Advertisement

ಕೆಸಿಆರ್ ಬೇರುಸಹಿತ ಕಿತ್ತು ಹಾಕುತ್ತೇವೆ: ತೆಲಂಗಾಣದಲ್ಲಿ ಶಾ ಚುನಾವಣೆ ರಣಕಹಳೆ

07:21 PM Aug 21, 2022 | Team Udayavani |

ನಲ್ಗೊಂಡ: ‘ರಾಜಗೋಪಾಲ್ ರೆಡ್ಡಿ ಬಿಜೆಪಿಗೆ ಸೇರ್ಪಡೆಯಾಗಿರುವುದು ಕೆ.ಚಂದ್ರಶೇಖರ್ ರಾವ್ ಸರ್ಕಾರವನ್ನು ಬೇರುಸಹಿತ ಕಿತ್ತು ಹಾಕುವುದಕ್ಕೆ ನಾಂದಿಯಾಗಿದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಗುಡುಗಿದ್ದಾರೆ.

Advertisement

ನಲ್ಗೊಂಡ ಜಿಲ್ಲೆಯ ಮುನುಗೋಡೆಯಲ್ಲಿ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದರು. ಸೆಪ್ಟೆಂಬರ್‌ನಲ್ಲಿ ತೆಲಂಗಾಣ ವಿಮೋಚನಾ ದಿನವನ್ನು ಆಚರಿಸುವುದಾಗಿ ಭರವಸೆ ನೀಡಿದರು. ಆದರೆ, ಕೆಸಿಆರ್ ಸರ್ಕಾರ ತಮ್ಮ ಭರವಸೆಯನ್ನು ಈಡೇರಿಸಲಿಲ್ಲ ಎಂದು ಕಿಡಿ ಕಾರಿದರು.

ಮೋದಿ ಸರ್ಕಾರ ಎರಡು ಬಾರಿ ಪೆಟ್ರೋಲ್ ಬೆಲೆ ಇಳಿಸಿದೆ. ಆದರೆ, ಕೆಸಿಆರ್ ಸರ್ಕಾರ ಪೆಟ್ರೋಲ್ ಮೇಲಿನ ವ್ಯಾಟ್ ಅನ್ನು ಕಡಿಮೆ ಮಾಡಿಲ್ಲ. ಇದು ತೆಲಂಗಾಣದಲ್ಲಿ ಹಣದುಬ್ಬರ ಏರಿಕೆಗೆ ಕಾರಣವಾಗಿದೆ ಎಂದು ಶಾ ಹೇಳಿದರು.

ಕೆಸಿಆರ್ ಸರ್ಕಾರ ರೈತ ವಿರೋಧಿ. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಿಂದ ರೈತರಿಗೆ ಲಾಭವಾಗಲು ಬಿಡುತ್ತಿಲ್ಲ. ಬಿಮಾ ಯೋಜನೆ ಮೂಲಕ ರೈತರಿಗೆ ಪ್ರವಾಹ ಸಂದರ್ಭದಲ್ಲಿ ಪರಿಹಾರ ಸಿಗುತ್ತಿತ್ತು ಎಂದರು.

ತೆಲಂಗಾಣದಲ್ಲಿ 2014 ರಿಂದ ಶಿಕ್ಷಕರ ನೇಮಕಾತಿ ನಡೆಸಲಾಗುತ್ತಿಲ್ಲ, ನೇಮಕಾತಿ ನಡೆಯುತ್ತಿದ್ದರೆ ಅದು ಕೆಸಿಆರ್ ಮನೆಯಲ್ಲಿಬಿಟ್ಟು ಬೇರೆಲ್ಲೂ ಇಲ್ಲ ಎಂದರು.

Advertisement

ಕಾಂಗ್ರೆಸ್ ಶಾಸಕ ಕೆ ರಾಜಗೋಪಾಲ್ ರೆಡ್ಡಿ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾದರು. ಮುನುಗೋಡೆ ಕ್ಷೇತ್ರ ಉಪಚುನಾವಣೆಗೆ ಸಾಕ್ಷಿಯಾಗಿದೆ.

ಭಾನುವಾರ ಸಂಜೆ ಅಮಿತ್ ಶಾ ಅವರನ್ನು ಜೂನಿಯರ್ ಎನ್‌ಟಿಆರ್ ಭೇಟಿ ಮಾಡಲಿದ್ದಾರೆ ಎಂದು ಬಿಜೆಪಿ ತೆಲಂಗಾಣ ರಾಜ್ಯ ಪ್ರಧಾನ ಕಾರ್ಯದರ್ಶಿ ಗುಜ್ಜುಲ ಪ್ರೇಮೇಂದ್ರ ರೆಡ್ಡಿ ಖಚಿತಪಡಿಸಿದ್ದಾರೆ.

ಸಿಕಂದರಾಬಾದ್‌ನಲ್ಲಿ ಪಕ್ಷದ ಕಾರ್ಯಕರ್ತರುವ ಸತ್ಯನಾರಾಯಣ ಅವರ ಮನೆಗೆ ಶಾ ಭೇಟಿ ನೀಡುವ ಮೂಲಕ ಸಾಮಾನ್ಯ ಕಾರ್ಯಕರ್ತರಿಗೆ ಸ್ಫೂರ್ತಿ ತುಂಬಿದರು. ಸಿಕಂದರಾಬಾದ್‌ನಲ್ಲಿರುವ ಶ್ರೀ ಉಜ್ಜೈನಿ ಮಹಾಕಾಳಿ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next