Advertisement

Gyanvapi ಮಸೀದಿ ಎಂದು ಉಲ್ಲೇಖಿಸುವುದು ದುರದೃಷ್ಟಕರ : ಯೋಗಿ ಆದಿತ್ಯನಾಥ್

06:49 PM Sep 14, 2024 | Team Udayavani |

ಲಕ್ನೋ: ”ಜ್ಞಾನವಾಪಿಯನ್ನು ಮಸೀದಿ ಎಂದು ಉಲ್ಲೇಖಿಸುವುದು ದುರದೃಷ್ಟಕರ ಮತ್ತು ಜ್ಞಾನವಾಪಿ ಭಗವಾನ್ ವಿಶ್ವನಾಥನ ಸಾಕಾರ”ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿಕೆ ನೀಡಿದ್ದಾರೆ.

Advertisement

ದೀನ್ ದಯಾಳ್ ಉಪಾಧ್ಯಾಯ ಗೋರಖ್‌ಪುರ ವಿಶ್ವವಿದ್ಯಾನಿಲಯದಲ್ಲಿ “ಸೌಹಾರ್ದಯುತ ಸಮಾಜ ನಿರ್ಮಾಣದಲ್ಲಿ ನಾಥಪಂಥದವರ ಕೊಡುಗೆ” ಎಂಬ ವಿಷಯದ ಕುರಿತು ಅಂತಾರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಆದಿತ್ಯನಾಥ್ ಈ ಹೇಳಿಕೆಗಳನ್ನು ನೀಡಿದ್ದಾರೆ.

ಅವರು ಕಾಶಿಯ ಆಧ್ಯಾತ್ಮಿಕ ಮಹತ್ವ ಮತ್ತು ಜ್ಞಾನವಾಪಿಯ ಧಾರ್ಮಿಕ ಮಹತ್ವವನ್ನು ಎತ್ತಿ ತೋರಿಸಿದ ಸಿಎಂ ಯೋಗಿ, ಆದಿ ಶಂಕರರ ವಿವರವಾದ ಉಲ್ಲೇಖದಲ್ಲಿ ಕಾಶಿಯಲ್ಲಿ ಭಗವಾನ್ ವಿಶ್ವನಾಥ ಬಗ್ಗೆ ಒಂದು ಉಪಾಖ್ಯಾನವನ್ನು ವಿವರಿಸುತ್ತದೆ ಎಂದರು.

ಸಮಾಜವಾದಿ ಪಕ್ಷದ ವಕ್ತಾರ ಅಬ್ಬಾಸ್ ಹೈದರ್ ಪಿಟಿಐಗೆ ಯೋಗಿ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿ ”ಯೋಗಿ ಆದಿತ್ಯನಾಥ್ ನ್ಯಾಯಾಲಯಕ್ಕೆ ಗೌರವವನ್ನು ನೀಡುವುದಿಲ್ಲ ಎಂದು ತೋರುತ್ತದೆ. ಈ ವಿಚಾರ ನ್ಯಾಯಾಲಯದಲ್ಲಿ ಬಾಕಿ ಇದೆ. ಮುಖ್ಯಮಂತ್ರಿಗಳು ಸಂವಿಧಾನದ ಪ್ರತಿಜ್ಞೆ ಮಾಡಿದರೂ ನ್ಯಾಯಾಲಯಕ್ಕೆ ಸರಿಯಾದ ಗೌರವ ನೀಡದಿರುವುದು ವಿಷಾದನೀಯ” ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.