Advertisement

ಎಲ್ಲರಿಗೂ ಆರೋಗ್ಯ ರಾಷ್ಟ್ರೀಯ ಆರೋಗ್ಯನೀತಿ ಗುರಿ

08:05 AM Aug 14, 2017 | Harsha Rao |

ಮಂಗಳೂರು: ಎಲ್ಲರಿಗೂ ಆರೋಗ್ಯದ ಗುರಿಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ರಾಷ್ಟ್ರೀಯ ಆರೋಗ್ಯ ನೀತಿ -2017 ರೂಪಿಸಿದ್ದು ಇದರ ಯಶಸ್ವಿ ಅನುಷ್ಠಾನದಲ್ಲಿ ಸರ್ವರ ಸಹಭಾಗಿತ್ವ ಅವಶ್ಯ ಎಂದು ಕೇಂದ್ರ ಆಯುಷ್‌ ಖಾತೆಯ ರಾಜ್ಯ ಸಚಿವ ಶ್ರೀಪಾದ ಯೆಸೊÕà ನಾಯಕ್‌ ಹೇಳಿದರು.

Advertisement

ದೇರಳಕಟ್ಟೆ ಯೇನಪೊಯ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನೂತನವಾಗಿ ಅನುಷ್ಠಾನಗೊಳಿಸಲಾದ 3 ಟೆಸ್ಲಾ ಎಂಆರ್‌ಐ ಯಂತ್ರ ಹಾಗೂ ಕ್ಯಾಥ್‌ಲ್ಯಾಬ್‌ ಸೌಲಭ್ಯಗಳನ್ನು ರವಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ಮಹತ್ವದ ಮಾರ್ಗಸೂಚಿ ರಾಷ್ಟ್ರೀಯ ಆರೋಗ್ಯ ನೀತಿ – 2017 ದೇಶದ ಎಲ್ಲ ವೈದ್ಯಕೀಯ ವೃತ್ತಿಯಲ್ಲಿರುವವರಿಗೆ ಒಂದು ಮಹತ್ವದ ಮಾರ್ಗಸೂಚಿ ದಾಖಲೆಯಾಗಿದೆ. ದೇಶದಲ್ಲಿ ಅವಕಾಶ ವಂಚಿತರು ಮತ್ತು ಬಡವರ್ಗಕ್ಕೆ ವಿಶೇಷ ಆದ್ಯತೆ ನೀಡಿ ರೂಪಿಸಿರುವ ಆರೋಗ್ಯ ನೀತಿ ಜಿಡಿಪಿಯಲ್ಲಿ ಶೇ. 2.5ರಷ್ಟು ಭಾಗವನ್ನು ಸಾರ್ವಜನಿಕ ಆರೋಗ್ಯ ಕ್ಷೇತ್ರದ ಸುಧಾರಣೆಗೆ ವಿನಿಯೋಗಿಸುವ ಗುರಿ ಹೊಂದಿದೆ ಎಂದರು.

ಸರ್ವರಿಗೂ ಆರೋಗ್ಯದ ಗುರಿ ಸಾಕಾರದಲ್ಲಿ ಸಮಸ್ತ ವೈದ್ಯಕೀಯ ಸಮುದಾಯ ಕೈಜೋಡಿಸಬೇಕು. ಈ ದಿಶೆಯಲ್ಲಿ ಹೊಸ ಆರೋಗ್ಯ ನೀತಿ ವೈದ್ಯಕೀಯ ವೃತ್ತಿಯನ್ನು ಹೊಸ ದೃಷ್ಟಿಕೋನದಿಂದ ನೋಡಲು ಸಹಕಾರಿಯಾಗಿದೆ ಮತ್ತು ದೇಶದ ಪ್ರಗತಿಯಲ್ಲಿ ಅವರ ಭಾಗೀದಾರಿಕೆಯ ಮಹತ್ವವನ್ನು ಮನದಟ್ಟು ಮಾಡುತ್ತದೆ ಎಂದು ಶ್ರೀಪಾದ ಯೆಸೊÕà ನಾಯಕ್‌ ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಅನಿವಾಸಿ ಭಾರತೀಯ ಉದ್ಯಮಿ ಡಾ| ಬಿ.ಆರ್‌. ಶೆಟ್ಟಿ ಅವರು ಯೇನಪೊಯ ವೈದ್ಯಕೀಯ ಶಿಕ್ಷಣ ಸಂಸ್ಥೆ ಗುಣಮಟ್ಟದ ಸೇವೆಯ ಮೂಲಕ ಜನಪ್ರಿಯತೆ ಗಳಿಸಿದೆ ಎಂದರು.

ಸಮಗ್ರ ಆಯುಷ್‌ ಸಂಕೀರ್ಣ: 
ಅಬ್ದುಲ್ಲಾ ಕುಂಞಿ ಅಧ್ಯಕ್ಷತೆ ವಹಿಸಿದ್ದ ಯೇನಪೊಯ ವಿ.ವಿ. ಕುಲಾಧಿಪತಿ ಯೇನಪೊಯ ಅಬ್ದುಲ್ಲಾ ಕುಂಞಿ ಅವರು ಮಾತನಾಡಿ, ಅತ್ಯಾಧುನಿಕ ವೈದ್ಯಕೀಯ ಸೇವೆಗಳ ಮೂಲಕ ರೋಗಿಗಳಿಗೆ ಗುಣಮಟ್ಟದ ಆರೋಗ್ಯಸೇವೆ ನೀಡುವುದು ಸಂಸ್ಥೆಯ ಧ್ಯೇಯವಾಗಿದೆ. ಆಸ್ಪತ್ರೆಯಲ್ಲಿ ಕರ್ನಾಟಕ-ಕೇರಳದ ಮಲಬಾರ್‌ ಕರಾವಳಿ ಭಾಗ ಹಾಗೂ ಮಲೆನಾಡು ಜಿಲ್ಲೆಗಳಲ್ಲೇ ಪ್ರಥಮ ಎಂಬಂತೆ ಅತ್ಯಾಧುನಿಕ ತಂತ್ರಜ್ಞಾನದ 3 ಟೆಸ್ಲಾ ಎಂಆರ್‌ಐ ಯಂತ್ರವನ್ನು ಅಳವಡಿಸಿದೆ. ಇಲ್ಲಿ ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯ ಗಳು ಲಭ್ಯವಾಗಲಿವೆ ಎಂದರು.

Advertisement

ಯೇನಪೊಯ ವೈದ್ಯಕೀಯ ಸಂಸ್ಥೆ ಮಂಗಳೂರು ತಾಲೂಕಿನ ಕಿನ್ಯಾದಲ್ಲಿ ಸುಸಜ್ಜಿತ ಸಮಗ್ರ ಆಯುಶ್‌ ಸಂಕೀರ್ಣವನ್ನು ಸ್ಥಾಪಿಸಲಿದೆ.ಇದರಲ್ಲಿ ಆಯುರ್ವೇದ, ಯುನಾನಿ, ಹೋಮಿಯೋಪಥಿ ಸೇರಿದಂತೆ ಸಮಗ್ರ ಆಯುಶ್‌ ಸೇವೆಗಳು ಲಭ್ಯವಾಗಲಿದೆ ಎಂದರು. ಸಚಿವರಾದ ಬಿ. ರಮಾನಾಥ ರೈ, ಯು.ಟಿ. ಖಾದರ್‌, ಐಎಇ ಮತ್ತು ವೈಎಂಕೆ ಪ್ರತಿಷ್ಠಾನದ ಅಧ್ಯಕ್ಷ ವೈ. ಮಹಮ್ಮದ್‌ ಕುಂಞಿ ಅತಿಥಿಗಳಾಗಿ ದ್ದರು. ರಿಜಿಸ್ಟ್ರಾರ್‌ ಡಾ| ಶ್ರೀಕುಮಾರ್‌ ಮೆನನ್‌ ಉಪಸ್ಥಿತರಿದ್ದರು. ವಿ.ವಿ. ಉಪಕುಲಪತಿ ಡಾ| ಎಂ. ವಿಜಯ ಕುಮಾರ್‌ ಸ್ವಾಗತಿಸಿದರು. ಆಸ್ಪತ್ರೆಯ ಚೀಫ್‌ ಆಪರೇಟಿಂಗ್‌ ಆಫೀಸರ್‌ ಡಾ| ಮುಹಮ್ಮದ್‌ ಅಮೀನ್‌ ವಾನಿ ವಂದಿಸಿದರು. ಡಾ| ಮಲ್ಲಿಕಾ ಶೆಟ್ಟಿ ನಿರೂಪಿಸಿದರು.

ಶ್ಲಾಘನೀಯ ಸೇವೆ
ಯೇನಪೊಯ ವಿಶ್ವವಿದ್ಯಾನಿಲಯ ಹಾಗೂ ಯೇನಪೊಯ ವೈದ್ಯಕೀಯ ಕಾಲೇಜು ಆಸ್ಪತ್ರೆ ಗುಣಮಟ್ಟದ ಸೇವೆಯ
ಮೂಲಕ ಗಮನ ಸೆಳೆದಿದೆ. ವಿಶ್ವವಿದ್ಯಾನಿಲಯ ಮೂಲಸೌಲಭ್ಯಗಳು ಹಾಗೂ ಉನ್ನತ ಗುಣಮಟ್ಟದ ಶಿಕ್ಷಣ ಮೂಲಕ ಹೊಸ ವಿಶ್ವವಿದ್ಯಾನಿಲಯಗಳಲ್ಲಿ ಮುಂಚೂಣಿಯ ಸ್ಥಾನದಲ್ಲಿದೆ. ದೇಶದ ಪ್ರತಿಯೋರ್ವ ನಾಗರಿಕನೂ ಆರೋಗ್ಯಭರಿತ ಜೀವನ ನಡೆಸಬೇಕು ಎಂಬುದು ಸರಕಾರದ ಧ್ಯೇಯವಾಗಿದ್ದು ಇದರ ಸಾಕಾರದಲ್ಲಿ ಯೇನಪೊಯ ವೈದ್ಯಕೀಯ ಆಸ್ಪತ್ರೆ ನೀಡುವ ಕೊಡುಗೆ ಶ್ಲಾಘನೀಯ. 
– ಸಚಿವ ಶ್ರೀಪಾದ ಯೆಸೊÕà ನಾಯಕ್‌ 

Advertisement

Udayavani is now on Telegram. Click here to join our channel and stay updated with the latest news.

Next