ಮುಂಬಯಿ: ಯೂನಿ ಯನ್ ಬ್ಯಾಂಕ್ ಆಫ್ ಇಂಡಿಯಾವು ಬೊÅಕೇಜ್ ಹೌಸ್ ಎಸ್‌ಎಂಸಿ ಗ್ಲೋಬಲ್ ಸೆಕ್ಯುರಿಟೀಸ್ ಲಿಮಿಟೆಡ್‌ನೊಂದಿಗೆ ಕಾರ್ಯತಂತ್ರದ ಮೈತ್ರಿ ಒಪ್ಪಂದಕ್ಕೆ ಸಹಿಮಾಡಿಕೊಂಡಿದೆ.
ಡೆಸ್ಕ್ ಟಾಪ್ ಹೊರತುಪಡಿಸಿ www.smctradeonline. ಪೋರ್ಟಲ್ ಮೂಲಕ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗೆ ಆನ್‌ಲೈನ್ ಮೊಬೈಲ್ ಅಪ್ಲಿಕೇಶನ್ ವ್ಯಾಪಾರ ಸೇವೆಗಳನ್ನು ನೀಡುತ್ತದೆ.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ 9,500 ಶಾಖೆಗಳಿಗೆ ಸೇವೆ ಸಲ್ಲಿಸಬಲ್ಲ 550ಕ್ಕೂ ಹೆಚ್ಚು ನಗರಗಳಲ್ಲಿ ಎಸ್‌ಎಂಸಿ ಅಸ್ತಿತ್ವದಲ್ಲಿದೆ. ವಹಿವಾಟಿನ ವೇದಿಕೆಯು ವಹಿವಾಟಿನ ವೇಗದ ಪರಿಣಾಮಕಾರಿ ಸುರಕ್ಷತೆ, ಉನ್ನತ-ಮಟ್ಟದ ಸಂಯೋಜಿತ ಅಪ್ಲಿಕೇಶನ್ ಆಗಿದೆ. ಈ ಒಪ್ಪಂದವು ಬ್ಯಾಂಕ್ ತನ್ನ ಖಾತೆದಾರರಿಗೆ ಹೆಚ್ಚುವರಿ ಸೇವೆಗಳನ್ನು ಒದಗಿಸಲು ಸಹಾಯ ಮಾಡುತ್ತದೆ.
ಇದರೊಂದಿಗೆ ಬ್ಯಾಂಕ್‌ಗೆ ಹೆಚ್ಚುವರಿ ಆದಾಯವನ್ನು ನೀಡುತ್ತದೆ.
ಈಗ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಇ-ಟ್ರೇಡಿಂಗ್ ಕ್ಲೆ çಟ್ ಬ್ಯಾಂಕ್ ಖಾತೆಯನ್ನು ಹಾಗೂ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದೊಂದಿಗೆ ಡಿಮ್ಯಾಟ್ ಖಾತೆಯನ್ನು ಮತ್ತು ಎಸ್‌ಎಂಸಿ ಗ್ಲೋಬಲ್ ಲಿಮಿಟೆಡ್ ಸೆಕ್‌ನಲ್ಲಿನ ವ್ಯಾಪಾರ ಖಾತೆಯನ್ನು ನಿರ್ವಹಿಸುತ್ತದೆ.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಎಸ್‌ಎಂಸಿಯ ಸಹ ಯೋಗದೊಂದಿಗೆ ಮೊಬೈಲ್ ಅಥವಾ ಡೆಸ್ಕಾ$rಪ್ ಮೂಲಕ ಷೇರುಗಳಲ್ಲಿ ಹೂಡಿಕೆ, ವಹಿವಾಟು ನಡೆಸಲು ವೇಗವಾಗಿ, ಅನುಕೂಲಕರ ಮತ್ತು ಸಮಸ್ಯೆ ಮುಕ್ತ ಮಾರ್ಗವನ್ನು ತರುತ್ತದೆ ಎಂದು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಶೀಶ್ ಪಾಂಡೆ ಹೇಳಿದ್ದಾರೆ.
ಎಸ್‌ಎಂಸಿ ಗ್ಲೋಬಲ್ ನಿರ್ದೇಶಕ ಅಜಯ್ ಗಾರ್ಗ್ ಮಾತನಾಡಿ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದೊಂದಿಗೆ ಒಪ್ಪಂದ ಮಾಡಿಕೊಳ್ಳುವುದು ನಮಗೆ ಪ್ರತಿಷ್ಠೆಯ ವಿಷಯವಾಗಿದೆ. ಇದು ಎಸ್‌ಎಂಸಿಗೆ ತನ್ನ ಅಸ್ತಿತ್ವವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಎಸ್‌ಎಂಸಿಗೆ ತನ್ನ ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಲು ಇದು ಸಹಾಯ ಮಾಡುತ್ತದೆ ಎಂದು ಹೇಳಿದರು.