Advertisement

ಅಪರಿಚಿತ ಗಂಡಸಿನ ಶವ ಪತ್ತೆ

09:57 AM May 29, 2018 | Harsha Rao |

ಮಂಗಳೂರು: ನಗರದ ಹೊರವಲಯದ ಬೈಕಂಪಾಡಿ ಎಪಿಎಂಸಿ ಯಾರ್ಡ್‌ನ ಬಳಿಯಲ್ಲಿ ಸುಮಾರು 65- 70 ವರ್ಷ ವಯಸ್ಸಿನ ಅಪರಿಚಿತ ಗಂಡಸಿನ ಶವ ರವಿವಾರ ಪತ್ತೆಯಾಗಿದೆ. 

Advertisement

ಮೃತ ವ್ಯಕ್ತಿ ಕಳೆದೆರಡು ದಿನಗಳಿಂದ ಬೈಕಂಪಾಡಿ ಪರಿಸರದಲ್ಲಿ ಮದ್ಯ ಸೇವಿಸಿ ಸುತ್ತಾಡುತ್ತಿದ್ದನೆಂದು ಪರಿಸರದವರು ತಿಳಿಸಿದ ಹಿನ್ನೆಲೆಯಲ್ಲಿ, ಅತಿಯಾದ ಮದ್ಯ ಸೇವಿಸಿ ಇಲ್ಲವೇ ಯಾವುದೋ ಕಾಯಿಲೆಯಿಂದ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಮೃತ ವ್ಯಕ್ತಿ 5 ಅಡಿ 3 ಇಂಚು ಎತ್ತರ, ಎಣ್ಣೆಗಪ್ಪು ಮೈಬಣ್ಣ ಹಾಗೂ ಕಪ್ಪು ಬಿಳಿ ಮಿಶ್ರಿತ ತಲೆಗೂದಲು ಹೊಂದಿದ್ದು, ನೀಲಿ ಗೆರೆಯ ಚೆಕ್ಸ್‌ ಶರ್ಟ್‌, ಕಪ್ಪು ಬಿಳಿ ಹೂವಿನ ಲುಂಗಿ ಧರಿಸಿದ್ದಾರೆ. 

ಮೃತರ ವಾರಸುದಾರರು  ಪಣಂಬೂರು ಪೊಲೀಸ್‌ ಠಾಣೆಗೆ ತಿಳಿಸುವಂತೆ ಕೋರಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next