Advertisement

Union Budget 2024; ಸಮತೋಲಿತ-ಅಭಿವೃದ್ಧಿ ಪರ ಆಯ-ವ್ಯಯ: ಜಗದೀಶ ಶೆಟ್ಟರ್

06:03 PM Jul 23, 2024 | Team Udayavani |

ಹುಬ್ಬಳ್ಳಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌(Nirmala Sitharaman) ಮಂಡಿಸಿರುವ 2024-25ನೇ ಸಾಲಿನ ಆಯ-ವ್ಯಯ ಸರ್ವ ವರ್ಗಗಳಿಗೂ ಸಮತೋಲನ ತೋರುವ ಹಾಗೂ ದೇಶವನ್ನು ಅಭಿವೃದ್ಧಿಯತ್ತ ತೆಗೆದುಕೊಂಡು ಹೋಗುವ ಉತ್ತಮ ಮುಂಗಡ ಪತ್ರವಾಗಿದೆ ಎಂದು ಬೆಳಗಾವಿ ಸಂಸದ ಜಗದೀಶ ಶೆಟ್ಟರ್ (Jagadish Shettar) ಅಭಿಪ್ರಾಯಪಟ್ಟಿದ್ದಾರೆ.

Advertisement

ಬಡವರು, ರೈತರು, ಮಹಿಳೆಯರು, ಯುವಕರ ಹಿತ ಚಿಂತನೆ, ಕೈಗಾರಿಕಾ ಅಭಿವೃದ್ಧಿಗೆ ಆದ್ಯತೆಯೊಂದಿಗೆ 12 ಕೈಗಾರಿಕಾ ಪಾರ್ಕ್‌ಗಳನ್ನು ಸ್ಥಾಪಿಸುವುದರೊಂದಿಗೆ ಶಿಪ್ಪಿಂಗ್‌ ಉದ್ಯಮದಲ್ಲಿ ಉದ್ಯೋಗ ಸ್ಥಾಪನೆ, ಪಿಎಂ ಸ್ವನಿಧಿ ಯೋಜನೆ ಅನುಷ್ಠಾನಕ್ಕೂ ಹೆಚ್ಚಿನ ಒತ್ತು ನೀಡಲಾಗಿದೆ.

ಮುದ್ರಾ ಯೋಜನೆಯಡಿ ನೀಡುವ 10 ಲಕ್ಷ ರೂ.ಗಳವರೆಗಿನ ಸಾಲವನ್ನು 20 ಲಕ್ಷ ರೂ.ಗಳಿಗೆ ಹೆಚ್ಚಿಸಿರುವುದು, ಪ್ರಧಾನಮಂತ್ರಿ ಗ್ರಾಮ ಸಡಕ್‌ ಯೋಜನಾ ಹಂತ-4 ಅನುಷ್ಠಾನ, ಪಿಎಂ ಆವಾಸ್‌ ಯೋಜನೆಯಡಿ 3 ಕೋಟಿ ಮನೆಗಳ ನಿರ್ಮಾಣ, ನೌಕರರಿಗೆ ಆದಾಯ ತೆರಿಗೆಯಲ್ಲಿ ಲಾಭ ಕಲ್ಪಿಸಿರುವುದು, ಉನ್ನತ ಶಿಕ್ಷಣಕ್ಕೆ ವಿದ್ಯಾರ್ಥಿಗಳಿಗೆ 10 ಲಕ್ಷ ರೂ.ಗಳವರೆಗೆ ಸಾಲ ಸೌಲಭ್ಯ ಹೀಗೆ ವಿವಿಧ ಸಕಾರಾತ್ಮಕ ಹಾಗೂ ಅಭಿವೃದ್ಧಿ ಪರ ಅಂಶಗಳೊಂದಿಗೆ ಕೇಂದ್ರ ಆಯ-ವ್ಯಯ ವಿಕಸಿತ ಭಾರತವಾಗಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇರಿಸಿದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next