Advertisement
20 ಮೀ. ರಸ್ತೆಯೂ ಕಾಣುವುದಿಲ್ಲಪುತ್ತೂರು ಕಡೆಯಿಂದ ಬರುವ ವಾಹನಗಳ ಸವಾರರಿಗೆ ಭಕ್ತಕೋಡಿ ಪಶು ಚಿಕಿತ್ಸಾಲಯದ ಬಳಿ ಬಂದಾಗ ಸವಣೂರು ಕಡೆಯಿಂದ ಬರುವ ವಾಹನಗಳು ಕಾಣಿಸುವುದೇ ಇಲ್ಲ. ಅದೇ ರೀತಿ ಸವಣೂರು ಕಡೆಯಿಂದ ಬರುವ ವಾಹನಗಳು ಪುತ್ತೂರು ಕಡೆಯಿಂದ ಬರುವ ವಾಹನಗಳಿಗೆ ಕಾಣಿಸುವುದಿಲ್ಲ. ಇಲ್ಲಿ ರಸ್ತೆ ನೇರವಾಗಿದ್ದರೂ ಕೂಡ 20 ಮೀ. ಅಂತರದಲ್ಲಿ ಎದುರು- ಬದುರು ಬರುವ ವಾಹನಗಳು ಕಾಣಿಸದಷ್ಟು ರಸ್ತೆ ಎತ್ತರವಾಗಿದೆ.
ಕಳೆದ 2 ತಿಂಗಳಲ್ಲಿ ಇಲ್ಲಿ ನಾಲ್ಕು ವಾಹನ ಅಪಘಾತಗಳಾಗಿವೆ. ಯಾವುದೇ ಪ್ರಕರಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿಲ್ಲ. ಆದರೆ ಪ್ರತಿನಿತ್ಯ ಇಲ್ಲಿ ವಾಹನ ಸವಾರರು ಅಪಘಾತದ ಭಯದಿಂದ ಸಂಚರಿಸುವ ವಾತಾವರಣ ಇದೆ. ಪೊಲೀಸ್ ಠಾಣೆಯಲ್ಲಿ ದಾಖಲಾಗುವಂತಹ ಗಂಭೀರ ಅಪಘಾತ ನಡೆಯುವ ಮೊದಲು ಲೋಕೋಪಯೋಗಿ ಇಲಾಖೆ ಎಚ್ಚೆತ್ತುಕೊಳ್ಳಬೇಕು ಎಂದು ಭಕ್ತಕೋಡಿ ಸರಕಾರಿ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಅಶೋಕ್ ಎಸ್.ಡಿ. ಹೇಳಿದ್ದಾರೆ.
Related Articles
Advertisement
ಇದೇ ರೀತಿ ಭಕ್ತಕೋಡಿ ಹಾಗೂ ಮಾಂತೂರು ಅಂಬೇಡ್ಕರ್ ಭವನದ ಮುಂಭಾಗ ಇರುವ ಅವೈಜ್ಞಾನಿಕ ರಸ್ತೆಗಳ ದುರಸ್ತಿ ಶೀಘ್ರಗತಿಯಲ್ಲಿ ಮಾಡಲು ಇಲಾಖೆ ಮುಂದಾದರೆ ಸಾರ್ವಜನಿಕರ, ವಾಹನ ಸವಾರರ ನಿತ್ಯ ಸಂಕಷ್ಟಕ್ಕೆ ಪರಿಹಾರ ಸಿಗಲಿದೆ.
ಸಮಸ್ಯೆ ಬಗೆಹರಿಸಿದ ಪಿಡಬ್ಲ್ಯೂಡಿಇದೇ ರೀತಿ ಪುರುಷರಕಟ್ಟೆ ಹಾಗೂ ಗಡಿಪಿಲ ಎನ್ನುವ ಸ್ಥಳಗಳಲ್ಲಿ ರಸ್ತೆಗಳು ಎದುರು ಬದುರು ಬರುವ ವಾಹನಗಳ ಚಾಲಕರಿಗೆ ಕಾಣದಂತೆ ಇದ್ದ ಅವೈಜ್ಞಾನಿಕ ಉಬ್ಬುಗಳನ್ನು ಸಮತಟ್ಟು ಮಾಡಿ ವಾಹನ ಸವಾರರಿಗೆ ಆಗುತ್ತಿದ್ದ ಸಮಸ್ಯೆಗಳನ್ನು ಲೋಕೋಪಯೋಗಿ ಇಲಾಖೆ ಕಳೆದ ವರ್ಷ ನಿವಾರಿಸಿತ್ತು. ಇದೇ ರೀತಿ ಭಕ್ತಕೋಡಿ ಹಾಗೂ ಮಾಂತೂರು ಅಂಬೇಡ್ಕರ್ ಭವನದ ಮುಂಭಾಗ ಇರುವ ಅವೈಜ್ಞಾನಿಕ ರಸ್ತೆಗಳ ದುರಸ್ತಿ ಶೀಘ್ರಗತಿಯಲ್ಲಿ ಮಾಡಲು ಇಲಾಖೆ ಮುಂದಾದರೆ ಸಾರ್ವಜನಿಕರ, ವಾಹನ ಸವಾರರ ನಿತ್ಯ ಸಂಕಷ್ಟಕ್ಕೆ ಪರಿಹಾರ ಸಿಗಲಿದೆ.