ಮೈಸೂರು: ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಏಕರೂಪ ಪಠ್ಯಕ್ರಮ ಜಾರಿಗೆ ತರುವ ರಾಜ್ಯ ಸರ್ಕಾರದ ಚಿಂತನೆ ಅವೈಜ್ಞಾನಿಕವಾಗಿದ್ದು, ಇದು ವಿವಿಗಳ ಸ್ವಾಯತ್ತತೆಗೆ ಮಾರಕವಾಗಲಿ ದೆ ಎಂದು ಕರ್ನಾಟಕ ರಾಜ್ಯ ವಿಶ್ರಾಂತ ಕುಲಪತಿಗಳ ಸಂಘದ ಸದಸ್ಯರು ಹಾಗೂ ವಿಶ್ರಾಂತ ಕುಲಪತಿ ಪ್ರೊ.ಎಸ್.ಎನ್. ಹೆಗಡೆ ಹೇಳಿದರು.
ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಒಂದೇ ರೀತಿಯ ಪಠ್ಯಕ್ರಮ ಅಳವಡಿಸುವ ಸರ್ಕಾರದ ಚಿಂತನೆ ವಿಶ್ವವಿದ್ಯಾಲಯಗಳ ಪರಿಕಲ್ಪನೆಗೆ ವ್ಯತಿರಿಕ್ತವಾದುದು. ವಿಶ್ವವಿದ್ಯಾಲಯಗಳು ಸ್ವಾಯತ್ತತೆಯಿಂದ ಕೂಡಿದ ಹಾಗೂ ವೈವಿಧ್ಯತೆಯಿಂದ ಕೂಡಿದ ಸಂಸ್ಥೆಗಳು. ಇವುಗಳನ್ನು ಕೇಂದ್ರಿಕೃತ ವ್ಯವಸ್ಥೆಗೆ ಒಳಪಡಿಸುವುದು ಸರಿಯಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಸರ್ಕಾರಕ್ಕೆ ಸಲಹೆ ನೀಡಿದರು.
ಬೋಧಕರ ಕೊರತೆ: ವಿಶ್ವವಿದ್ಯಾಲಯದಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಬೋಧಕರ ಅವಶ್ಯಕತೆಯಿದೆ. ಆದರೆ ವಾಸ್ತವದಲ್ಲಿ ರಾಜ್ಯದ ಎಲ್ಲಾ ವಿವಿಗಳಲ್ಲೂ ಬೋಧಕರ ಗಣನೀಯ ಕೊರತೆ ಎದ್ದು ಕಾಣುತ್ತಿದೆ. ಸರ್ಕಾರ ಮೊದಲು ಬೋಧಕರ ಕೊರತೆ ನೀಗಿಸಲು ಪ್ರಯತ್ನಿಸಬೇಕು. ಇಲ್ಲವಾದರೆ ನಮ್ಮ ವಿವಿಗಳು ಸ್ಪರ್ಧಾತ್ಮಕ ಯುಗದಲ್ಲಿ ಹಿಂದೆ ಬೀಳಲಿವೆ ಎಂದರು.
ಆನ್‌ಲೈನ್ ಶಿಕ್ಷಣಕ್ಕೆ ಸಿದ್ಧತೆ ಅಗತ್ಯ: ವಿಶ್ರಾಂತ ಕುಲಪತಿ ಪ್ರೊ.ಪಿ.ವೆಂಕಟರಾಮಯ್ಯ ಮಾತ ನಾಡಿ, ಇತ್ತೀಚೆಗೆ ಪ್ರಾಥಮಿಕ ಹಂತದಿಂದ ಉನ್ನತ ಶಿಕ್ಷಣದ ವರೆಗೆ ಆನ್‌ಲೈನ್ ಶಿಕ್ಷಣ ಅಳವಡಿಸಿ ಕೊಳ್ಳಬೇಕು ಎಂಬ ಚರ್ಚೆ ನಡೆಯುತ್ತಿದೆ. ನಮ್ಮ ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳು ಕೆಲವನ್ನು ಹೊರತುಪಡಿಸಿದರೆ ಉಳಿದ ಸಂಸ್ಥೆಗಳು ಈ ಬದಲಾವಣೆಗೆ ಸಿದ್ಧತೆ ಮಾಡಿಕೊಂಡಿಲ್ಲ. ಸಾಮಾನ್ಯ ಪದವಿ ತರಗತಿ ವಿದ್ಯಾ ರ್ಥಿಗಳು ಈ ವಿಧಾನ ಅನುಸರಿಸಿ ಪಾಠಗಳನ್ನು ಕೇಳುವ ಕೌಶಲ್ಯ ಪಡೆದುಕೊಂಡಿಲ್ಲ.
ಜೊತೆಗೆ ಅವರಲ್ಲಿ ಅದಕ್ಕೆ ಬೇಕಾದ ಸೌಕರ್ಯಗಳೂ ಇಲ್ಲ. ಆನ್‌ಲೈನ್ ಮೂಲಕ ಪಾಠ ಗಳೆಲ್ಲವನ್ನೂ ಮಾಡಲಾಗುವುದಿಲ್ಲ. ಜೊತೆಗೆ ವಿಜ್ಞಾನ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿ ಇದರಿಂದ ಮಾಡಲಾಗದು. ಈ ಬಗ್ಗೆ ಶಿಕ್ಷಣ ತಜ್ಞರ ಜೊತೆ ಗಂಭೀರ ಚರ್ಚೆ ಅವಶ್ಯಕ. ಎಲ್ಲಕ್ಕಿಂತ ಮಿಗಿಲಾಗಿ ಕಾಲೇಜು ಗಳಲ್ಲಿ ಕೆಲಸ ನಿರ್ವಹಿಸು ತ್ತರುವ ನಮ್ಮ ಹಿರಿಯ ಅಧ್ಯಾಪಕ ವೃಂದ ಆನ್‌ಲೈನ್ ಶಿಕ್ಷಣ ನೀಡುವ ತರಬೇತಿ ಪಡೆದಿರುವುದಿಲ್ಲ ಎಂದು ತಿಳಿಸಿದರು. ಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ವಿಶ್ರಾಂತ ಕುಲಪತಿಗಳ ಸಂಘದ ಸದಸ್ಯರಾದ ಪ್ರೊ.ಜೆ.ಎ.ಕೆ.ತರೀಕ್, ಅಂಬಳಿಕೆ ಹಿರಿಯಣ್ಣ ಇತರರಿದ್ದರು.
ಮೆಂಟರ್ ಶಿಪ್ ಅಳವಡಿಕೆ ಅಸಾಧ್ಯ: ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಮೆಂಟರ್‌ಶಿಪ್ ಅಳವಡಿಕೆ ಉತ್ತಮ ವಿಧಾನವಾ ಗಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಅದು ಸಫಲವಾಗುವುದಿಲ್ಲ. ಏಕೆಂದರೆ ನಮ್ಮಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕ ಮತ್ತು ವಿದ್ಯಾರ್ಥಿಗಳ ಅನುಪಾತ ಹೆಚ್ಚಿದೆ. ಪದವಿ ತರಗತಿಗಳಲ್ಲಿ 80ರಿಂದ 90 ವಿದ್ಯಾರ್ಥಿಗಳು ಇರುವುದರಿಂದ ಮೆಂಟರ್‌ಶಿಪ್ ಅಳವಡಿಕೆ ಮಾಡುವುದು ಅಸಾಧ್ಯ ಎಂದು ಮುಕ್ತ ವಿವಿ ವಿಶ್ರಾಂತ ಕುಲಪತಿ ಪ್ರೊ.ರಾಮೇಗೌಡ ಹೇಳಿದರು.