Advertisement
ಆಟೋಗೆ ಲಾರಿ ಢಿಕ್ಕಿ: ಮಹಿಳೆಗೆ ಗಾಯಪಡುಬಿದ್ರಿ: ರಸ್ತೆ ಬದಿ ನಿಲ್ಲಿಸಿದ್ದ ಈಚರ್ ಲಾರಿಯನ್ನು ಅದರ ಚಾಲಕ ಹಠಾತ್ ಹೆದ್ದಾರಿಗೆ ನುಗ್ಗಿಸಿದ ಪರಿಣಾಮ ಪಡುಬಿದ್ರಿಯಿಂದ ಕಂಚಿನಡ್ಕಕ್ಕೆ ಹೋಗುತ್ತಿದ್ದ ಆಟೋಗೆ ಢಿಕ್ಕಿಯಾಗಿ ಅದರಲ್ಲಿ ಪ್ರಯಾಣಿಸುತ್ತಿದ್ದ ಬೀನಾ (44) ಅವರು ಗಾಯಗೊಂಡ ಘಟನೆ ಮೂಕಾಂಬಿಕಾ ಗ್ಯಾರೇಜ್ ಬಳಿ ಗುರುವಾರ ರಾತ್ರಿ ನಡೆದಿದೆ. ಅಪಘಾತದಿಂದ ಎಡಗೈ ಮೂಳೆ ಮುರಿತಗೊಂಡಿದ್ದ ಬೀನಾ ಅವರು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಟೋ ಜಖಂಗೊಂಡಿದ್ದು ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.