ನವದೆಹಲಿ: ಕೇಂದ್ರ ಬಜೆಟ್ ಮಂಡನೆಗೆ ಕೆಲವೇ ದಿನಗಳು ಬಾಕಿ ಇವೆ. ಈ ಹಿನ್ನೆಲೆಯಲ್ಲಿ ವೇತನ ಪಡೆಯುವವರು ಆದಾಯ ತೆರಿಗೆ ಪರಿಹಾರ ಕ್ರಮಗಳ ನಿರೀಕ್ಷೆಯಲ್ಲಿದ್ದಾರೆ.
ವೇತನ ಪಡೆಯುವವರು ದೇಶದಲ್ಲಿ ಆದಾಯ ತೆರಿಗೆ ಪಾವತಿಸುವ ಅತಿ ದೊಡ್ಡ ಗುಂಪಾಗಿದೆ. ಆದಾಯ ತೆರಿಗೆ ಸ್ಲ್ಯಾಬ್ ಗಳ ತರ್ಕಬದ್ಧಗೊಳಿಸುವಿಕೆ ಮತ್ತು ಸ್ಟ್ಯಾಂಡರ್ಡ್ ಡಿಡಕ್ಷನ್‌ನಲ್ಲಿ ಹೆಚ್ಚಳ ಮಾಡಬೇಕೆಂಬುದು ವೇತನ ಪಡೆಯುವವರ ಬಹು ದಿನಗಳ ಒತ್ತಾಯವಾಗಿದೆ.
ಕಳೆದ ಮೂರು ವರ್ಷಗಳಲ್ಲಿ ಕೇಂದ್ರ ಸರ್ಕಾರದಿಂದ ವೇತನ ಪಡೆಯುವವರಿಗೆ ಪ್ರಮುಖ ಆದಾಯ ತೆರಿಗೆ ಪರಿಹಾರ ಕ್ರಮಗಳನ್ನು ಘೋಷಿಸಿಲ್ಲ.
“ವೇತನ ಪಡೆಯುವವರಿಗೆ ಆದಾಯ ತೆರಿಗೆ ಪರಿಹಾರ ಕ್ರಮಗಳು ನ್ಯಾಯಯುತವಾಗಿವೆ. ಆದರೆ ಕೊರೊನಾ ನಂತರ ಆರ್ಥಿಕತೆ ಇದೀಗ ಚೇತರಿಕೆಯಾಗುತ್ತಿದೆ.
ಜತೆಗೆ ಏರುತ್ತಿರುವ ಹಣದುಬ್ಬರವನ್ನು ಗಮನದಲ್ಲಿ ಇಟ್ಟುಕೊಂಡು ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ವೇತನ ಪಡೆಯುವವರಿಗೆ ಆದಾಯ ತೆರಿಗೆಯಲ್ಲಿ ಕಡಿತವಾಗುವ ಸಾಧ್ಯತೆ ಕಡಿಮೆ,’ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.