Advertisement

ಕೃಷಿಗೆ ಬಜೆಟ್‌ ಬಲ ನಿರೀಕ್ಷೆ

01:39 AM Jan 23, 2021 | Team Udayavani |

ಹೊಸದಿಲ್ಲಿ: ಫೆ.1ರಂದು ಮಂಡಿಸಲಾಗುವ ಬಜೆಟ್‌ನಲ್ಲಿ ಕೇಂದ್ರ ಸರಕಾರವು ಕೃಷಿ ವಲಯದ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಮೊತ್ತ ಮೀಸಲಿಡಬಹುದು ಎಂಬ ನಿರೀಕ್ಷೆ ಮೂಡಿದೆ.

Advertisement

ಈಗಾಗಲೇ ಕೇಂದ್ರ ಸರಕಾರವು ರೈತರ ಆದಾಯವನ್ನು ದ್ವಿಗುಣಗೊಳಿಸುವ ಗುರಿಯನ್ನು ಹಾಕಿಕೊಂಡಿರುವುದಾಗಿ ಹೇಳಿಕೊಂಡೇ ಬಂದಿದೆ. ಅದರಂತೆ ಈ ಉದ್ದೇಶ ಸಾಧಿಸ ಬೇಕೆಂದರೆ ಕೃಷಿ ಕ್ಷೇತ್ರದ ಮೂಲಸೌಕರ್ಯ ಅಭಿವೃದ್ಧಿ, ರೈತ ಸಮೂಹವನ್ನು ಬಲಿಷ್ಠ ಗೊಳಿಸುವಿಕೆ, ಆಹಾರ ಸಂಸ್ಕೃ ರಣೆ ಮತ್ತಿತರ ವಿಚಾರಗಳ ಮೇಲೆ ಗಮನ ಕೇಂದ್ರೀಕರಿಸಬೇಕಾಗುತ್ತದೆ.

ಈ ಹಿಂದೆಯೇ ಘೋಷಿಸಲಾದ 10 ಸಾವಿರ ಹೊಸ ರೈತ ಉತ್ಪಾದಕರ ಸಂಸ್ಥೆಗಳು(ಎಫ್ಪಿಒ) ನಾಯಕತ್ವ, ಸಾಮರ್ಥ್ಯ ಮತ್ತು ಪರಿಣಾಮಕಾರಿ ಮೂಲಸೌಕರ್ಯದ ಕೊರತೆಯಿಂದ ಬಳಲು ತ್ತಿವೆ. ಹೀಗಾಗಿ ಪ್ರಸ್ತುತ ರಚನೆಯಾಗಿರುವ ಈ ಸಂಸ್ಥೆಗಳನ್ನು ಬಲಿಷ್ಟಗೊಳಿಸಲು ಸೂಕ್ತ  ಹಣಕಾ ಸಿನ ನೆರವು ನೀಡುವತ್ತ, ಮಾರುಕಟ್ಟೆಯೊಂದಿಗೆ ಸಣ್ಣ ರೈತರು ಸಂಪರ್ಕ ಸಾಧಿಸಲು ಅಗತ್ಯವಾದ ಇನ್ನಷ್ಟು ಎಫ್ಪಿಒಗಳನ್ನು ರಚಿಸುವತ್ತ ಸರಕಾರ ಹೆಜ್ಜೆ ಹಾಕಬೇಕು ಎಂದು ತಜ್ಞರು ಅಭಿ ಪ್ರಾಯಪಟ್ಟಿದ್ದಾರೆ.

2021ರ ವಿತ್ತ ವರ್ಷದಲ್ಲಿ ಕೃಷಿ ಕ್ಷೇತ್ರಕ್ಕೆ 2 ಲಕ್ಷ ಕೋಟಿ ರೂ.ಗಳನ್ನು ಮೀಸಲಿಡಲಾಗಿತ್ತು.

ಆರೋಗ್ಯ, ಶಿಕ್ಷಣ ಸೆಸ್‌ ಶೇ.2ರಷ್ಟು ಏರಿಕೆ? :

Advertisement

ಬಜೆಟ್‌ನಲ್ಲಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಶೇ.2ರ ವರೆಗೆ ಸೆಸ್‌ ಹೆಚ್ಚಿ ಸಲು  ವಿಧಿಸಲು ಕೇಂದ್ರ ಸರಕಾರ ಚಿಂತನೆ ನಡೆಸುತ್ತಿದೆ. ವಿತ್ತ ಸಚಿವಾಯ ಮತ್ತು ಕಂದಾಯ ವಿಭಾಗ ಈ ಬಗ್ಗೆ ಪರಾಮರ್ಶೆ ನಡೆಸುತ್ತಿದೆ. ಸದ್ಯ ಆರೋಗ್ಯ ಕ್ಷೇತ್ರದ ಮೇಲೆ ಶೇ.4 ಸೆಸ್‌ ವಿಧಿಸಲಾಗುತ್ತಿದೆ. ಎರಡೂ ಕ್ಷೇತ್ರಗಳಿಂದ 30 ಸಾವಿರ ಕೋಟಿ ರೂ. ಬೊಕ್ಕಸಕ್ಕೆ ಬರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next