Advertisement

ದೇಶಾದ್ಯಂತ ಏಕರೂಪ ಡಿಎಲ್‌

10:12 AM Dec 19, 2018 | Team Udayavani |

ಹೊಸದಿಲ್ಲಿ: ದೇಶಾದ್ಯಂತ ಏಕರೂಪ ಡ್ರೈವಿಂಗ್‌ ಲೈಸೆನ್ಸ್‌ ನಿಯಮವನ್ನು ಕೇಂದ್ರ ಸರಕಾರ ಶೀಘ್ರ ದಲ್ಲೇ ಜಾರಿಗೆ ತರಲಿದೆ. ಇದರಿಂದಾಗಿ ಇಡೀ ದೇಶದಲ್ಲಿ ನೀಡಲಾಗುವ ಡ್ರೈವಿಂಗ್‌ ಲೈಸೆನ್ಸ್‌ ಒಂದೇ ರೀತಿ ಇರಲಿದೆ. ಅಷ್ಟೇ ಅಲ್ಲ, ಸದ್ಯ ರಾಜ್ಯದ ಲಾಂಛನ ಹಾಗೂ ಯಾವ ರಾಜ್ಯ ಈ ಲೈಸೆನ್ಸ್‌ ನೀಡಿದೆ ಎಂಬ ಮಾಹಿತಿ ಡ್ರೈವಿಂಗ್‌ ಲೈಸೆನ್ಸ್‌ನಲ್ಲಿ ಇರುತ್ತದೆ. ಆದರೆ ಹೊಸ ನೀತಿ ಜಾರಿಗೆ ಬಂದ ಬಳಿಕ ಡ್ರೈವಿಂಗ್‌ ಲೈಸೆನ್ಸ್‌ ಮೇಲೆ ಭಾರತ ಸರಕಾರ ಎಂದು ನಮೂದಿಸ ಲಾಗುತ್ತದೆ ಎಂದು ಕೇಂದ್ರದ ಅಧಿಕಾರಿ ಯೊಬ್ಬರು ಮಾಹಿತಿ ನೀಡಿದ್ದಾರೆ. ಲ್ಯಾಮಿ ನೇಟೆಡ್‌ ಅಥವಾ ಸ್ಮಾರ್ಟ್‌ ರೂಪದಲ್ಲಿ ಕಾರ್ಡ್‌ ಇರ ಲಿದೆ. ಇದರಲ್ಲಿ ಕ್ಯೂಆರ್‌ ಕೋಡ್‌ ಇರುತ್ತದೆ. ಅಷ್ಟೇ ಅಲ್ಲ ಎನ್‌ಎಫ್ಸಿ ಸೌಲಭ್ಯವೂ ಇದರಲ್ಲಿರಲಿದೆ.

Advertisement

ಒಂದೊಂದು ರಾಜ್ಯದಲ್ಲೂ ಒಂದೊಂದು ಬಣ್ಣ ಹಾಗೂ ಮಾದರಿಯಲ್ಲಿ ಡ್ರೈವಿಂಗ್‌ ಲೈಸೆನ್ಸ್‌ ಇದೆ. ಈಗಾಗಲೇ ಡಿಎಲ್‌ ಪಡೆದಿ ರುವವರಿಗೆ ಹೊಸ ಲೈಸೆನ್ಸ್‌ ಕಾರ್ಡ್‌ ಪಡೆಯಲು ಅವಕಾಶ ನೀಡಲಾಗುತ್ತದೆ. ಹೊಸ ನೀತಿಯ ಬಗ್ಗೆ ಅಕ್ಟೋಬರ್‌ನಲ್ಲೇ ಕೇಂದ್ರ ಸರಕಾರ ಅಭಿಪ್ರಾಯ ಸಂಗ್ರಹಿಸಿದೆ. ಈ ಅಭಿಪ್ರಾಯಗಳನ್ನು ಅಧರಿಸಿ ಶೀಘ್ರದಲ್ಲೇ ನಿಯಮ ಜಾರಿಗೊಳಿಸಲಾಗುತ್ತದೆ.

ಈಗಾಗಲೇ ಎಲ್ಲ ರಾಜ್ಯಗಳಲ್ಲಿ ನೀಡಲಾದ ಡ್ರೈವಿಂಗ್‌ ಲೈಸೆನ್ಸ್‌ ಮಾಹಿತಿಯನ್ನು ಕೇಂದ್ರ ಸರಕಾರ ಸಂಗ್ರಹಿಸಿದೆ. ನಕಲಿ ಡ್ರೈವಿಂಗ್‌ ಲೈಸೆನ್ಸ್‌ ಹಾಗೂ ಒಬ್ಬರೇ ಎರಡು ರಾಜ್ಯಗಳಲ್ಲಿ ಡಿಎಲ್‌ ಮಾಡಿಸಿಕೊಳ್ಳುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next