Advertisement

ವರ್ಷದಲ್ಲಿ ಸಹಕಾರಿ ಬ್ಯಾಂಕ್‌ಗಳಿಗೆ ಏಕರೂಪದ ತಂತ್ರಾಂಶ: ಸಚಿವ ಸೋಮಶೇಖರ್‌

12:45 AM Jan 31, 2022 | Team Udayavani |

ಮಂಗಳೂರು: ಸಹಕಾರಿ ಬ್ಯಾಂಕ್‌ಗಳಿಗೆ ಒಂದು ವರ್ಷದಲ್ಲಿ ಏಕರೂಪದ ತಂತ್ರಾಂಶ ರೂಪಿಸುವ ಯೋಜನೆ ಪ್ರಗತಿ ಯಲ್ಲಿದೆ ಎಂದು ಸಹಕಾರಿ ಸಚಿವ ಎಸ್‌.ಟಿ. ಸೋಮಶೇಖರ್‌ ತಿಳಿಸಿದ್ದಾರೆ.

Advertisement

ರಾಜ್ಯದ ಡಿಸಿಸಿ ಬ್ಯಾಂಕ್‌ಗಳ ಸಹಿತ ವಿವಿಧ ಸಹಕಾರಿ ಬ್ಯಾಂಕ್‌ಗಳಿಗೆ ಏಕರೂಪದ ತಂತ್ರಾಂಶ ಅಳವಡಿಕೆಯ ಬಗ್ಗೆ ರೂಪಿಸಲಾದ 3 ವರ್ಷಗಳ ಯೋಜನೆಯನ್ನು ಒಂದೇ ವರ್ಷದಲ್ಲಿ ಪೂರ್ಣಗೊಳಿಸಲು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಕೇಂದ್ರದ ಶೇ. 60, ಅಪೆಕ್ಸ್‌ ಬ್ಯಾಂಕ್‌ನ ಶೇ. 10, ಡಿಸಿಸಿ ಬ್ಯಾಂಕ್‌ ಮತ್ತು ರಾಜ್ಯ ಸರಕಾರದ ಶೇ. 20 ಅನುದಾನದಿಂದ ಈ ಯೋಜನೆ ಪೂರ್ಣ ಗೊಳಿಸಲಾಗುವುದು. ಇದು ಪೂರ್ಣಗೊಂಡರೆ ರಾಜ್ಯದ 5,400 ಬ್ಯಾಂಕ್‌ ಶಾಖೆಗಳ ಆಡಳಿತ ವ್ಯವಹಾರಗಳನ್ನು ಅಪೆಕ್ಸ್‌ ಬ್ಯಾಂಕ್‌ನ ಒಂದೇ ಕಡೆಯಿಂದ ನಿರ್ವಹಣೆ ಮಾಡಬಹುದು ಮತ್ತು ನಿರ್ದೇಶನ ನೀಡಬಹುದಾಗಿದೆ ಎಂದವರು ಸುದ್ದಿಗಾರರಿಗೆ ತಿಳಿಸಿದರು.

ಕೇಂದ್ರ ಸಹಕಾರ ಸಚಿವ ಅಮಿತ್‌ ಶಾ ಜತೆಗೆ ರಾಜ್ಯದಲ್ಲಿ ನಿಗದಿಯಾಗಿದ್ದ ಎರಡು ಸಭೆಗಳನ್ನು ಕೊರೊನಾ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ. ಮುಂದಿನ ಸಭೆಯಲ್ಲಿ ನಬಾರ್ಡ್‌ ನಿಂದ ರಾಜ್ಯಕ್ಕೆ ಹೆಚ್ಚುವರಿ ಸಾಲಕ್ಕೆ ಬೇಡಿಕೆ ಸಲ್ಲಿಸಲಾಗುವುದು ಎಂದರು.

ಇದನ್ನೂ ಓದಿ:ಸೌದಿ ಅರೇಬಿಯಾದಲ್ಲಿ ಮೊದಲ ಯೋಗಾ ಉತ್ಸವ

Advertisement

ಸಹಕಾರಿ ಕಾಯ್ದೆಗೆ ತಿದ್ದುಪಡಿ: ಮುಂದಿನ ಅಧಿವೇಶನದಲ್ಲಿ ಕ್ರಮ
ಸಹಕಾರ ಕ್ಷೇತ್ರಕ್ಕೆ ಅಡಚಣೆ ಇರುವಂತಹ ಅಂಶಗಳಲ್ಲಿ ಕೆಲವನ್ನು ಈಗಾಗಲೇ ತಿದ್ದುಪಡಿ ಮಾಡಲಾಗಿದ್ದು, ಉಳಿದ ತಿದ್ದುಪಡಿಗಳ ಬಗ್ಗೆ ಸಹಕಾರಿ ಕ್ಷೇತ್ರದ ಪ್ರಮುಖರು ಬೇಡಿಕೆ ಮಂಡಿಸಿದ್ದಾªರೆ. ಅವುಗಳನ್ನು ಕೂಡ ತಿದ್ದುಪಡಿ ಮಾಡಲು ಮುಂದಿನ ಅಧಿವೇಶನದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಸೋಮಶೇಖರ್‌ “ಆತ್ಮಶಕ್ತಿ ಸೌಧ’ ಉದ್ಘಾಟನ ಸಮಾರಂಭದಲ್ಲಿ ತಿಳಿಸಿದರು.

ದೊಡ್ಡ ಮೊತ್ತದ ಸಹಕಾರಿ ಸಾಲ ಮರು ಪಾವತಿಸದೆ ಸುಸ್ತಿದಾರರಾಗಿರುವವರು ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹತೆ ವಿಚಾರ, ಸಹಕಾರಿ ಸಂಸ್ಥೆಯ ನಿರ್ದೇಶಕರು ಅಧಿಕಾರಾವಧಿಯ ಎರಡೂವರೆ ವರ್ಷದೊಳಗೆ ಸಾವನ್ನಪ್ಪಿದರೆ ತೆರವಾದ ಸ್ಥಾನಕ್ಕೆ ಚುನಾವಣೆ ನಡೆಸುವುದು ಮತ್ತಿತರ ಕೆಲವು ಅಂಶಗಳು ತಿದ್ದುಪಡಿಯ ಪ್ರಮುಖ ಅಂಶಗಳು. ಕೇಂದ್ರ ಸರಕಾರದ ಮಟ್ಟದಲ್ಲಿ ತಿದ್ದುಪಡಿ ಮಾಡಬೇಕಾದ ಕೆಲವು ಅಂಶಗಳನ್ನು ಕೇಂದ್ರಕ್ಕೆ ಕಳುಹಿಸಿಕೊಡಲಾಗಿದೆ ಎಂದರು.

ಖಾಲಿ ಹುದ್ದೆ ಭರ್ತಿ
ರಾಜ್ಯದ ಸಹಕಾರಿ ಕ್ಷೇತ್ರದಲ್ಲಿ 3 ಸಾವಿರ ಹುದ್ದೆಗಳಿಗೆ ನೇಮಕಾತಿ ಮಾಡಲಾಗಿದೆ. ಉಳಿದ 2 ಸಾವಿರ ಹುದ್ದೆಗಳಿಗೆ ಶೀಘ್ರ ನೇಮಕಾತಿ ಮಾಡಲಾಗುವುದು. ಮಂಗ ಳೂರಿನ ಡೈರಿಯಲ್ಲಿ 60-70 ಹುದ್ದೆಗಳು, ಉಳಿದಂತೆ ಡಿಸಿಸಿ ಬ್ಯಾಂಕ್‌ಗಳು, ನಗರ ಸಹಕಾರಿ ಸಂಘಗಳಲ್ಲಿ ಕೂಡ ಹುದ್ದೆಗಳು ಖಾಲಿ ಇವೆ ಎಂದು ಸಚಿವರು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next