೊಳ್ಳುವುದು ಬಡ ರಾಷ್ಟ್ರಗಳಿಗೆ ಬಲುದೊಡ್ಡ ಸವಾ ಲಾಗಿದೆ. ಇದಕ್ಕಾಗಿ ಸಾಕಷ್ಟು ಹಣವನ್ನು ವ್ಯಯಿಸಬೇಕಿದ್ದು, ಇಷ್ಟೊಂದು ಸಾಮ ರ್ಥ್ಯವನ್ನು ಅವು ಹೊಂದಿಲ್ಲ. ಈ ಹಿನ್ನೆಲೆ ಯಲ್ಲಿ ಈ ಹಿಂದೆ ಮಾಡಿ ಕೊಳ್ಳಲಾದ ಒಪ್ಪಂದದಂತೆ ಬಲಾಡ್ಯ ರಾಷ್ಟ್ರ ಗಳು, ಬಡ ರಾಷ್ಟ್ರಗಳಿಗೆ ಹಣಕಾಸು ನೆರವು ನೀಡಬೇಕು ಎಂದು ಈ ರಾಷ್ಟ್ರಗಳು ಪ್ರಬಲವಾಗಿ ಪ್ರತಿಪಾದಿಸಿದವು. ಹವಾಮಾನ ಬದಲಾವಣೆಯು ಮಳೆ, ತಾಪಮಾನ, ನೀರಿನ ಲಭ್ಯತೆಯ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತಿದೆ. ಇದು ಕೃಷಿ ಉತ್ಪಾದನೆಯ ಮೇಲೆ ನೇರ ಪರಿಣಾಮ ಬೀರುವುದರ ಜತೆಯಲ್ಲಿ ಆರ್ಥಿಕತೆಗೂ ಬಲುದೊಡ್ಡ ಹೊಡೆತ ನೀಡುತ್ತಿದೆ. ಅಭಿವೃದ್ಧಿ ಹೊಂದಿದ ದೇಶಗಳೇ ಗರಿಷ್ಠ ಪ್ರಮಾಣದಲ್ಲಿ ಹಸುರುಮನೆ ಅನಿಲ ಹೊರಸೂಸುವಿಕೆಗೆ ಕಾರಣವಾಗಿವೆ. ಆದರೆ ಇದರ ಪರಿಣಾಮವನ್ನು ವಿಶ್ವದ ಅಭಿವೃದ್ಧಿಶೀಲ ಮತ್ತು ಬಡ ರಾಷ್ಟ್ರಗಳು ಅನುಭವಿಸುತ್ತಿವೆ. ಈ ಕಾರಣದಿಂದಾಗಿ ಈ ಬಾರಿಯ ಶೃಂಗದಲ್ಲಿ ಈ ಬಗ್ಗೆ ಈ 2 ವರ್ಗಗಳಿಗೆ ಸೇರಿದ ರಾಷ್ಟ್ರಗಳು ಒಂದಿಷ್ಟು ಗಟ್ಟಿ ದನಿಯಲ್ಲಿಯೇ ವಿಷಯ ವನ್ನು ಪ್ರಸ್ತಾವಿಸಿ, ಅಭಿವೃದ್ಧಿ ಹೊಂದಿದ ದೇಶಗಳು ಹವಾಮಾನ ಬದಲಾ ವಣೆಗೆ ಕಾರಣ ವಾಗುತ್ತಿರುವ ಪಳೆಯುಳಿಕೆ ಇಂಧನಗಳ ಬಳಕೆಯನ್ನು ಕಡಿಮೆ ಮಾಡಲು ಹೆಚ್ಚಿನ ಪ್ರಮಾಣದಲ್ಲಿ ಹಣವನ್ನು ವ್ಯಯಿಸಬೇಕೆಂದು ಆಗ್ರಹಿಸಿದವು.
Advertisement
United Nations Climate Summit ;ಒಪ್ಪಂದ ಅನುಷ್ಠಾನ: ಬಲಾಡ್ಯ ರಾಷ್ಟ್ರಗಳು ಮಾದರಿಯಾಗಲಿ
12:50 AM Dec 15, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.