Advertisement
ತಾಲೂಕು ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ್ದ ವೇಳೆ ಮಾತನಾಡಿದ ಅವರು, ಸಿಬ್ಬಂದಿ ವಸತಿ ಗೃಹಗಳನ್ನು ಆಸ್ಪತ್ರೆಯ ಆವರಣದಲ್ಲಿ ನಿರ್ಮಿಸುವ ಹಿನ್ನೆಲೆಯಲ್ಲಿ ಎಸ್‌ಡಿಪಿ ಯೋಜನೆಯಲ್ಲಿ ಜಾಗೆಯ ಅಭಾವದ ಹಿನ್ನೆಲೆಯಲ್ಲಿ ಉಳಿದ 42 ಲಕ್ಷ ರೂ. ಮೊತ್ತದಲ್ಲಿ ಆಸ್ಪತ್ರೆ ಆವರಣದಲ್ಲಿ 1,300 ಚದರ ಮೀಟರ್ ಕಾಂಕ್ರೀಟ್ ರಸ್ತೆ ಅವೈಜ್ಞಾನಿಕವಾದ ಕಾರಣ ತಡೆ ಹಿಡಿಯಲಾಗಿದೆ. ಆಸ್ಪತ್ರೆ ಕಟ್ಟಡದ ನೆಲಮಟ್ಟಕ್ಕೆ ಸರಿಹೊಂದುವಂತೆ ನಿರ್ಮಿಸಬೇಕಿತ್ತು. ಆದರೆ ಗುತ್ತಿಗೆದಾರರು, ನೆಲ ಅಗೆಯದೇ ಹಾಗೆಯೇ ಸಿಸಿ ರಸ್ತೆ ನಿರ್ಮಿಸಿದ್ದರಿಂದ ಆಸ್ಪತ್ರೆ ಕಟ್ಟಡ ನೆಲಮಟ್ಟಕ್ಕಿಂತ ಅಡಿ ಎತ್ತರವಾಗಿದೆ. ಸಿಸಿ ರಸ್ತೆಯ ಮೇಲೆ ಬಿದ್ದ ನೀರು, ಆಸ್ಪತ್ರೆಗೆ ನುಗ್ಗುತಿದ್ದು, ಮತ್ತೂಂದು ಸಮಸ್ಯೆ ಎದುರಾಗಿದೆ. ಸದ್ಯ ನಿರ್ಮಿಸಿದ ಕಾಂಕ್ರೀಟ್ ರಸ್ತೆಯನ್ನು ಕೂಡಲೇ ತೆರವುಗೊಳಿಸಿ, ಎರಡು ಅಡಿ ಆಳ ಅಗೆದು, ಸರ್ಕಾರಿ ಆಸ್ಪತ್ರೆಯ ಕಟ್ಟಡದ ನೆಲಮಟ್ಟಕ್ಕೆ ಸಿಸಿ ರಸ್ತೆ ನಿರ್ಮಿಸಲು ಸೂಚಿಸಿದರು. ಈ ಕಾರ್ಯ ವಿಳಂಬವಾದಷ್ಟು ತೊಂದರೆ ಹೆಚ್ಚುತ್ತದೆ. ಕೂಡಲೇ ಕ್ರಮ ಕೈಗೊಳ್ಳಲು ಸೂಚಿಸಿದರು. ಆಸ್ಪತ್ರೆಯಲ್ಲಿ ಏರ್ ಬ್ಲಾಕ್ ಆಗಿ ನೀರಿನ ಸಮಸ್ಯೆಯಾಗಿರುವ ಕುರಿತು ಪ್ರಸ್ತಾಪಿಸಿದ ಶಾಸಕರು, ಈ ರೀತಿ ತೊಂದರೆಯಾದರೆ ಟ್ಯಾಂಕರ್ ಮೂಲಕ ನೀರು ತರಿಸಿ, ಸಮಸ್ಯೆಯಾಗದಂತೆ ಕ್ರಮವಹಿಸಲು ಆಸ್ಪತ್ರೆಯ ಆಡಳಿತ ಮುಖ್ಯಸ್ಥ ಡಾ| ಚಂದ್ರಕಾಂತ ಅವರಿಗೆ ಸೂಚಿಸಿದರು. ನಂತರ ವೈದ್ಯರೊಂದಿಗೆ ಆಸ್ಪತ್ರೆಯ ಕುಂದು ಕೊರತೆಗಳ ಬಗ್ಗೆ ಸಮಾಲೋಚಿಸಿದರು.
Advertisement
ಅವೈಜ್ಞಾನಿಕ ಸಿಸಿ ರಸ್ತೆ ತೆರವಿಗೆ ಸೂಚನೆ
01:53 PM May 08, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.