Advertisement

ರಾಜ್ಯದ ನಿಯೋಗಕ್ಕೆ ಸ್ಪಂದಿಸಿದ ಕೇಂದ್ರ ಸಚಿವ ಪಿಯುಷ್ ಗೋಯಲ್

07:04 PM Jul 19, 2022 | Team Udayavani |

ರಬಕವಿ-ಬನಹಟ್ಟಿ: ಕೇಂದ್ರ ಸರ್ಕಾರದ ನಿಯಮದಂತೆ ಪವರ್ ಲೂಮ್ ಮಗ್ಗಗಳ ಮೇಲೆ ಕೇವಲ ಬಿಳಿ ಬಟ್ಟೆಯನ್ನು ಮಾತ್ರ ಉತ್ಪಾದನೆ ಮಾಡಬೇಕು. ಕರಿ ಮತ್ತು ರೇಷ್ಮೆ ಬಟ್ಟೆಯನ್ನು ಕೈಮಗ್ಗದ ಮೇಲೆ ಉತ್ಪಾದನೆ ಮಾಡಬೇಕು. ಈ ನಿಮಿತ್ತವಾಗಿ ಕೇಂದ್ರದ ತಂಡವೊಂದು ರಾಜ್ಯಕ್ಕೆ ಭೇಟಿ ನೀಡಿ ಪವರ್ ಲೂಮ್ ಮಗ್ಗಗಳ ಮೇಲೆ ಕರಿ ಬಟ್ಟೆಯನ್ನು ಉತ್ಪಾದನೆ ಮಾಡುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಸಜ್ಜಾಗಿತ್ತು.

Advertisement

ಆದ್ದರಿಂದ ಕೇಂದ್ರ ಸಚಿವೆ ಪ್ರಹ್ಲಾದ್ ಜೋಶಿ, ಬಾಗಲಕೋಟೆ ಸಂಸದ ಪಿ.ಸಿ.ಗದ್ದಿಗೌಡರ, ತೇರದಾಳ ಶಾಸಕ ಸಿದ್ದು ಸವದಿ, ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ, ಕೊಪ್ಪಳದ ಸಂಸದ ಸಂಗಣ‍್ಣ ಕರಡಿ, ಲೆಹರ್ ಸಿಂಗ್ ಸೇರಿದಂತೆ ರಾಜ್ಯದ ನಿಯೋಗ ಕೇಂದ್ರ ಜವಳಿ ಸಚಿವ ಪಿಯುಷ್ ಗೋಯಲ್ ಅವರನ್ನು ಭೇಟಿ ಮಾಡಿ ಈ ನಿಯಮವನ್ನು ಸಡಲಿಕೆಗೊಳಿಸುವಂತೆ ಮನವಿ ಸಲ್ಲಿಸಿತ್ತು.

ಈ ಕುರಿತು ಕೇಂದ್ರ ಜವಳಿ ಇಲಾಖೆಯು ರಾಜ್ಯ ಜವಳಿ ಇಲಾಖೆಯ ಆಯುಕ್ತರಿಗೆ ಪತ್ರ ಬರೆದು ಕರಿ ಮತ್ತು ಬಿಳಿ ಕುರಿತು ಇದೇ ತಿಂಗಳು ಕೇಂದ್ರದ ನಿಯೋಗ ರಬಕವಿ ಬನಹಟ್ಟಿಗೆ ಭೇಟಿ ನೀಡುವುದಿತ್ತು. ಆದರೆ ಈ ಭೇಟಿಯನ್ನು ಮುಂದೂಡಲಾಗಿದೆ ಎಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಶಾಸಕ ಸಿದ್ದು ಸವದಿ ಪತ್ರಿಕೆಯ ಜೊತೆಗೆ ದೂರವಾಣಿಯ ಮೂಲಕ ಮಾತನಾಡಿ‌, ಕೇಂದ್ರದ ಜವಳಿ ಸಚಿವರು ನಮ್ಮ ಮನವಿಗೆ ಸ್ಪಂದಿಸಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯದ ನೇಕಾರರ ಮತ್ತು ನೇಕಾರಿಕೆಯ ಉದ್ಯೋಗದ ಅಭಿವೃದ್ಧಿಗಾಗಿ ಸಹಕರಿಸುವುದಾಗಿಯೂ ಹೇಳಿದ್ದಾರೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next