Advertisement
ನಗರದ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನರೇಗಾ ಯೋಜನೆಯಲ್ಲಿ ದಿವ್ಯಾಂಗರಿಗೆ ಉದ್ಯೋಗ ಚೀಟಿ ನೀಡುವ ಸಂಬಂಧ ಜಿಲ್ಲೆಯ ಎಲ್ಲಾ ತಾಲೂಕುಗಳ ಇಒ ಅವರೊಂದಿಗೆ ನಡೆಸಿದ ವಿಡಿಯೋ ಸಂವಾದದಲ್ಲಿ ಮಾತನಾಡಿದರು. ಗ್ರಾಮೀಣ ಭಾಗದ ಬಡಕುಟುಂಬಗಳ ಜೀವನೋಪಾಯದ ಭದ್ರತೆ ಒದಗಿಸುವುದು ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು
ಹೇಳಿದರು.
Related Articles
Advertisement
ಜಾಗೃತಿ ಮೂಡಿಸಿ: ದಿವ್ಯಾಂಗ ವ್ಯಕ್ತಿಗಳನ್ನು ಕಾರ್ಯ ಕ್ಷೇತ್ರದಲ್ಲಿ ಕಾಯಕ ಬಂಧುವಾಗಿ ವಿಶೇಷ ಆದ್ಯತೆ ನೀಡಲಾಗಿದೆ. ಇತರೆ ಕೆಲಸಗಾರರಿಗೆ ಕುಡಿಯುವ ನೀರು, ಮಹಿಳಾ ಕೆಲಸಗಾರರ ಮಕ್ಕಳಿಗೆ ಲಾಲನೆ ಪಾಲನೆ, ಸಸಿ ನೆಡುವುದು, ಬಾಂಡಲಿಗೆ ಜಲ್ಲಿ,ಮಣ್ಣು ತುಂಬುವುದು, ಹೊಸ ಕಟ್ಟಡಗಳಿಗೆ ನೀರು ಹಾಕುವುದು, ಮಣ್ಣು ಸರಿಸುವುದು, ಬಂಡಿಂಗ್ ಮಾಡುವುದು, ತ್ಯಾಜ್ಯಗಳನ್ನು ಬಾಂಡಲಿಗೆ ಹಾಕುವುದು ಸೇರಿ ವಿವಿಧ ಚಿಕ್ಕಪುಟ್ಟ ಕೆಲಸಗಳನ್ನು ಅವರಿಗೆ ನಿಡೀಡಲಾಗುತ್ತಿದೆ. ದಿವ್ಯಾಂಗರು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಜಾಗೃತಿಮೂಡಿಸಬೇಕು ಎಂದು ಇಒಗೆ ತಿಳಿಸಿದರು. ಜಿಪಂ ಉಪ ಕಾರ್ಯದರ್ಶಿ ಶಿವಕುಮಾರ್ ಮಾತನಾಡಿ, ಜಿಲ್ಲಾದ್ಯಂತ ಒಟ್ಟು 17,610 ಮಂದಿ 18 ವರ್ಷ ಮೇಲ್ಟಟ್ಟ ದಿವ್ಯಾಂಗರನ್ನು ಗುರ್ತಿಸಿ ಇದರಲ್ಲಿ 10 ಸಾವಿರಕ್ಕೂ ಹೆಚ್ಚು ಮಂದಿಗೆ ನರೇಗಾದಡಿ ಉದ್ಯೋಗ ನೀಡಬಹುದಾಗಿದ್ದು, ಎಲ್ಲರಿಗೂ ಉದ್ಯೋಗ ಚೀಟಿ ಮಾಡಿಸಲು ಕ್ರಮ
ವಹಿಸಬೇಕು ಎಂದು ಸೂಚಿಸಿದರು. ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಉಸ್ಮಾನ್, ಜಿಪಂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.