ಬಂಟ್ವಾಳ: ಕೇಂದ್ರ ಸರಕಾರದ ಅನುದಾದಿಂದ ನಡೆಯುವ ಜಿಲ್ಲೆಯ ವಿವಿಧ ಹೆದ್ದಾರಿಗಳು, ಫ್ಲೆ$çಓವರ್ ಹಾಗೂ ಸೇತುವೆ ಕಾಮಗಾರಿಗಳಿಗೆ ವೇಗ ನೀಡುವ ನಿಟ್ಟಿನಲ್ಲಿ ನವೆಂಬರ್ ಅಂತ್ಯದೊಳಗೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ದ.ಕ. ಜಿಲ್ಲೆಗೆ ಆಗಮಿಸಲಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
ಅವರು ಶನಿವಾರ ಬಿ.ಸಿ.ರೋಡಿನಲ್ಲಿ ನಡೆದ ಸಾಲ ಸಂಪರ್ಕ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಿ.ಸಿ.ರೋಡು- ಅಡ್ಡಹೊಳೆ ಹೆದ್ದಾರಿಯ ಎರಡೂ ಹಂತದ ಕಾಮಗಾರಿಗಳು ಈಗಾಗಲೇ ಆರಂಭಗೊಂಡಿದ್ದು, ಕುಲಶೇಖರ- ಮೂಡಬಿದಿರೆ -ಸಾಣೂರು ಹೆದ್ದಾರಿ ಅಭಿವೃದ್ಧಿ ಟೆಂಡರ್ ಹಂತಕ್ಕೆ ಬಂದಿದೆ. ಮಂಗಳೂರು ಕೆಪಿಟಿ ಜಂಕ್ಷನ್ ಬಳಿಗೆ ಫ್ಲೆ$çಓವರ್ ಮಂಜೂರಾಗಿದೆ. ಕೂಳೂರು ಸೇತುವೆ ಕಾಮಗಾರಿಯೂ ಆರಂಭವಾಗಿದೆ. ಬಿ.ಸಿ.ರೋಡು-ಪೊಳಲಿ-ಕಟೀಲು-ಮೂಲ್ಕಿ ಹೆದ್ದಾರಿ ಮಂಜೂರಾತಿಯ ಹಂತದಲ್ಲಿದೆ. ಪುಂಜಾಲಕಟ್ಟೆ-ಚಾರ್ಮಾಡಿ ಹೆದ್ದಾರಿ ಅಭಿವೃದ್ಧಿ ಟೆಂಡರ್ ಹಂತಕ್ಕೆ ಬಂದಿದೆ ಎಂದರು.
ಇದನ್ನೂ ಓದಿ:ಟಿ20 ವಿಶ್ವಕಪ್: ಬಟ್ಲರ್ ಬ್ಯಾಟಿಂಗಿಗೆ ನಡುಗಿದ ಆಸೀಸ್
ಜಿಲ್ಲೆಯಲ್ಲಿ ಫ್ಲಾಸ್ಟಿಕ್ ಪಾರ್ಕ್ ನಿರ್ಮಾಣಕ್ಕೆ ವೇಗ ದೊರಕಲಿದ್ದು, ಕೋಸ್ಟ್‌ಗಾರ್ಡ್ ಟ್ರೈನಿಂಗ್ ಸೆಂಟರ್ ಮಂಜೂರಾಗಿ ಈಗಾಗಲೇ ಜಿಲ್ಲಾಧಿಕಾರಿಗಳ ಮೂಲಕ ಜಾಗ ಗುರುತಿಸುವ ಕಾರ್ಯವೂ ಅಂತಿಮಗೊಂಡಿದೆ. ಮಾರ್ಚ್ ಒಳಗೆ ಈ ಸೆಂಟರ್ ನಿರ್ಮಾಣಕ್ಕೆ ಶಿಲಾನ್ಯಾಸ ನಡೆಯಲಿದೆ ಎಂದು ನಳಿನ್‌ತಿಳಿಸಿದರು.