Advertisement

ಸಂವಿಧಾನ ಪಾಲಿಸದಿದ್ದರೆ ಅಸಮಾಧಾನದ ಹೊಗೆ

06:00 AM Nov 27, 2018 | Team Udayavani |

ಹೊಸದಿಲ್ಲಿ: ಸಂವಿಧಾನ ಸೂಚಿಸುವ ಮಾರ್ಗ ಸೂಚಿಗಳನ್ನು ಎಲ್ಲರೂ ತಪ್ಪದೇ ಪಾಲಿಸಬೇಕು. ಇಲ್ಲವಾದಲ್ಲಿ ಅದು ಗಂಭೀರ ಅಸಮಾಧಾನಗಳಿಗೆ ಕಾರಣವಾಗುತ್ತದೆ ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ಕಿವಿಮಾತು ಹೇಳಿದ್ದಾರೆ. 

Advertisement

ಸಂವಿಧಾನ ದಿನಾಚರಣೆಯ ಅಂಗವಾಗಿ ಸೋಮವಾರ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ಮಾತನಾಡಿದ ಅವರು, ಸಂವಿಧಾನವು ಬಡವರ ಹಾಗೂ ಬಲ್ಲಿದರ ಪಾಲಿನ ದೀವಿಗೆಯಾಗಿದ್ದು, ಸಂದಿಗ್ಧ ಪರಿಸ್ಥಿತಿಗಳಲ್ಲಿ ಹಾಗೂ ಅರಾಜಕತೆಯ ಸನ್ನಿವೇಶಗಳಲ್ಲಿ ಸರಿಯಾದ ಹಾದಿ ತೋರುವ ದಾರಿದೀಪವಾಗಿದೆ. ಹಾಗಾಗಿ, ಎಲ್ಲರೂ ಸಂವಿಧಾನಕ್ಕೆ ಬದ್ಧರಾಗಿರಬೇಕು ಎಂದು ಆಶಿಸಿದರು.   

ರಾಷ್ಟ್ರಪತಿ ಅಸಮಾಧಾನ: ಇದೇ ವೇಳೆ, ವಿಪಕ್ಷಗಳ ಗದ್ದಲಗಳಿಂದ ಸಂಸತ್ತಿನ ಕಲಾಪಗಳಿಗೆ ತೊಂದರೆಯಾಗುವುದು ಹಾಗೂ ಸಾಕ್ಷ್ಯಾಧಾರಗಳ ಕೊರತೆಯಿಂದ ನ್ಯಾಯಾಲಯ ಗಳಲ್ಲಿ ಕಲಾಪಗಳು ಪದೇ ಪದೆ ಮುಂದೂಡಲ್ಪಡುವುದರ ಬಗ್ಗೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಂವಿಧಾನ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಮತದಾರರು ತಮ್ಮ ಹಕ್ಕನ್ನು ಸಮರ್ಥವಾಗಿ ಚಲಾಯಿಸಿದರೆ ಮಾತ್ರ ರಾಜಕೀಯ ರಂಗದಲ್ಲಿ ಸುಧಾರಣೆ ಸಾಧ್ಯವಾಗುವುದಿಲ್ಲ. ಇವುಗಳ ಜತೆಗೆ, ಆಡಳಿತದಲ್ಲಿ ಪಾರದರ್ಶಕತೆ ಕಾಯ್ದುಕೊಂಡಲ್ಲಿ ಮಾತ್ರ ಇದು ಸಾಧ್ಯವಾಗುತ್ತದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next