Advertisement

ಬಿಜೆಪಿ ರಾಜ್ಯದಲ್ಲಿ ಸುಭದ್ರ ಸರ್ಕಾರ ನೀಡಿದೆ

01:33 PM Apr 27, 2023 | Team Udayavani |

ದೊಡ್ಡಬಳ್ಳಾಪುರ: ಭಯೋತ್ಪಾದಕರೊಂದಿಗೆ ಕೈ ಜೋಡಿಸಿರುವ ಪಿಎಫ್‌ಐ ಮತ್ತು ಎಸ್‌ಡಿಪಿಐ ಸಂಘಟನೆಗಳಿಗೆ ಸಿದ್ದರಾಮಯ್ಯ ಸರ್ಕಾರ ಓಟ್‌ ಬ್ಯಾಂಕ್‌ ರಾಜಕಾರಣಕ್ಕಾಗಿ ಪಾಲನೆ ಪೋಷಣೆ ಮಾಡಿದ್ದು, ಈ ಎಲ್ಲವನ್ನೂ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ದಮನ ಮಾಡಿ, ರಾಜ್ಯದಲ್ಲಿ ಸುಭದ್ರ ಸರ್ಕಾರ ನೀಡಿದೆ ಎಂದು ಕೇಂದ್ರ ಸಂಪರ್ಕ ಖಾತೆ ರಾಜ್ಯ ಸಚಿವ ದೇವು ಸಿನ್ಹಾ ಚೌಹಾಣ್‌ ಹೇಳಿದರು.

Advertisement

ನಗರದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಸುದ್ದಿ ಗೋಷ್ಠಿ ಯಲ್ಲಿ ಮಾತನಾಡಿ, ನಮ್ಮ ಸರ್ಕಾರ ಧರ್ಮ ಪ್ರೇಮಿ ಸರ್ಕಾರವಾಗಿದ್ದು, ಧಾರ್ಮಿಕ ಕೇಂದ್ರಗಳ ಪ್ರವಾಸ ನೀಡಿದೆ. ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಉತ್ತಮ ಆಳ್ವಿಕೆಯನ್ನು ನೀಡಲಾಗುತ್ತಿದೆ. ಡಬಲ್‌ ಎಂಜಿನ್‌ ಸರ್ಕಾರದಿಂದಾಗಿ ರಾಜ್ಯದಲ್ಲಿ ಶಿಕ್ಷಣ, ಆರೋಗ್ಯ, ರಸ್ತೆ, ಇಂಟರ್ನೆಟ್‌ ಮತ್ತಿತರ ಯೋಜನೆ ಮೂಲಕ ನವ ಕರ್ನಾಟಕದ ರೀತಿಯಲ್ಲಿ ಅಭಿವೃದ್ಧಿ ಮಾಡಲಾಗಿದೆ.ಸಿದ್ದ ರಾಮಯ್ಯ ಸರ್ಕಾರ ಅವಧಿಯಲ್ಲಿ ಉಂಟಾದ ಅಂತಹಪತನದಿಂದ ರಾಜ್ಯವನ್ನು ಮೇಲೆತ್ತಿ ಜನಪರ ಯೋಜನೆ ನೀಡ ಲಾಗಿದೆ. ರಾಜ್ಯ ಹಾಗೂ ಕೇಂದ್ರದ ಸರ್ಕಾರಗಳಿಂದ ರಾಜ್ಯದ ಅಭಿವೃದ್ಧಿಯಾಗುತ್ತಿದ್ದು, ರಾಜ್ಯದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬೆಂಗಳೂರು ಗ್ರಾಮಾಂತರ ಜಿಲ್ಲಾಸ್ಪತ್ರೆ ಯನ್ನು ದೊಡ್ಡಬಳ್ಳಾ ಪುರದಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗುವುದು ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಕಳೆದ ಎರಡು ದಿನಗಳಿಂದ ಪ್ರವಾಸ ನಡೆಸಲಾಗಿದ್ದು, ಬಿಜೆಪಿ ಅಧಿಕಾರಕ್ಕೆ ತರಲು ದೊಡ್ಡ ಬಳ್ಳಾಪುರದ ಜನತೆ ತೀರ್ಮಾನಿಸಿರುವುದು ಕಂಡು ಬಂದಿದೆ.

ಚುನಾವಣೆ ಸಂದರ್ಭದಲ್ಲಿ ಪಕ್ಷಾಂತರ ಸಹಜ: ಚುನಾವಣೆ ಸಂದರ್ಭದಲ್ಲಿ ಪಕ್ಷಾಂತರ ಸಹಜ. ಬಿಜೆಪಿ ಪಕ್ಷ ವಿಶ್ವದ ನಂಬರ್‌ ಒನ್‌ ಪಕ್ಷವಾಗಿದ್ದು, ಪಕ್ಷ ಬಿಟ್ಟು ಹೋದವರಿಂದ ಯಾವುದೇ ಧಕ್ಕೆ ಯಾಗಲ್ಲ ಎಂದರು.

ಮಾದ್ಯಮ ವಕ್ತಾರ ಪ್ರಶಾಂತ್‌ ಮಾತನಾಡಿ, ದೊಡ್ಡಬಳ್ಳಾಪುರದ ಅಭಿವೃದ್ಧಿ ವಿಚಾರದ ಕುರಿತು ಯಾವುದೇ ತಾರತಮ್ಯ ಮಾಡಿಲ್ಲ. ಕೇಂದ್ರ ಹಾಗೂ ರಾಜ್ಯದ ಎಲ್ಲಾ ಯೋಜನೆಗಳನ್ನು ಜನತೆಗೆ ತಲು ಪಿಸಲಾಗುತ್ತಿದೆ. ನಾಡಪ್ರಭು ಕೆಂಪೇಗೌಡರ ಪ್ರತಿಮೆ ಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಿಲ್ಲಿಸಿದರು, ಜಿಲ್ಲೆಯಲ್ಲಿ ವಕ್ಕಲಿಗರಿಗೆ ಟಿಕೆಟ್‌ ನೀಡಿಲ್ಲ ಎಂಬ ಕುರಿತು ಸಮುದಾಯದಲ್ಲಿ ಯಾವುದೇ ಬೇಸರವಿಲ್ಲ. ಟಿಕೆಟ್‌ ಹಂಚಿಕೆಯಲ್ಲಿ ಎಲ್ಲಾ ಸಮುದಾಯ ಗಳಿಗೆ ಮಾನ್ಯತೆ ನೀಡಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ವಿಧಾನಪರಿಷತ್‌ ಸದಸ್ಯ ಆ. ದೇವೇಗೌಡ ಮತ್ತಿತರರಿದ್ದರು.

Advertisement

ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ದೇಶದ ಅಭಿ ವೃದ್ಧಿಯ ದಿಕ್ಕು ಬದಲಾಗಿದೆ. ಗಡಿ ಸಮಸ್ಯೆ, ಉಗ್ರಗಾಮಿಗಳ ಹಾವಳಿ, ಕೋವಿಡ್‌ ನಿರ್ವಹಣೆಯನ್ನು ದೇಶದ ಜನತೆ ಮೆಚ್ಚಿದ್ದಾರೆ. ಡಾ.ಸತೀಶ್‌ ಸುಭಾಶ್ಚಂದ್ರ ಪುಣ್ಯ, ರಾಜಸ್ಥಾನ ವಿಧಾನಸಭೆ ಶಾಸಕ

 

Advertisement

Udayavani is now on Telegram. Click here to join our channel and stay updated with the latest news.

Next