Advertisement

ಸಂವಿಧಾನದ ಮೇಲೆ ಪ್ರಮಾಣ ಮಾಡಿ ಮದುವೆ

12:29 AM Feb 18, 2020 | Hari Prasad |

ಸೆಹೋರ್‌: ದೇಶದ ಹಲವೆಡೆ ಸಂವಿಧಾನಕ್ಕೆ ಆಪತ್ತು ಇದೆ ಎಂದು ಪ್ರತಿಭಟನೆಗಳು ನಡೆಯುತ್ತಿರುವ ಮಧ್ಯೆಯೇ ಮಧ್ಯಪ್ರದೇಶದ ಜೋಡಿಯೊಂದು ಸಂವಿಧಾನದ ಮೇಲೆ ಪ್ರಮಾಣ ತೆಗೆದುಕೊಂಡು ಮದುವೆಯಾಗಿದೆ. ವ್ಯಕ್ತಿಯೊಬ್ಬರು ನವಜೋಡಿಗೆ, “ಸಂವಿಧಾನಕ್ಕೆ ಬದ್ಧರಾಗಿ ಬದುಕುತ್ತೇವೆ’ ಎಂಬ ಅಂಶಗಳನ್ನು ಒಳಗೊಂಡ ಪ್ರತಿಜ್ಞಾ ವಿಧಿ ಬೋಧಿಸಿದ್ದಾರೆ.

Advertisement

ಮದುವೆಯ ಮೆರವಣಿಗೆಯಲ್ಲೂ ಸಂವಿಧಾನದ ಪ್ರತಿಗಳನ್ನು ಹಿಡಿದು ಮೆರವಣಿಗೆ ಮಾಡಿದ್ದಾರೆ. ಅಲ್ಲದೇ ಮದುವೆಗೆ ಆಗಮಿಸಿದ್ದ ಅತಿಥಿಗಳೂ ತಾವು ಸಂವಿಧಾನದ ಆಶಯಗಳಿಗೆ ಬದ್ಧರಾಗಿ ಬದುಕುತ್ತೇವೆ ಎಂದು ಶಪಥ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next