Advertisement
ಮುಂದಿನ 25 ವರ್ಷಗಳಲ್ಲಿ ದೇಶದಲ್ಲಿ “ಅಭಿವೃದ್ಧಿಯ ಪರ್ವ’ ವನ್ನು ಸಾಧಿಸುವ ಗುರಿಯೊಂದಿಗೆ, ಕೇಂದ್ರ ಸರಕಾರವು ಮುಂಗಡ ಪತ್ರದ ಮೂಲಕ “ಅಮೃತ ಕಾಲ’ಕ್ಕೆ ಭದ್ರ ಅಡಿಪಾಯ ಹಾಕಿದೆ.
Related Articles
Advertisement
ನಗರ ಯೋಜನೆಗೆ ಒತ್ತು: ದೇಶಕ್ಕೆ ಸ್ವಾತಂತ್ರ್ಯ ಬಂದು 100 ವರ್ಷಗಳು ತುಂಬುವ ಹೊತ್ತಿಗೆ, ಅರ್ಧದಷ್ಟು ಜನಸಂಖ್ಯೆಯು ನಗರಪ್ರದೇಶಗಳಲ್ಲಿ ಬದುಕು ಕಟ್ಟಿಕೊಂಡಿರುತ್ತದೆ. ಇದಕ್ಕಾಗಿ ಈಗಲೇ ಸಿದ್ಧತೆ ಆರಂಭಿಸಲಾಗಿದೆ. ವ್ಯವಸ್ಥಿತವಾಗಿ ನಗರಾಭಿವೃದ್ಧಿ ಮಾಡಲು ಯೋಜನೆ ಹಾಕಿಕೊಳ್ಳಲಾಗಿದೆ. ನಗರ ಸಾಮರ್ಥ್ಯ ವೃದ್ಧಿಗಾಗಿ ರಾಜ್ಯಗಳಿಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಕೇಂದ್ರ ಸರಕಾರ ಘೋಷಿಸಿದೆ. ಕಟ್ಟಡ ಬೈಲಾಗಳ ಆಧುನೀಕರಣ, ನಗರ ಯೋಜನೆ ಅನುಷ್ಠಾನ ಮಾಡುವುದಾಗಿಯೂ ತಿಳಿಸಿದೆ. ನಗರ ಯೋಜನೆ ರೂಪಿಸುವವರು, ಆರ್ಥಿಕ ತಜ್ಞರು ಮತ್ತು ಸಂಸ್ಥೆಗಳನ್ನು ಒಳಗೊಂಡ ಉನ್ನತ ಮಟ್ಟದ ಸಮಿತಿಯನ್ನು ರಚಿಸಿ, ನಗರಾಭಿವೃದ್ಧಿ, ಸಾಮರ್ಥ್ಯ ವೃದ್ಧಿ, ಯೋಜನೆ, ಅನುಷ್ಠಾನಕ್ಕೆ ಸಂಬಂಧಿಸಿದ ಶಿಫಾರಸುಗಳನ್ನು ಪಡೆಯಲಾಗುತ್ತದೆ ಎಂದು ನಿರ್ಮಲಾ ಹೇಳಿದ್ದಾರೆ.
ಏನಿದು “ಅಮೃತಕಾಲ’?ವೈದಿಕ ಜ್ಯೋತಿಷದಲ್ಲಿ “ಅಮೃತ ಕಾಲ’ ಎಂಬ ಪದದ ಉಲ್ಲೇಖವಿದೆ. ಸಮುದ್ರಮಥನದ ವೇಳೆ ಅಸುರರು ಮತ್ತು ಸುರರ ಮುಂದೆ ಅಮೃತವು ಪ್ರತ್ಯಕ್ಷವಾಗಿ “ಅದೃಷ್ಟ’ದ ಬಾಗಿಲು ತೆರೆದ ಸಮಯವನ್ನು ಅಮೃತ ಕಾಲ(ಅಮೃತ ಗಳಿಗೆ) ಎನ್ನುತ್ತಾರೆ. ಇದನ್ನು ಯಾವುದೇ ಹೊಸ ಕಾರ್ಯವನ್ನು ಆರಂಭಿಸಲು ಪ್ರಶಸ್ತವಾದ ಶುಭ ಕಾಲ ಎಂದು ಪರಿಗಣಿಸಲಾಗಿದೆ. ಕಳೆದ ವರ್ಷ 75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ವೇಳೆ ಪ್ರಧಾನಿ ಮೋದಿ ಅವರು ಮುಂದಿನ 25 ವರ್ಷಗಳಿಗಾಗಿ ಹೊಸ ನೀಲನಕ್ಷೆಯನ್ನು ಅನಾವರಣಗೊಳಿಸಿ, ಅದನ್ನು “ಅಮೃತ ಕಾಲ’ ಎಂದು ಘೋಷಿಸಿದ್ದರು. ಪ್ರತಿಯೊಂದು ಕ್ಷೇತ್ರದಲ್ಲೂ ಅತ್ಯುತ್ತಮ ಪ್ರಗತಿ ಸಾಧಿಸುವ, ನಾಗರಿಕರ ಜೀವನಮಟ್ಟ ಸುಧಾರಿಸುವ, ಗ್ರಾಮಗಳು ಮತ್ತು ನಗರಗಳ ನಡುವಿನ ಅಂತರವನ್ನು ತಗ್ಗಿಸುವ ನಿಟ್ಟಿನಲ್ಲಿ ಎಲ್ಲರೂ “ಪ್ರಯತ್ನ'(ಸಬ್‌ಕಾ ಪ್ರಯಾಸ್) ಪಡಬೇಕು ಎಂದೂ ಕರೆ ನೀಡಿದ್ದರು. ಗಿರಿಧಾಮಗಳಿಗಾಗಿ ಪರ್ವತಮಾಲಾ
ಭಾರತ್‌ಮಾಲಾ, ಸಾಗರಮಾಲಾ ಬಳಿಕ ಈಗ ಪರ್ವತಮಾಲಾ ಯೋಜನೆಯನ್ನು ಸರಕಾರ ಘೋಷಿಸಿದೆ. ಗಿರಿಧಾಮಗಳಿಗೆ ಇದು ವರವಾಗಿ ಪರಿಣಮಿಸಲಿದೆ. ರೋಪ್‌ವೇ, ಕೇಬಲ್ ಕಾರ್, ವರ್ನಾಕ್ಯುಲರ್ ರೈಲ್ವೇಗಳು ಕೂಡ ಇದರಲ್ಲಿ ಸೇರಿದ್ದು, 8 ಹೊಸ ರೋಪ್‌ವೇ(60 ಕಿ.ಮೀ.) ಯೋಜನೆಗಳನ್ನೂ ಆರಂಭಿಸಲು ನಿರ್ಧರಿಸಲಾಗಿದೆ. ರಾಷ್ಟ್ರೀಯ ರೋಪ್‌ವೇ ಅಭಿವೃದ್ಧಿ ಯೋಜನೆಗಳು ಈಶಾನ್ಯ ರಾಜ್ಯ, ಉತ್ತರಾಖಂಡ, ಹಿಮಾಚಲ ಪ್ರದೇಶ ಮತ್ತು ಕಾಶ್ಮೀರಕ್ಕೆ ಅನುಕೂಲ ಕಲ್ಪಿಸಲಿದೆ. ಪರ್ವತ ಪ್ರದೇಶಗಳು ಅಂದರೆ ಗಿರಿಧಾಮಗಳಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನದ ಜತೆಗೆ ಸಾಕಷ್ಟು ಉದ್ಯೋಗಾವಕಾಶಗಳನ್ನೂ ಸೃಷ್ಟಿಸುವುದು ಇದರ ಉದ್ದೇಶವಾಗಿದೆ. ಈ ಯೋಜನೆ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ, “ಪರ್ವತಮಾಲಾ ಯೋಜನೆಯಿಂದ ಗಿರಿಧಾಮಗಳಿಗೆ ಸಾರಿಗೆ ಸಂಪರ್ಕ ಹೆಚ್ಚಲಿದೆ. ಮಾತ್ರವಲ್ಲ ಮಾಲಿನ್ಯಮುಕ್ತ ಸಾರಿಗೆಯನ್ನೇ ಪರಿಚಯಿಸಲಿದ್ದೇವೆ. ಮೂಲಸೌಕರ್ಯಗಳ ಅಭಿವೃದ್ಧಿಯು ನವಭಾರತ ನಿರ್ಮಾಣಕ್ಕೆ ಸಹಕಾರಿಯಾಗಲಿದೆ’ ಎಂದು ಹೇಳಿದ್ದಾರೆ. ಪಿಎಂ ಗತಿಶಕ್ತಿಗೆ ವೇಗ
ಪಿಎಂ ಗತಿಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲ್ರಾನ್ ಮೂಲಕ ಆರ್ಥಿಕ ಪ್ರಗತಿ ಮತ್ತು ಸುಸ್ಥಿರ ಅಭಿವೃದ್ಧಿ ಸಾಧಿಸಲು ಪಣ ತೊಡಲಾಗಿದೆ. ರಸ್ತೆ, ರೈಲ್ವೇ, ಏರ್‌ಪೋರ್ಟ್, ಬಂದರುಗಳು, ಸಾಮೂಹಿಕ ಸಾರಿಗೆ, ಜಲಮಾರ್ಗಗಳು ಮತ್ತು ಲಾಜಿಸ್ಟಿಕ್ಸ್ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಮೂಲಕ ಇದನ್ನು ಸಾಧಿಸುವುದಾಗಿ ಸರಕಾರ ಹೇಳಿದೆ. ಈ ಯೋಜನೆಯಡಿ ಸರಕಾರವು ರಾಷ್ಟ್ರೀಯ ಹೆದ್ದಾರಿ ಜಾಲವನ್ನು 25 ಸಾವಿರ ಕಿ.ಮೀ.ನಷ್ಟು ವಿಸ್ತರಿಸಲು ನಿರ್ಧರಿಸಿದೆ. ಜನರು ಮತ್ತು ಸರಕುಗಳ ಸಂಚಾರಕ್ಕೆ ವೇಗ ನೀಡುವ ನಿಟ್ಟಿನಲ್ಲಿ ಎಕ್ಸ್‌ಪ್ರಸ್‌ವೇಗಳನ್ನು ನಿರ್ಮಿಸುವ ಗುರಿ ಹಾಕಿಕೊಳ್ಳಲಾಗಿದೆ. ಸರಕಾರಿ-ಖಾಸಗಿ ಸಹಭಾಗಿತ್ವದಲ್ಲಿ ದೇಶದ 4 ಕಡೆ ಮಲ್ಟಿಮಾಡೆಲ್ ಲಾಜಿಸ್ಟಿಕ್ಸ್ ಪಾರ್ಕ್‌ಗಳನ್ನು ನಿರ್ಮಾಣ ಮಾಡಲಾಗುತ್ತದೆ.