Advertisement

ಯೂನಿಫಾರ್ಮ್ ಶಾಲೆಯಲ್ಲಿ ಕಡ್ಡಾಯ, ಪರೀಕ್ಷಾ ಕೇಂದ್ರದಲ್ಲಿ ಕಡ್ಡಾಯವಿಲ್ಲ; ದಿನೇಶ್ ಗುಂಡೂರಾವ್

04:28 PM Mar 27, 2022 | Team Udayavani |

ಬೆಂಗಳೂರು: ನಾಳೆಯಿಂದ ಎಸ್ಎಸ್ಎಲ್ ಸಿ ಪರೀಕ್ಷೆ ಆರಂಭವಾಗುತ್ತಿದೆ. ಈ ಪರೀಕ್ಷೆ ಆಯಾ ಶಾಲೆಯಲ್ಲಿ ನಡೆಯುವುದಿಲ್ಲ, ಬೇರೆ ಬೇರೆ ಶಾಲೆಯ ಮಕ್ಕಳು ಒಂದು ಕೇಂದ್ರದಲ್ಲಿ ಪರೀಕ್ಷೆ ಬರೆಯುತ್ತಾರೆ. ಶಾಲೆಗಳಲ್ಲಿ ಯೂನಿಫಾರ್ಮ್ ಕಡ್ಡಾಯ ಮಾಡಿದ್ದಾರೆ, ಆದರೆ ಪರೀಕ್ಷಾ ಕೇಂದ್ರದಲ್ಲಿ ಮಾಡಿಲ್ಲ. ಕೆಲವು ಶಾಲೆಯಲ್ಲಿ ಹಿಜಾಬ್ ಯೂನಿಫಾರ್ಮ್ ಇದೆ, ಅದನ್ನ ಹೇಗೆ ನಿಭಾಯಿಸುತ್ತಾರೆ. ಕೆಲವು ಶಾಲೆಯಲ್ಲಿ ಬೇರೆ ಯೂನಿಫಾರ್ಮ್ ಇದೆ, ಕೆಲವು ಶಾಲೆಯಲ್ಲಿ ಯೂನಿಫಾರ್ಮೆ ಸಿಕ್ಕಿಲ್ಲ. ಸರ್ಕಾರ ಮಕ್ಕಳ ಭವಿಷ್ಯದ ಕಡೆ ಹೆಚ್ಚಿನ ಗಮನ ಕೊಡಬೇಕು ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಹೇಳಿದರು.

Advertisement

ಶೇಷಾದ್ರಿಪುರಂ ಕೋವಿಡ್ ಯೋಧರಿಗೆ ಸನ್ಮಾನ ಕಾರ್ಯಕ್ರಮದ ನಂತರ ಮಾತನಾಡಿದ ಅವರು, ದೇವಸ್ಥಾನಗಳ ಬಳಿ ಅನ್ಯಕೋಮಿನ ವರ್ತಕರಿಗೆ ಅವಕಾಶ ಇಲ್ಲ ಎಂದರೆ ನಾವು ಯಾವ ದಿಕ್ಕಿನ ಕಡೆ ಹೋಗುತ್ತಿದ್ದೇವೆ? ಉರೂಸ್ ಸಂದರ್ಭದಲ್ಲಿ ಹಿಂದೂ ವರ್ತಕರು ವ್ಯಾಪಾರದಲ್ಲಿ ತೊಡಗುತ್ತಾರೆ. ಇದು ಎಲ್ಲ ಧರ್ಮಗಳ ರಾಷ್ಟ್ರ, ಕೇವಲ, ಹಿಂದೂ, ಮುಸ್ಲಿಂ, ಕ್ರೈಸ್ತರ ದೇಶವಲ್ಲ ಎಲ್ಲ ಸಮುದಾಯದ, ಎಲ್ಲ ಧರ್ಮದವರಿಗೂ ಸೇರಿದ ರಾಷ್ಟ್ರ ಇಲ್ಲಿ ಸಾಮರಸ್ಯದಿಂದ ಇರಬೇಕು ಎಂದರು.

ಸರ್ಕಾರವು ಮಕ್ಕಳ ಮೇಲೆ ಒತ್ತಡ ಹಾಕಬಾರದು. ಇದನ್ನೇ ಸಿದ್ದರಾಮಯ್ಯನವರು ಹೇಳಿದ್ದು. ಅವರು ದುಪ್ಪಟ್ಟನ್ನ ಅನೇಕರು ಅನೇಕ ರೀತಿಯಲ್ಲಿ ಹಾಕಿಕೊಳ್ಳುತ್ತಾರೆ, ಹೆಂಗಸರು ಹಾಕುತ್ತಾರೆ, ಸ್ವಾಮಿಜಿಯವರೂ ಹಾಕುತ್ತಾರೆ ಎಂದು ಹೇಳಿದ್ದಾರೆ, ಅವರು ಯಾರ ವಿರುದ್ಧವೂ ಮಾತನಾಡಿಲ್ಲ, ಸ್ವಾಮಿಜಿಯವರ ಬಗ್ಗೆ ಯಾರಾದರೂ ಮಾತನಾಡುತ್ತಾರಾ ಎಂದು ಪ್ರಶ್ನಿಸಿದರು.

ಇದನ್ನೂ ಓದಿ:ಭಾರತೀಯ ಸಮಾಜದಲ್ಲಿ ಸಂಸ್ಕೃತ ಭಾಷೆ ಕೊಡುಗೆ ಅಪಾರ: ರಾಜ್ಯಪಾಲ ಗೆಹ್ಲೋಟ್

ಬಿಜೆಪಿಯವರಿಗೆ ಇಂತಹ ವಿಚಾರಗಳೇ ಬೇಕು, ಮಕ್ಕಳ ವಿದ್ಯಾಭ್ಯಾಸ, ಬೆಲೆ ಏರಿಕೆಯ ಬಗ್ಗೆ ಮಾತಾಡ್ತಾರಾ, ಕಾಶ್ಮೀರ ಫೈಲ್ಸ್, ಹಿಜಾಬ್ ನಂತಹ ವಿಚಾರಗಳೇ ಅವರಿಗೆ ಬೇಕಾಗಿರುವುದು. ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಸುವುದು, ಮಾಧ್ಯಮಗಳಲ್ಲಿ ಹಾಕಿಸುವುದೇ ಬಿಜೆಪಿಯ ಕೆಲಸ. ಈ ರೀತಿಯ ದಿಕ್ಕು ತಪ್ಪಿಸುವುದೇ ಬಿಜೆಪಿಯ ಕೆಲಸ ಎಂದು ಟೀಕಿಸಿದರು.

Advertisement

ಒಬ್ಬ ಹರ್ಷ ಕೊಲೆಯಾದರೆ ದೊಡ್ಡ ವಿಷಯ. ಆದರೆ ದಿನೇಶ್ ಸತ್ತರೆ, ಸಯ್ಯದ್ ಶುಬಾನ್ ಸತ್ತರೆ ಅವರಿಗೆ ವಿಷಯವೇ ಅಲ್ಲ. ಯಾರೇ ತಪ್ಪು ಮಾಡಿದರೂ ಅವರ ವಿರುದ್ಧ ಕ್ರಮ ಕೈಗೊಳ್ಳಿ. ಪಿಎಫ್ ಐ, ಭಜರಂಗದಳ, ಸಂಘ ಪರಿವಾರ ಯಾರೇ ಆದರೂ ಕ್ರಮ ತೆಗೆದುಕೊಳ್ಳಿ ಎಂದು ದಿನೇಶ್ ಗುಂಡೂರಾವ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next