Advertisement

Bommai; ಬೊಮ್ಮಾಯಿ ದಿಢೀರ್‌ ದಿಲ್ಲಿಗೆ: ಇಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಭೇಟಿ ಸಾಧ್ಯತೆ

04:16 PM Aug 07, 2023 | Team Udayavani |

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾ ವಣೆಯ ಸೋಲಿನ ಬಳಿಕ ಇದೇ ಮೊದಲ ಬಾರಿಗೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದಿಲ್ಲಿಗೆ ದಿಢೀರ್‌ ಪ್ರಯಾಣ ಬೆಳೆಸಿದ್ದು, ರಾಜ್ಯ ರಾಜಕಾರಣದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

Advertisement

ರವಿವಾರ ಸಂಜೆ ಬೆಂಗಳೂರಿನಲ್ಲಿ ವಿಮಾನ ಏರಿದ ಅವರು ರಾತ್ರಿ 9 ಗಂಟೆ ವೇಳೆಗೆ ದಿಲ್ಲಿ ತಲುಪಿದರು. ವಿಮಾನ ನಿಲ್ದಾಣದಿಂದ ರಾಜ್ಯದ ಸಂಸದರೊಬ್ಬರ ನಿವಾಸಕ್ಕೆ ತೆರಳಿ ಆಪ್ತರೊಂದಿಗೆ ಸಮಾಲೋಚನೆ ನಡೆಸಿ ದರು. ಪಕ್ಷದ ವರಿಷ್ಠರ ಆಹ್ವಾನದ ಮೇರೆಗೆ ರಾತೋರಾತ್ರಿ ಪ್ರಯಾಣ ಬೆಳೆಸಿರುವುದು ಹಲವು ಕುತೂಹಲಗಳಿಗೆ ಕಾರಣವಾಗಿದೆ.
ಬೊಮ್ಮಾಯಿ ಸೋಮ ವಾರ ಬೆಳಗ್ಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿ ಮಾಡುವ ಸಾಧ್ಯತೆಗಳಿವೆೆ. ಸಂಸತ್ತಿನ ಕಲಾಪ ಇರುವುದರಿಂದ ಭೇಟಿಗೆ ಇನ್ನೂ ಸಮಯ ನಿಗದಿ ಯಾಗಿಲ್ಲ. ಸಾಧ್ಯ ವಾದರೆ ಸಂಸತ್‌ ಭವನದಲ್ಲೇ ಭೇಟಿ ಮಾಡುವ ಸಂಭವವಿದೆ.

ಯಾರೇ ಆಗಲಿ, ಬೇಗ ನೇಮಿಸಿ
ಸರಕಾರ ರಚನೆಯಾಗಿ 2 ತಿಂಗಳಾಗಿವೆ. ವಿಪಕ್ಷ ನಾಯಕರ ಆಯ್ಕೆ ಆಗಿಲ್ಲ. ಸದನದ ಒಳಗಷ್ಟೇ ಅಲ್ಲ, ಹೊರಗೂ ಸರಕಾರದ ವಿರುದ್ಧ ಸ್ಪಷ್ಟ ರೂಪದ ಹೋರಾಟಗಳನ್ನು ಕೈಗೊಳ್ಳಲು ಕಷ್ಟವಾಗುತ್ತಿದೆ. ಯಾರೇ ಆಗಲಿ, ಆಯ್ಕೆಯನ್ನು ಸಾಧ್ಯವಾದಷ್ಟು ಬೇಗನೆ ಅಂತಿಮಗೊಳಿಸಿ ಎಂಬುದನ್ನು ರಾಷ್ಟ್ರೀಯ ನಾಯಕರಿಗೆ ಮನವರಿಕೆ ಮಾಡುವ ಇರಾದೆಯೊಂದಿಗೆ ಬೊಮ್ಮಾಯಿ ಅವರು ತೆರಳಿದ್ದಾರೆ.

ಹೆಸರು ಹಲವು, ಆಯ್ಕೆ ಎರಡೇ!
ಸದ್ಯಕ್ಕೆ ಬಿಜೆಪಿಯ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಿ.ಟಿ. ರವಿ, ಡಾಣ ಅಶ್ವತ್ಥನಾರಾಯಣ, ಅರವಿಂದ ಲಿಂಬಾವಳಿ ಸಹಿತ ಹಲವರ ಹೆಸರು ಕೇಳಿ ಬರುತ್ತಿದ್ದು, ವಿಧಾನಸಭೆಯ ವಿಪಕ್ಷದ ನಾಯಕರ ಹುದ್ದೆಗೆ ಬಸವರಾಜ ಬೊಮ್ಮಾಯಿ, ಬಸನಗೌಡ ಪಾಟೀಲ್‌ ಯತ್ನಾಳ್‌ ಸಹಿತ ಅನೇಕರ ಹೆಸರುಗಳಿವೆ. ಆ. 12ರ ಒಳಗಾಗಿ ಎಲ್ಲಕ್ಕೂ ತೆರೆ ಬೀಳುವ ಸಾಧ್ಯತೆಗಳಿವೆ.

ರವಿವಾರವಷ್ಟೇ ಸಿ.ಟಿ. ರವಿ ವಾಪಸ್‌
ಸಿ.ಟಿ. ರವಿ ಅವರು ಇತ್ತೀಚೆಗಷ್ಟೇ ದಿಲ್ಲಿಗೆ ತೆರಳಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಸೇರಿದಂತೆ ವರಿಷ್ಠರನ್ನು ಭೇಟಿ ಮಾಡಿ ರವಿವಾರ ಬೆಂಗಳೂರಿಗೆ ಮರಳಿದ್ದರು. ರವಿ ಅವರೇ ಬಿಜೆಪಿಯ ಮುಂದಿನ ರಾಜ್ಯಾಧ್ಯಕ್ಷರು ಎನ್ನುವ ಸುದ್ದಿಗಳು ಹರಿದಾಡುತ್ತಿರುವ ಬೆನ್ನಲ್ಲೇ ವಿಧಾನಸಭೆಯಲ್ಲಿ ಬೊಮ್ಮಾಯಿ ಅವರು ವಿಪಕ್ಷ ನಾಯಕರಾಗಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ರವಿ ಅವರು ದಿಲ್ಲಿಯಿಂದ ಮರಳುತ್ತಿದ್ದಂತೆ ಬೊಮ್ಮಾಯಿ ಅವರು ದಿಲ್ಲಿಗೆ ತೆರಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next