Advertisement

ಶೀಘ್ರ ರಾಜ್ಯಾದ್ಯಂತ ಮೊಟ್ಟೆಗೆ ಏಕದರ

11:15 AM Oct 09, 2021 | Team Udayavani |

ಬೆಂಗಳೂರು: ಮೊಟ್ಟೆ ಉತ್ಪಾದಕರಿಗೆ ಮತ್ತು ಗ್ರಾಹಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಮೊಟ್ಟೆಗೆ ಏಕದರ ನಿಗದಿ ಮಾಡಲಾಗುವುದು ಎಂದು ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳ ಅಧ್ಯಕ್ಷ ಡಿ.ಕೆ.ಕಾಂತರಾಜು ಹೇಳಿದರು.

Advertisement

ನಗರದ ಕ್ವೀನ್ಸ್‌ ರಸ್ತೆಯ ದಂಡು ಪಶುಆಸ್ಪತ್ರೆ ಆವರಣದಲ್ಲಿ ಹಮ್ಮಿಕೊಂಡಿದ್ದ ವಿಶ್ವಮೊಟ್ಟೆ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಡಿಮೆ ಹಣದಲ್ಲಿ ಹೆಚ್ಚು ಪೋಷಕಾಂಶ ಸಿಗುವ ಆಹಾರ ಮೊಟ್ಟೆಯಾಗಿದೆ. ಮೊಟ್ಟೆ ಉತ್ಪಾದನೆಯಲ್ಲಿ ಕರ್ನಾಟಕ ರಾಜ್ಯ ನಾಲ್ಕನೇ ಸ್ಥಾನದಲ್ಲಿದೆ. ಸದ್ಯ ಒಂದು ಮೊಟ್ಟೆ ಉತ್ಪಾದನಾ ವೆಚ್ಚ 4.5 ರೂ. ಇದ್ದು, ಗ್ರಾಹಕರಿಗೆ 6 ರೂ.ಗೆ ಮಾರಾಟ ಮಾಡಲಾಗುತ್ತಿದೆ. ವ್ಯತ್ಯಾಸವಿರುವ 1.5 ರೂ. ಉತ್ಪಾದಕರಿಗೆಗೂ ಸಿಗದೇ ವ್ಯಾಪಾರಿಗಳ ಪಾಲಾಗುತ್ತಿದೆ.

ಜತೆಗೆ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಗ್ರಾಮೀಣ ಭಾಗ, ನಗರ ಪ್ರದೇಶಗಳಲ್ಲಿ ಮೊಟ್ಟೆ ಬೆಲೆಯಲ್ಲಿ ವ್ಯತ್ಯಾಸವಿದೆ. ಹೀಗಾಗಿ, ಮೊಟ್ಟೆ ಉತ್ಪಾದಕರಿಗೆ ಮತ್ತು ಗ್ರಾಹಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಹಾಮಂಡಳ ವತಿಯಿಂದ ರಾಜ್ಯಾದ್ಯಂತ ಒಂದೇ ದರ ನಿಗದಿ ಮಾರಾಟ ಮಾಡಲು ಕ್ರಮಕೈಗೊಳ್ಳಲಾಗುತ್ತದೆ. ಈ ನಿಟ್ಟಿನಲ್ಲಿ ಕೆಲ ತಿಂಗಳುಗಳಲ್ಲಿಯೇ ಉತ್ಪಾದಕರ ಸಮಾವೇಶ ಕರೆದು ತೀರ್ಮಾನಿಸಲಾಗುತ್ತದೆ ಎಂದು ತಿಳಿಸಿದರು.

ಇದನ್ನೂ ಓದಿ:- ಕುಂದಾಪುರ : ಹಿಂದೂ ಸಂಘಟನೆಯಿಂದ ಠಾಣೆಗೆ ಮುತ್ತಿಗೆ

ರಾಜ್ಯದಲ್ಲಿ ಕುಕ್ಕುಟ ಉದ್ಯಮ ನಿತ್ಯ 700-800 ಕೋಟಿ ರೂ. ವಹಿವಾಟು ಹೊಂದಿದ್ದು, ಇಪ್ಪತ್ತು ಲಕ್ಷ ಜನಕ್ಕೆ ಉದ್ಯೋಗ ಲಭಿಸಿದೆ. ತಮಿಳುನಾಡು, ಕೇರಳ ಮೊಟ್ಟೆ ಉತ್ಪಾದನೆಯಲ್ಲಿ ಮುಂದಿವೆ. ಇದಕ್ಕೆ ಅಲ್ಲಿನ ರಾಜ್ಯ ಸರ್ಕಾರದ ಬೆಂಬಲ ಕಾರಣವಾಗಿದ್ದು, ಕೋಳಿ ಆಹಾರದಲ್ಲಿ ಸಬ್ಸಿಡಿ ನೀಡುತ್ತಿವೆ. ಉತ್ಕೃಷ್ಟ ಮಾರುಕಟ್ಟೆ ಒದಗಿಸಿವೆ. ಆದರೆ, ರಾಜ್ಯದಲ್ಲಿ ಮುಕ್ತ ವಾತಾವರಣ ಇಂದಿಗೂ ಸಾಧ್ಯವಾಗಿಲ್ಲ. ಸದ್ಯ ರಾಜ್ಯದಲ್ಲಿ ನಿತ್ಯ 1.7 ಕೋಟಿ ಮೊಟ್ಟೆ ಉತ್ಪಾದಿಸುತ್ತಿದ್ದು, 2.5 ಕೋಟಿ ಮೊಟ್ಟೆಗಳ ಸೇವನೆ ಇದೆಯಾಗುತ್ತಿದೆ. ಹೊರರಾಜ್ಯದ ಉದ್ಯಮಿಗಳು ರಾಜ್ಯದಲ್ಲಿ ಮಾರುಕಟ್ಟೆ ವಿಸ್ತರಿಸಿದ್ದು, ಸಣ್ಣ ಕೃಷಿಕರಿಗೆ ಇದರಿಂದ ಸಮಸ್ಯೆಯಾಗುತ್ತಿದೆ.

Advertisement

ಕುಕ್ಕುಟ ಉದ್ಯಮವನ್ನು ವಿಸ್ತರಿಸಲು ಕೆಎಂಎಫ್‌ ಜತೆ ಕೈಜೋಡಿಸಲು ಚರ್ಚೆ ನಡೆಸಲಾಗುತ್ತಿದೆ. ಇನ್ನು ಪ್ರತಿಯೊಬ್ಬರು ರೈತರು ಇಲ್ಲಿ ಸದಸ್ಯರಾಗುವುದು ಕಡ್ಡಾಯಗೊಳಸ ಲಾಗಿದೆ ಎಂದು ತಿಳಿಸಿದರು. ಮಹಾಮಂಡಳದ ನಿರ್ದೇಶಕ ರಾದ ಸತ್ತಿ ತ್ರಿನಾಥ್‌ ರೆಡ್ಡಿ, ರಾಜ್ಯದ ಮೊಟ್ಟೆ ಉತ್ಪಾದಕರಿಗೆ ಆದ್ಯತೆ ನೀಡಿ ವ್ಯವಸ್ಥಿತ ಮಾರು ಕಟ್ಟೆ ಕಲ್ಪಿಸಿಕೊಡಬೇಕಿದೆ. ಹೊರರಾಜ್ಯದಲ್ಲಿ ಕೋಳಿ ಆಹಾರ ಸಬ್ಸಿಡಿಯಲ್ಲಿ ಸಿಗುತ್ತಿದೆ. ಆದರೆ, ರಾಜ್ಯ ಸರ್ಕಾರದಲ್ಲಿ ಲಭ್ಯವಿಲ್ಲ.

ಹೀಗಾಗಿ, ಹೊರರಾಜ್ಯದಿಂದ ಬರುವ ಮೊಟ್ಟೆಗಳಿಗೆ ಕಡಿಮೆ ದರ ಇದ್ದು, ಮಾರಾಟಗಾರರಿಗೆ ಹೆಚ್ಚು ಲಾಭವಾಗಿ ಅವರುಗಳು ಹೊರರಾಜ್ಯದ ಉತ್ಪಾದಕರ ಮೊರೆ ಹೋಗುತ್ತಿದ್ದಾರೆ. ರಾಜ್ಯ ಸರ್ಕಾರವು ಹೊರರಾಜ್ಯದಿಂದ ಬರವ ಮೊಟ್ಟೆಗಳಿಗೆ ಹೆಚ್ಚುವರಿ ತೆರಿಗೆ ವಿಧಿಸಿದರೆ ನಮ್ಮಲ್ಲಿ ಮೊಟ್ಟೆ ಕೃಷಿಕರಿಗೆ ಅನುಕೂಲ ಆಗು ತ್ತದೆ. ಜತೆಗೆ ಮೊಟ್ಟೆಗೆ ಬೆಂಬಲ ಬೆಲೆಯನ್ನು ನೀಡಿ ಸಣ್ಣಮಟ್ಟದ ಫೌಲಿó ಹೊಂದಿದವರಿಗೆ ಅನುಕೂಲವಾಗುತ್ತದೆ ಎಂದು ಒತ್ತಾಯಿಸಿದರು. ಮಹಾಮಂಡಳದ ನಿರ್ದೇಶಕರಾದ ಎಂ.ಒ. ದೇವರಾಜ್‌, ಮಹಾಮಂಡಳದ ನಿರ್ದೇಶಕ ಬಿ.ಎಸ್‌.ರುದ್ರಮುನಿ ಇತರರು ಇದ್ದರು.

ಮೊಟ್ಟೆಯಿಂದ ಆರೋಗ್ಯ ವೃದ್ಧಿ-

ಪಶುವೈದ್ಯಕೀಯ ಕಾಲೇಜು ನಿವೃತ್ತ ಪ್ರಾಧ್ಯಾಪಕ ಡಾ. ಬಿ.ಎಸ್‌.ವೆಂಕಟರಾಮಿ ರೆಡ್ಡಿ ಮಾತನಾಡಿ, ವಾರ್ಷಿಕ ಒಬ್ಬ ವ್ಯಕ್ತಿ ವಿದೇಶದಲ್ಲಿ 200ಕ್ಕೂ ಅಧಿಕ ಮೊಟ್ಟೆ ಸೇವನೆ ಮಾಡುತ್ತಿದ್ದು, ಭಾರತದಲ್ಲಿ 80 ಮೊಟ್ಟೆ ಮಾತ್ರ ಸೇವಿಸುತ್ತಿದ್ದಾನೆ.

ಮೊಟ್ಟೆಯಲ್ಲಿ ಅತ್ಯಂತ ಕಡಿಮೆ ದರಕ್ಕೆ ಹೆಚ್ಚು ಪ್ರೋಟೀನ್‌, ಉತ್ತಮ ಆರೋಗ್ಯಕರ ಕೊಬ್ಬು ಸಿಗುತ್ತದೆ. ದಿನ ಒಂದು ಮೊಟ್ಟೆಯನ್ನು ನಮ್ಮ ಆಹಾರದ ಭಾಗವಾಗಿಸಿಕೊಳ್ಳಬೇಕು. ಕೊರೊನಾ ಸಂದರ್ಭದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಿ, ಪ್ರೊಟೀನ್‌ಗಾಗಿ ಸರ್ಕಾರವೇ ರೋಗಿಗಳಿಗೆ ಮೊಟ್ಟೆ ನೀಡಿತ್ತು. ಸರ್ಕಾರದ ಸೌಲಭ್ಯ ಬಳಸಿ ಮೊಟ್ಟೆ ಉತ್ಪಾದನೆ ಹೆಚ್ಚಿಸಿ ಎಂದು ರೈತರಿಗೆ ಕಿವಿ ಮಾತು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next