Advertisement

ಏರಿಯೇಟರ್‌ ಡೆಡ್‌ಲೈನ್‌ ವಿಸ್ತರಣೆ  

01:11 PM Mar 31, 2024 | Team Udayavani |

ಬೆಂಗಳೂರು: ರಾಜ್ಯ ರಾಜಧಾನಿಯ ಮಾಲ್‌ಗ‌ಳು, ವಾಣಿಜ್ಯ ಸಂಕೀರ್ಣಗಳು, ಅಪಾರ್ಟ್‌ಮೆಂಟ್‌ಗಳು, ಸರ್ಕಾರಿ ಕಟ್ಟಡ, ಹೋಟೆಲ್‌ಗ‌ಳು, ರೆಸ್ಟೋರೆಂಟ್‌ ಹಾಗೂ ಧಾರ್ಮಿಕ ಸ್ಥಳಗಳಲ್ಲಿ ಸ್ವತ್ಛತೆಗಾಗಿ ಬಳಸುವ ನಲ್ಲಿಗಳಲ್ಲಿ ಏರಿಯೇಟರ್‌ ಸಾಧನ ಅಳವಡಿಸಿಕೊಳ್ಳಲು ನಿಗದಿಪಡಿಸಿದ್ದ ಗಡುವನ್ನು ಮಾ.31ರಿಂದ ಏ.7ರ ವರೆಗೆ ವಿಸ್ತರಿ ಸಲಾಗಿದೆ.

Advertisement

ಸಾರ್ವಜನಿಕರು ಗಡುವು ವಿಸ್ತರಿಸು ವಂತೆ ಕೋರಿಕೊಂಡ ಹಿನ್ನೆಲೆಯಲ್ಲಿ ಸಾರ್ವ ಜನಿಕರ ಹಿತ ದೃಷ್ಟಿಯಿಂದ ಜಲಮಂಡಳಿಯು ಈ ಕ್ರಮ ಕೈಗೊಂಡಿದೆ. ಒಂದು ವೇಳೆ ಏ.7ರೊಳಗೆ ನಲ್ಲಿಗಳಲ್ಲಿ ಏರಿಯೇಟರ್‌ ಅಳವಡಿಕೆ ಮಾಡದಿದ್ದರೆ, ಏ.8ರಿಂದ ದಂಡ ವಿಧಿಸಲಾಗುವುದು ಎಂದು ಜಲಮಂಡಳಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಬೆಂಗಳೂರು ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯು ಮಾ.31ರ ವರೆಗೆ ಏರಿ ಯೇಟರ್‌ ಅಳವಡಿಕೆಗೆ ಅವಕಾಶ ನೀಡಿತ್ತು. ಏ.7ರ ಒಳಗೆ ಮೇಲ್ಕಂಡ ಸ್ಥಳಗಳಲ್ಲಿ ನೀರಿನ ನಲ್ಲಿಗೆ ಏರಿಯೇ ಟರ್‌ ಅಳವಡಿಸದಿರುವುದು ಜಲಮಂಡಳಿಯ ಗಮನಕ್ಕೆ ಬಂದರೆ 5 ಸಾವಿರ ರೂ. ದಂಡ ವಿಧಿಸಲಿದೆ.

ಮಂಡಳಿಯು ಸರಬರಾಜು ಮಾಡುತ್ತಿರುವ ನೀರಿನ ಪ್ರಮಾಣದಲ್ಲಿ ಶೇ.50 ರವರೆಗೆ ಕಡಿತಗೊಳಿಸಲಿದೆ. ಈ ಉಲ್ಲಂಘನೆಯು ಮರು ಕಳಿಸಿದರೆ 5 ಸಾವಿರ ದಂಡದ ಜೊತೆಗೆ ಹೆಚ್ಚುವರಿಯಾಗಿ 500 ರೂ. ಪ್ರತಿದಿನದಂತೆ ದಂಡ ಹಾಕಲು ನಿರ್ಧರಿಸಲಾಗಿದೆ. ಇಷ್ಟಾದ ಮೇಲೂ ಏರಿಯೇಟರ್‌ ಅಳವಡಿಸದಿರುವುದು ಕಂಡು ಬಂದರೆ ಜಲಮಂಡಳಿಯ ವತಿಯಿಂದಲೆ ಏರಿಯೇಟರ್‌ ಅಳವಡಿಸಿ ಆ ಮೊತ್ತವನ್ನು ಆಯಾ ಗ್ರಾಹಕರಿಂದಲೇ ವಸೂಲಿ ಮಾಡಲಾಗುವುದು ಎಂದು ಜಲಮಂಡಳಿಯು ಈಗಾಗಲೇ ಆದೇಶಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next