Advertisement
ಮುಂಬರುವ ಫೆಬ್ರವರಿ1ಕ್ಕೆ ಕೇಂದ್ರ ಬಜೆಟ್ ಮಂಡಣೆ ನಡೆಯಲಿದ್ದು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಉದ್ಯಮ, ಕೃಷಿ, ಹಣಕಾಸು ಸೇರಿದಂತೆ ನಾನಾ ವಲಯಗಳ ತಜ್ಞರ ಜತೆ ಸಮಾಲೋಚನೆ ನಡೆಸಲಿದ್ದಾರೆ. ಇನ್ನೂ ಈ ಪೂರ್ವ ಸಮಾಲೋಚನೆ ಸಭೆ ಡಿಸೆಂಬರ್ 23ರ ತನಕ ನಡೆಯಲಿದ್ದು, ವಿತ್ತ ಸಚಿವೆಗೆ ಇದು ಎರಡನೇ ಬಜೆಟ್ ಮಂಡನೆಯಾಗಿದೆ.
ಪ್ರಧಾನಿಯವರ ಕಚೇರಿ (ಪಿಎಂಒ), ಹಣಕಾಸು ಇಲಾಖೆ, ನೀತಿ ಆಯೋಗ ಮತ್ತು ಇತರ ಇಲಾಖೆಗಳು ಸರಣಿ ಸಭೆಗಳನ್ನು ನಡೆಸಲಿದ್ದು, ಆರ್ಥಿಕ ಬೆಳವಣಿಗೆಗೆ ಹೆಚ್ಚು ಆದ್ಯತೆಯನ್ನು ಹೊಂದುವ ಉದ್ದೇಶ ಇಟ್ಟುಕೊಂಡಿದೆ. ಕಳೆದ 6 ವರ್ಷಗಳಲ್ಲಿಯೇ ಕನಿಷ್ಠ ಮಟ್ಟಕ್ಕೆ, ಅಂದರೆ ಶೆ.4.5ಕ್ಕೆ ಬೆಳವಣಿಗೆ ದರ ಕುಸಿದಿದ್ದು, ವವೋದ್ಯಮ, ಫಿನೆrಕ್, ಡಿಜಿಟಲ್ ವಲಯಗಳ ಪ್ರಮುಖರ ಜತೆಗೆಬ ದೀರ್ಘವಾದ ಸಮಾಲೋಚನೆ ನಡೆಯಲಿದೆ. ಉದ್ಯಮ ಸ್ನೇಹಿ ವಾತಾವರಣಕ್ಕೆ ಸಲಹೆ
ಉದ್ಯಮದ ಮೂಲಗಳ ಪ್ರಕಾರ ಸರಕಾರ ಉದ್ಯಮ ಸ್ನೇಹಿ ವಾತಾವರಣ ಸೃಷ್ಟಿಗೆ ಸಲಹೆಗಳನ್ನು ನಿರೀಕ್ಷಿಸಿದ್ದು, ಸಭೆಯಲ್ಲಿ ಖಾಸಗಿ ಹೂಡಿಕೆಯ ಉತ್ತೇಜನ, ರಫ್ತು, ರಾಜ್ಯಗಳ ಪಾತ್ರ ಇತ್ಯಾದಿ ವಿಚಾರಗಳ ವಿಮರ್ಶೆಯೂ ನಡೆಯಲಿದೆ.
Related Articles
ಡಿಸೆಂಬರ್ 19ರಂದು ಉದ್ಯಮ ವಲಯದ ಪ್ರಮುಖರೊಡನೆ ಸಮಾಲೋಚನೆ ನಡೆಸಲಿದ್ದು, ಕೈಗಾರಿಕಾ ಮಂಡಳಿಗಳು ವೈಯಕ್ತಿಕ ಆದಾಯ ತೆರಿಗೆ ವಿನಾಯಿತಿಯ ಮಿತಿಯನ್ನು ಈಗಿನ 2.5 ಲಕ್ಷ ರೂ.ಗಳಿಂದ 5 ಲಕ್ಷ ರೂ.ಗೆ ಏರಿಸಬೇಕು. ಇದರಿಂದ ಸರಕು ಮತ್ತು ಸೇವೆಗಳಿಗೆ ಬೇಡಿಕೆ ಸೃಷ್ಟಿಯಾಗಲಿದೆ ಎನ್ನುವ ದೃಷ್ಟಿಯಿಂದ ಬೇಡಿಕೆಯನ್ನು ಮುಂದಿಟ್ಟಿದ್ದೇವೆ.
Advertisement
ಸಬ್ಸಿಡಿ ಸುಧಾರಣೆಇನ್ನೂ ಈ ಸಲ ಬಜೆಟ್ ಅಲ್ಲಿ ಸಬ್ಸಿಡಿ ಸುಧಾರಣೆ, ಡಿಜಿಟಲ್ ಯೋಜನೆಗಳ ವಿಸ್ತರಣೆ, ಆಯುಷ್ಮಾನ್ ಭಾರತ್, ಸ್ವಚ್ಛ ಭಾರತ್ ಯೋಜನೆಗಳಿಗೆ ತಂತ್ರಜ್ಞಾನ ನೆರವು ಇತ್ಯಾದಿ ವಿಷಯಗಳಿಗೆ ಸಂಬಂಧಪಟ್ಟಂತೆ ಹತ್ತು ಹಲವಾರು ನಿರೀಕ್ಷೆಗಳಿದ್ದು, ಲಾಂಗ್ ಟರ್ಮ್ ಕ್ಯಾಪಿಟಲ್ ಗೇನ್ಸ್ ತೆರಿಗೆ ರದ್ದು, ವೇತನದಾರರಿಗೆ ತೆರಿಗೆ ರಿಲೀಫ್, ಸಣ್ಣ, ಮಾಧ್ಯಮ ಉದ್ದಿಮೆಗೆ ತೆರಿಗೆ ಕಡಿತ ಅನುಕೂಲವನ್ನು ನಿರೀಕ್ಷಿಸಲಾಗಿದೆ.