Advertisement

ಆವಾಸ್‌ ಯೋಜನೆ 2024ರವರೆಗೆ ವಿಸ್ತರಣೆ

07:26 PM Aug 11, 2022 | Team Udayavani |

ನವದೆಹಲಿ: ಮನೆಗಳ ನಿರ್ಮಾಣಕ್ಕೆ ಆರ್ಥಿಕ ಸಹಾಯಧನವನ್ನು ಒದಗಿಸುವ ಪ್ರಧಾನಮಂತ್ರಿ ಆವಾಸ್‌ ಯೋಜನೆ(ನಗರ)ಯನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಂಪುಟವು 2024ರ ಡಿ.31ರವರೆಗೆ ವಿಸ್ತರಿಸಿದೆ.

Advertisement

ಯೋಜನೆಯಡಿ ಮಂಜೂರಾಗಿ 2022ರ ಮಾ.31ರವರೆಗೆ ನಿರ್ಮಾಣ ಪೂರ್ಣಗೊಳಿಸಲಾದ 122.69 ಲಕ್ಷ ಮನೆಗಳಿಗೂ ಹಣಕಾಸು ನೆರವು ಒದಗಿಸಲಾಗುತ್ತದೆ ಎಂದು ಸರ್ಕಾರ ಹೇಳಿದೆ. ದೇಶಾದ್ಯಂತ ನಗರ ಪ್ರದೇಶಗಳಲ್ಲಿ ವಾಸಿಸುವ ಅರ್ಹ ಫ‌ಲಾನುಭವಿಗಳಿಗೆ ಸ್ವಂತ ಮನೆ ಹೊಂದಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ 2015ರ ಜೂನ್‌ನಲ್ಲಿ ಈ ಯೋಜನೆ ಜಾರಿ ಮಾಡಲಾಗಿತ್ತು. 2022ರ ಮಾರ್ಚ್‌ವರೆಗೆ ಮಾತ್ರ ಈ ಯೋಜನೆ ಚಾಲ್ತಿಯಲ್ಲಿರಲಿದೆ ಎಂದು ಸರ್ಕಾರ ಹೇಳಿತ್ತು.

ಆದರೆ, ಅದನ್ನು ವಿಸ್ತರಿಸುವಂತೆ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದವು. ಈಗ ಅದಕ್ಕೆ ಒಪ್ಪಿರುವ ಕೇಂದ್ರ ಸಂಪುಟ 2024ರ ಅಂತ್ಯದವರೆಗೂ ಯೋಜನೆಯನ್ನು ವಿಸ್ತರಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next