ಬೆಂಗಳೂರು: ಯಾವ ಕಾರ್ಯಕರ್ತನಿಗೆ ಬದ್ದತೆ ಇದೆ, ಹಿಂದುತ್ವ ಪ್ರತಿಪಾದನೆ ಮಾಡುತ್ತಾನೋ ಅವನಿಗೆ ಪಕ್ಷ ಜವಾಬ್ದಾರಿ ನೀಡುತ್ತದೆ. ಇದಕ್ಕೆ ನಾನೇ ಉದಾಹರಣೆ. ಪ್ರಧಾನಿ ಮೋದಿ, ಅಮಿತ್ ಶಾ, ಸಂತೋಷ್ ಅವರು ಗುರುತಿಸಿದ್ದಾರೆ. ಸಂಪುಟದಲ್ಲಿ ಅವಕಾಶ ಮಾಡಿಕೊಟ್ಟಿದ್ದಾರೆ. ಕೇಂದ್ರದ ಎಲ್ಲಾ ಮುಖಂಡರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಕೇಂದ್ರ ಸಚಿವ ನಾರಾಯಣ ಸ್ವಾಮಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದ ಮೋದಿ ಸಂಪುಟದಲ್ಲಿ ರಾಜ್ಯದ ಜನ ನನ್ನನ್ನು ಊಹಿಸಿರಲಿಲ್ಲ. ನನಗಿಂತ ಅನೇಕ ಹಿರಿಯರಿದ್ದರು. ಪಕ್ಷದ ಸಿದ್ಧಾಂತಕ್ಕೆ ಕೆಲಸ ಮಾಡಿದ ಅನೇಕರಿದ್ದರು. ಆದರೆ ನನಗೆ ದೆಹಲಿಗೆ ಬನ್ನಿ ಚರ್ಚೆ ಮಾಡಬೇಕು ಅಂತ ಮೋದಿ ಆಹ್ವಾನ ನೀಡಿದರು ಎಂದರು.
ಇದನ್ನೂ ಓದಿ:‘ಪಾಲಿಕೆ ವೈದ್ಯರು ನಿಮ್ಮ ಮನೆ ಬಾಗಿಲಿಗೆ’ ಕಾರ್ಯಕ್ರಮಕ್ಕೆ ಸಚಿವ ಅಶೋಕ್ ಚಾಲನೆ
ಬಿಜೆಪಿ ಬಗ್ಗೆ ಅನೇಕ ವ್ಯಾಖ್ಯಾನ ಇತ್ತು. ಬ್ರಾಹ್ಮಣರ ಪಕ್ಷ ಅಂತ ಹೇಳಲಾಗಿತ್ತು. ಚುನಾವಣಾ ಪೂರ್ವ ಘೋಷಣೆ ಮಾಡುವ ಪರಂಪರೆ ಇತ್ತು. 2013ರಲ್ಲಿ ಗುಜರಾತ್‌ನ ಸಿಎಂ ಮೋದಿ ಹೆಸರನ್ನು ಪ್ರಧಾನಿಯಾಗಿ ಘೋಷಣೆ ಮಾಡಲಾಯಿತು. ಈ ಮೂಲಕ ಹಿಂದುಳಿದ ನಾಯಕನನ್ನ ಪ್ರಧಾನಿ ಹೆಸರಿಗೆ ಸೂಚಿಸಲಾಯ್ತು. ಈ ದೇಶದಲ್ಲಿ ಅನೇಕ ವರ್ಷಗಳು ಕಾಂಗ್ರಸ್ ಆಡಳಿತ ಮಾಡಿದೆ. ದಲಿತರಿಗೆ ಅಧಿಕಾರ ನೀಡಿದ್ದು ದುರ್ಬಿನ್ ಹಾಕಿ ನೋಡಿದ್ರು ಸಿಗೋದಿಲ್ಲ. ಆದರೆ ನಮ್ಮಲ್ಲಿ ದಲಿತರನ್ನು ರಾಷ್ಟ್ರಪತಿ, ರಾಜ್ಯಪಾಲರನ್ನಾಗಿ ಮಾಡಲಾಗಿದೆ ಎಂದರು.
ವಿಧಾನಸಭಾ ಚುನಾವಣೆಯಲ್ಲಿ ನಾನು ಸೋತೆ. ಆದರೆ ಒಂದೇ ವರ್ಷದಲ್ಲಿ ಲೋಕಸಭೆಗೆ ಟಿಕೆಟ್ ನೀಡಿದರು. ಹೊರಗಿನವನು ಎಂದೂ ನೋಡದೆ ಜನ ಗೆಲ್ಲಿಸಿದ್ದರು ಎಂದು ನಾರಯಣ ಸ್ವಾಮಿ ಹೇಳಿದರು.