ಭೋಪಾಲ್ : ಶಾರುಖ್ ಖಾನ್ ಅಭಿನಯದ ‘ಪಠಾಣ್’ ಚಿತ್ರದ ಹಾಡಿನ ಸಾಲು ಮತ್ತು ದೃಶ್ಯವೊಂದರ ಕುರಿತಾಗಿ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಮಧ್ಯಪ್ರದೇಶ ಸಚಿವ ಡಾ. ನರೋತ್ತಮ್ ಮಿಶ್ರಾ, ಚಿತ್ರದಲ್ಲಿ ಕೇಸರಿ ವೇಷಭೂಷಣಗಳನ್ನು ಬಳಸಿರುವ ಬಗ್ಗೆ ಕಿಡಿಕಾರಿ, ಕೆಲವು ಆಕ್ಷೇಪಾರ್ಹ ದೃಶ್ಯಗಳಿವೆ , ಆ ಶಾಟ್‌ಗಳನ್ನು ಬದಲಾಯಿಸದಿದ್ದರೆ ಮಧ್ಯಪ್ರದೇಶದಲ್ಲಿ ಪಠಾಣ್ ಚಿತ್ರವನ್ನು ನಿಷೇಧಿಸುವುದಾಗಿ ಬೆದರಿಕೆ ಹಾಕಿದ್ದಾರೆ.
ಮಿಶ್ರಾ ಅವರು ಚಿತ್ರದಲ್ಲಿನ ಬಟ್ಟೆ ಮತ್ತು ದೃಶ್ಯಗಳನ್ನು ಸರಿಪಡಿಸಬೇಕು ಅಥವಾ ಅಳಿಸಬೇಕು, ಆಗ ಮಾತ್ರ ಮಧ್ಯಪ್ರದೇಶದಲ್ಲಿ ಬಿಡುಗಡೆ ಮಾಡಲು ಪಠಾಣ್ ಅನ್ನು ಪರಿಗಣಿಸುವುದು ಯೋಗ್ಯವಾಗಿದೆ ಎಂದು ಟ್ವೀಟ್‌ನಲ್ಲಿ ಹಂಚಿಕೊಂಡಿದ್ದಾರೆ,
ಹಿಂದಿಯಲ್ಲಿ ಮಾಡಿದ ಟ್ವೀಟ್‌ನಲ್ಲಿ, “ವೇಷಭೂಷಣಗಳು ಹೆಚ್ಚು ಆಕ್ಷೇಪಾರ್ಹವಾಗಿವೆ ಮತ್ತು ಹಾಡನ್ನು ಕೊಳಕು ಮನಸ್ಥಿತಿಯಿಂದ ಚಿತ್ರೀಕರಿಸಲಾಗಿದೆ ಎಂದು ನಟಿ ದೀಪಿಕಾ ಪಡುಕೋಣೆ ಅವರನ್ನು ತುಕ್ಡೆ-ತುಕ್ಡೆ ಗ್ಯಾಂಗ್‌ನ ಬೆಂಬಲಿತೆ ಎಂದು ಕರೆದಿದ್ದಾರೆ.
ನಿಷೇಧಕ್ಕೆ ಕರೆ ನೀಡಿದ ಸ್ವಾಮಿ ಚಕ್ರಪಾಣಿ ಮಹಾರಾಜ್
ಏತನ್ಮಧ್ಯೆ,ಅಖಿಲ ಭಾರತ ಹಿಂದೂ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಸ್ವಾಮಿ ಚಕ್ರಪಾಣಿ ಮಹಾರಾಜ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದು, “ಶಾರುಖ್ ಖಾನ್ ಅವರ ಪಠಾಣ್ ಚಿತ್ರದಲ್ಲಿ ಕೇಸರಿ ಮತ್ತು ಹಿಂದೂ ಸಂಸ್ಕೃತದ ಅವಮಾನವಿದೆ, ಚಲನಚಿತ್ರ ಸೆನ್ಸಾರ್ ಮಂಡಳಿ ಏಕೆ ನಿದ್ದೆ ಮಾಡುತ್ತಿದೆ? ನಾವು ನಿಷೇಧ ಹೇರುತ್ತೇವೆ! ಹಿಂದೂ ಮಹಾಸಭಾ ಅದನ್ನು ವಿರೋಧಿಸುತ್ತದೆ.”ಎಂದು ಕಿಡಿ ಕಾರಿದ್ದಾರೆ.
ಪಠಾಣ್ ಚಿತ್ರದ ಮೊದಲ ಹಾಡು ಬೇಷರಂ ರಂಗ್ ಬಿಡುಗಡೆಗೆ ಮುಂಚೆಯೇ ಹೆಚ್ಚು ಹೈಪ್ ಅನ್ನು ಹುಟ್ಟುಹಾಕಿತ್ತು. ಈಜುಡುಗೆಯಲ್ಲಿ ದೀಪಿಕಾ ಪಡುಕೋಣೆ ಅವರ ಗ್ಲಾಮರಸ್ ಚಿತ್ರಗಳು, ಶಾರುಖ್ ಖಾನ್ ಮೈಕಟ್ಟು ತೋರಿಸಿರುವುದು, ಹಲವು ಅಭಿಮಾನಿಗಳು ಎಲ್ಲವನ್ನೂ ಇಷ್ಟಪಟ್ಟಿದ್ದರು. ಸ್ಪೇನ್‌ನ ಕೆಲವು ಪ್ರಶಾಂತ ಸ್ಥಳಗಳಲ್ಲಿ ಸೆರೆಹಿಡಿಯಲಾದ ಹಾಡಿನ ವಿಡಿಯೋ ಡಿಸೆಂಬರ್ 12 ರಂದು ಬಿಡುಗಡೆಯಾಗಿದ್ದು. ದೀಪಿಕಾ ಪಡುಕೋಣೆ ಅವರ ಹಿಂದೆಂದೂ ನೋಡಿರದ ಹಸಿ ಬಿಸಿ ಅವತಾರದಿಂದ ಭಾರಿ ಪ್ರಚಾರಕ್ಕೆ ಬಂದಿದೆ. ಹಾಡಿನಲ್ಲಿ ಅವರ ಧಿರಿಸು ಕೇಸರಿ ಬಣ್ಣ ಚರ್ಚೆಗೆ ಗುರಿಯಾಗಿದ್ದು, ಬೇಷರಂ ರಂಗ್ ಅನ್ನುವ ಪದವನ್ನು ಬಳಸಿರುವ ಕುರಿತಾಗಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಸಾಮಾಜಿಕ ತಾಣದಲ್ಲಿ ‘ಬಾಯ್ಕಾಟ್ ಪಠಾಣ್’ ಸದ್ಯ ಹೆಚ್ಚು ಪ್ರಚಲಿತದಲ್ಲಿದೆ.