Advertisement

ಗುರುವಿಲ್ಲದ ಜೀವನ ವ್ಯರ್ಥ

12:15 PM Jul 30, 2018 | |

ಬೆಂಗಳೂರು: ಪ್ರತಿಯೊಬ್ಬರ ಜೀವನದಲ್ಲೂ ಗುರು ಇರಬೇಕು. ಗುರು ಇಲ್ಲದವರ ಜೀವನ ಇದ್ದೂ ಪ್ರಯೋಜನ ಇಲ್ಲ ಎಂದು ಬಬಲೇಶ್ವರ ಬೃಹನ್ಮಠದ ಡಾ.ಮಹಾದೇವ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

Advertisement

ಬಬಲೇಶ್ವರ ಬೆಳಕು ಸ್ನೇಹಿತರ ಕೂಟ ಟ್ರಸ್ಟ್‌ ಏರ್ಪಡಿಸಿದ ತೃತೀಯ ವಾರ್ಷಿಕೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಭಕ್ತರಿದ್ದಲ್ಲಿ ಗುರುವಿಗೆ ಗೌರವ ಇದ್ದೇ ಇರುತ್ತದೆ. ಗುರು ಭಕ್ತಿ ಇದ್ದಲ್ಲಿ ಜಯ ಇರುತ್ತದೆ. ಗುರುವಿನ ಮಾರ್ಗದರ್ಶನದಿಂದ ವ್ಯಕ್ತಿ ಉನ್ನತ ಸಾಧನೆ ಮಾಡಲು ಸಾಧ್ಯ ಎಂದು ಹೇಳಿದರು.

ಬೆಂಗಳೂರಿನಲ್ಲಿ ಎಲ್ಲವೂ ಅಸ್ಥಿರವಾಗಿದೆ. ಎಲ್ಲರೂ ಭಯದ ವಾತಾವರಣದಲ್ಲಿ ಬದುಕುತಿ¨ªಾರೆ. ಆದರೆ, ಪ್ರತಿಯೊಬ್ಬ ಮನುಷ್ಯ ಮಾಡಿದ ಕೆಲಸ ಮಾತ್ರ ಶಾಶ್ವತವಾಗಿ ಉಳಿಯುತ್ತದೆ. ಯಾಂತ್ರಿಕ ನಗರದಲ್ಲಿ ಬಬಲೇಶ್ವರ ಯುವಕರು ಸ್ನೇಹ ಕೂಟ ಕಟ್ಟಿಕೊಂಡು ಕೂಡಿ ಬಾಳುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.

ರಾಷ್ಟ್ರೀಯ ಕ್ರೀಡಾಪಟು ಸಚಿನ್‌ ಸಾಲುಂಕೆ, ಪತ್ರಕರ್ತ ಶಂಕರ ಪಾಗೋಜಿ, ಹಾಗೂ ಮಹದೇವಪ್ಪ ಗುಡೂರು ಅವರನ್ನು ಈ ವೇಳೆ ಸನ್ಮಾನಿಸಲಾಯಿತು. ಬಿಬಿಎಸ್‌ ಕೆಟಿ ಹಂಗಾಮಿ ಅಧ್ಯಕ್ಷ ರಾಜಕುಮಾರ ಬಿರಾದಾರ, ಕಲ್ಲಪ್ಪ ನವಣಿ, ವಿ.ಎಸ್‌. ಪಾಟೀಲ್‌, ಉದ್ಯಮಿ ಸುಭಾಷ್‌ ಯಾದವ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next