Advertisement

ಅಸಂಘಟಿತ ಕಾರ್ಮಿಕರಿಗೆ ವಿಶಿಷ್ಟ  ಗುರುತು ಸಂಖ್ಯೆ

07:20 AM Aug 25, 2021 | Team Udayavani |

ಹೊಸದಿಲ್ಲಿ: ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ದೇಶದ ಅಸಂಘಟಿತ ವಲಯದ ಪ್ರತಿ ಯೊಬ್ಬ ಕಾರ್ಮಿಕ ನಿಗೂ 12 ಅಂಕಿಗಳ ವಿಶಿಷ್ಟ ಗುರುತು ಸಂಖ್ಯೆಯನ್ನು ಒದಗಿಸಲಿದೆ.

Advertisement

ದೇಶದಲ್ಲಿ 3.80 ಕೋಟಿ ಅಸಂಘಟಿತ ಕಾರ್ಮಿಕರಿದ್ದು, ಅವರ ರಾಷ್ಟ್ರೀಯ ಮಾಹಿತಿ ಕೋಶ ರೂಪಿಸುವ ಪ್ರಯತ್ನದ ಭಾಗ ವಾಗಿ ಇದು ನಡೆಯಲಿದೆ. ಆ. 26ರಂದು ಇದಕ್ಕೆ ಚಾಲನೆ ಸಿಗಲಿದೆ.

ವಿವಿಧ ಕಾರಣಗಳಿಂದಾಗಿ ಇದರ ಆರಂಭ ವಿಳಂಬವಾಗಿದ್ದು, ಈ ಬಗ್ಗೆ ಸುಪ್ರೀಂ ಕೋರ್ಟ್‌ ಬೇಸರ ವ್ಯಕ್ತಪಡಿಸಿತ್ತು. ಇದರಡಿ ಅಸಂಘಟಿತ ಕಾರ್ಮಿಕರು ನೋಂದಾಯಿಸಿಕೊಳ್ಳಬೇಕಿದ್ದು , ಎಲ್ಲರಿಗೂ ವಿಶಿಷ್ಟ ಗುರುತು ಸಂಖ್ಯೆ ಮತ್ತು ಕಾರ್ಡ್‌ ನೀಡಲಾಗುತ್ತದೆ. ವಿವಿಧ ಸೌಲಭ್ಯಗಳ ವಿತರಣೆ, ಕಲ್ಯಾಣ ಯೋಜನೆಗಳನ್ನು ಅವರಿಗೆ ಒದಗಿಸಲು ಇದರಿಂದ ಸುಲಭ ಸಾಧ್ಯವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next