Advertisement

ವಿಕಲಚೇತನರಿಗೆ ವಿಶಿಷ್ಟ ಗುರುತಿನ ಚೀಟಿ ಯೋಜನೆ

12:32 AM Jun 24, 2019 | sudhir |

ಉಡುಪಿ: ಭಾರತ ಸರಕಾರದ ವಿಕಲಚೇತನರಿಗೆ ವಿಶಿಷ್ಟ ಗುರುತಿನ ಚೀಟಿ (ಯುಡಿಐಡಿ- ಯುನಿಕ್‌ ಡಿಸೆಬಿಲಿಟಿ ಐಡಿ) ಯೋಜನೆಯಂತೆ ವಿಕಲಚೇತರಿಗೆ ಸಮಗ್ರ ಮಾಹಿತಿ ಹೊಂದಿದ ಚೀಟಿ ಒದಗಿಸಲಾಗುತ್ತಿದೆ ಎಂದು ಜಿಲ್ಲಾ ವಿಕಲಚೇತನ ಸಬಲೀಕರಣ ಅಧಿಕಾರಿ ನಿರಂಜನ ಭಟ್ ತಿಳಿಸಿದ್ದಾರೆ.

Advertisement

ಇದರಲ್ಲಿ ವಿಕಲಚೇತನ ವ್ಯಕ್ತಿಯ ವಿವರಗಳು ಹಾಗೂ ಅವರಲ್ಲಿರುವ ವಿಕಲತೆಯ ವಿವರ ಮತ್ತು ಪ್ರಮಾಣವನ್ನು ನಮೂದಿಸಲಾಗುತ್ತದೆ.

ಯೋಜನೆಯು ದೇಶದ ವಿಕಲಚೇತನರ ಅಂಕಿ ಸಂಖ್ಯೆಗಳ ಮಾಹಿತಿಯನ್ನು ನೀಡುತ್ತದೆ. ಸರಕಾರದ ಸೌಲಭ್ಯಗಳು ಪರಿಣಾಮಕಾರಿಯಾಗಿ ವಿಕಲಚೇತನರಿಗೆ ತಲುಪುವಂತೆ ಮಾಡುವುದು ಇದರ ಉದ್ದೇಶವಾಗಿದೆ. ರಾಜ್ಯ, ಜಿಲ್ಲೆ, ತಾಲೂಕು ಮತ್ತು ಗ್ರಾಮ ಮಟ್ಟದಲ್ಲಿ ಅಂಗವಿಕಲರು ಸೌಲಭ್ಯಗಳನ್ನು ಪಡೆಯುವಲ್ಲಿ ಪಾರದರ್ಶಕತೆ ಕಾಪಾಡುವುದು ಹಾಗೂ ಅವರ ಸಾಮಾಜಿಕ ಹಾಗೂ ಆರ್ಥಿಕ ಚಿತ್ರಣವನ್ನು ನೀಡಲು ಸಹಕಾರಿಯಾಗಲಿದೆ. ಚೀಟಿಯು ಆಧಾರ್‌ ಕಾರ್ಡ್‌ ನಷ್ಟೇ ಪ್ರಮುಖ ದಾಖಲೆಯಾಗಿದೆ.

ಈ ಯೋಜನೆಯನ್ನು ಸರಕಾರ 2019ರಿಂದ ಕಡ್ಡಾಯಗೊಳಿಸಿದೆ. ಪ್ರತಿಯೊಬ್ಬ ವಿಕಲಚೇತನ ವ್ಯಕ್ತಿಯು ಯೋಜನೆಯ ಅಡಿ ನೊಂದಣಿ ಮಾಡಿಕೊಂಡು ಚೀಟಿಯನ್ನು ಪಡೆದುಕೊಳ್ಳುವಂತೆ ಆದೇಶಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next