Advertisement

ಅಭಿವೃದ್ಧಿ ಕಾಣದ ಅಯ್ಯಪ್ಪ ನಗರ-ಬೈಲೂರು ಜಿ.ಪಂ.ರಸ್ತೆ

10:51 PM Oct 11, 2019 | Sriram |

ವಿಶೇಷ ವರದಿ -ಕಾರ್ಕಳ: ಕಾರ್ಕಳ – ಉಡುಪಿ ಮುಖ್ಯ ರಸ್ತೆಯಲ್ಲಿ ಅಯ್ಯಪ್ಪ ನಗರದಿಂದ ಬೈಲೂರುವರೆಗಿನ ಜಿ.ಪಂ. ಮುಖ್ಯರಸ್ತೆ ಅಭಿವೃದ್ಧಿ ಕಾಣದೇ ಸಂಚಾರಕ್ಕೆ ಅಯೋಗ್ಯವಾಗಿದೆ.

Advertisement

12 ಕಿ.ಮೀ. ಉದ್ದದ ಈ ರಸ್ತೆ ಪೂರ್ತಿ ಹೊಂಡ ಗುಂಡಿಗಳಿಂದಲೇ ಆವೃತವಾಗಿದ್ದು, ವಾಹನ ಸಂಚಾರಕ್ಕೆ ಸಂಚಕಾರ ಉಂಟಾಗಿದೆ. ಮಳೆಗಾಲ ದಲ್ಲಿ ಹೊಂಡ, ಬೇಸಗೆಯಲ್ಲಿ ರಸ್ತೆ ತುಂಬೆಲ್ಲ ಧೂಳಿನದ್ದೇ ಅವಾಂತರ. ಹೀಗಾಗಿ ವಾಹನ ಚಾಲಕ, ದ್ವಿಚಕ್ರ ಸವಾರರ ಪಾಡು ಹೇಳ ತೀರದು.

ಕಾಮಗಾರಿ ಆರಂಭ
ಕಾಮಗಾರಿಯನ್ನು ಗುತ್ತಿಗೆ ಪಡೆದ ಕಾರ್ಲ ಕನ್‌ಸ್ಟ್ರಕ್ಷನ್‌ನವರು 2079ರ ಫೆಬ್ರವರಿಯಲ್ಲಿ ಕಾಮಗಾರಿಗೆ ಚಾಲನೆ ನೀಡಿದರು. ಕಾಮಗಾರಿ ಆರಂಭಗೊಂಡರೂ ಅನುದಾನ ಬಿಡುಗಡೆಗೆ ಸರಕಾರದ ಅನುಮತಿ ದೊರೆಯದ ಕಾರಣ ಕಾಮಗಾರಿ ಕುಂಟುತ್ತ ಸಾಗಿತು.

25 ಕೋಟಿ ರೂ. ಬಿಡುಗಡೆ ?
10 ಮೀಟರ್‌ ರಸ್ತೆ ವಿಸ್ತರಣೆಯೊಂದಿಗೆೆ 12 ಕಿ.ಮೀ. ರಸ್ತೆ ಡಾಮರುಗೊಳ್ಳಲು 2016-17ರಲ್ಲಿ ಕೇಂದ್ರ ರಸ್ತೆ ನಿಧಿಯಿಂದ 25 ಕೋಟಿ ರೂ. ಮಂಜೂರಾತಿ ದೊರೆಯಿತು.
ಕಾರ್ಕಳದ ಕಾರ್ಲ ಕನ್‌ಸ್ಟ್ರಕ್ಷನ್‌ನವರು ಟೆಂಡರ್‌ ಪಡೆದಿದ್ದರು. ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದ್ದಾಗ್ಯೂ ಅನುದಾನ ಬಿಡುಗಡೆಗೆ ಸರಕಾರದಿಂದ ಅನುಮತಿ ದೊರೆತಿರಲಿಲ್ಲ. ಈ ನಡುವೆ ಕಾರ್ಲ ಕನ್‌ಸ್ಟ್ರಕ್ಷನ್‌ನ ಪ್ರವರ್ತಕ ಶಿವರಾಮ ಶೆಟ್ಟಿ ಅವರು ನಿಧನ ಹೊಂದಿದರು. ಇದರಿಂದ ಕಾಮಗಾರಿಯ ಟೆಂಡರ್‌ ವಿಚಾರ,ಕಾಮಗಾರಿಗೆ ವೇಗ ದೊರೆಯದೇ ಸಮಸ್ಯೆ ಉಂಟಾಯಿತು.

ಅನುದಾನ ಬಿಡುಗಡೆಯಾಗಿಲ್ಲ
ಹದಗೆಟ್ಟಿರುವ ಅಯ್ಯಪ್ಪ ನಗರ -ಬೈಲೂರು ರಸ್ತೆ ಅಭಿವೃದ್ಧಿಗೆ ಇದುವರೆಗೂ ಅನುದಾನ ಬಿಡುಗಡೆಯಾಗಿಲ್ಲ. ಸರಕಾರದಿಂದ ಅನುದಾನ ಬಿಡುಗಡೆ ಯಾದ ತತ್‌ಕ್ಷಣ ಈ ರಸ್ತೆಯ ಕಾಮಗಾರಿಗೆ ವೇಗ ದೊರೆಯಲಿದೆ.
-ಕಾರ್ಯನಿರ್ವಾಹಕ ಅಭಿಯಂತರರು ,
ರಾಷ್ಟ್ರೀಯ ಹೆದ್ದಾರಿ ಮಂಗಳೂರು

Advertisement

ಸಂಬಂಧಪಟ್ಟವರು ಗಮನಹರಿಸಲಿ
ನಾನು ಪ್ರತಿದಿನ ಉಡುಪಿಗೆ ಇದೇ ರಸ್ತೆಯಾಗಿ ಬಸ್‌ ಮೂಲಕ ಪ್ರಯಾಣಿಸು ತ್ತಿದ್ದೇನೆ. ಹೊಂಡ ತುಂಬಿದ ಈ ರಸ್ತೆಯಲ್ಲಿ ಪ್ರಯಾಣಿಸುವುದರಿಂದ ಸೊಂಟ ಮುರಿಯು ಅನುಭವವಾಗುತ್ತಿದೆ. ಸಂಬಂಧಪಟ್ಟವರು ಇತ್ತ ಗಮನಹರಿಸಿ.
-ಅಜಿತ್‌ ಕುಮಾರ್‌ ಕಾಬೆಟ್ಟು, ಬಸ್‌ ಪ್ರಯಾಣಿಕ

Advertisement

Udayavani is now on Telegram. Click here to join our channel and stay updated with the latest news.

Next