Advertisement

ಕಾಳಗಿ ಬಂದ್‌ಗೆ ಬಜಾರ್‌ ಯೂನಿಯನ್‌ ಬೆಂಬಲ

03:43 PM Mar 04, 2017 | |

ಕಾಳಗಿ: ಬರುವ ಬಜೆಟ್‌ ಅಧಿವೇಶನದಲ್ಲಿ ಘೋಷಿತ ತಾಲೂಕು ಕೇಂದ್ರವಾಗಿರುವ ಕಾಳಗಿಯನ್ನು ಅಧಿಕೃತ ತಾಲೂಕೆಂದು ಘೋಷಿಸುವಂತೆ ಮಾ. 7ರಂದು ಜೈ ಕನ್ನಡಿಗರ ರಕ್ಷಣಾ ವೇದಿಕೆ ಕರೆ ನೀಡಿರುವ ಬಂದ್‌ ಗೆ ಬೆಂಬಲ ನೀಡುವುದಾಗಿ ಶ್ರೀ ನೀಲಕಂಠ ಕಾಳೇಶ್ವರ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಚಂದ್ರಕಾಂತ ವನಮಾಲಿ ತಿಳಿಸಿದ್ದಾರೆ.

Advertisement

ಇಲ್ಲಿನ ನೀಲಕಂಠ ಕಾಳೇಶ್ವರ ವ್ಯಾಪಾರಸ್ಥರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕಾಳಗಿ ಪಟ್ಟಣವು ಸುತ್ತಮುತ್ತಲಿನ ಸುಮಾರು 50ಕ್ಕೂ ಹೆಚ್ಚಿನ ಗ್ರಾಮಗಳಿಗೆ ಕೇಂದ್ರ ಸ್ಥಾನವಾಗಿದೆ. ದಿನನಿತ್ಯ ವ್ಯಾಪಾರ ವಹಿವಾಟು, ಕಚೇರಿ ಕೆಲಸಗಳಿಗೆ ಸಾವಿರಾರು ಜನರು ಪಟ್ಟಣಕ್ಕೆ ಆಗಮಿಸುತ್ತಾರೆ.

ಹೀಗಾಗಿ ರಾಜ್ಯ ಸರಕಾರ ಕಾಳಗಿಯನ್ನು ಅಧಿಕೃತವಾಗಿ ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಬೇಕು. ಈ ಹಿನ್ನೆಲೆಯಲ್ಲಿ ನಡೆಯಲಿರುವ ಬಂದ್‌ಗೆ ಅಂಗಡಿ ಮುಂಗಟ್ಟುಗಳನ್ನು ಬಂದ್‌ ಮಾಡಿ ಪ್ರತಿಭಟನೆಯಲ್ಲಿ ಭಾಗವಹಿಸುವುದಾಗಿ ತಿಳಿಸಿದರು. 

ವ್ಯಾಪಾರಸ್ಥರ ಸಂಘದ ಕಾರ್ಯದರ್ಶಿ ನಾಗಣ್ಣ ಟೆಂಗಳಿ, ಶಿವಶರಣಪ್ಪ ಕಮಲಾಪುರ, ವಿಶ್ವನಾಥ ವನಮಾಲಿ, ಸತ್ಯನಾರಾಯಣ ವನಮಾಲಿ, ವೀರೇಶ ಕಣ್ಣಿ, ರಾಜಶೇಖರಕುಡ್ಡಳ್ಳಿ, ಸಿದ್ಧರಾಜ ವನಮಾಲಿ, ಸಂತೋಷ ವನಮಾಲಿ, ಪರಮೇಶ್ವರ ವನಮಾಲಿ, ರಾಜು ಮಳಗಿ, ಶಂಕ್ರಯ್ಯಸ್ವಾಮಿ ದೇವಾಂಗಮಠ, ಕಾಂತಪ್ಪ ಅಲ್ಲಾಪುರ, ಮಹಾದೇವ ಅಷ್ಟಗಿ, ಮಾರುತಿ ಪತಂಗೆ, ಧರ್ಮೇಂದ್ರ ಪತಂಗೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next