ನಂಜನಗೂಡು: ಏ.9ರಂದು ನಡೆಯಲಿರುವ ನಂಜನಗೂಡು ಕ್ಷೆÒàತ್ರದ ಉಪ ಚುನಾವಣೆ ನ್ಯಾಯಯುತ ಹಾಗೂ ಮುಕ್ತ ವಾತಾವರಣದಲ್ಲಿ ನಡೆಯು ವಂತಾಗಲು ಸಹಕರಿಸಿ ಎಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತರಾದ ನಂಜನಗೂಡು ಉಪ ಚುನಾವಣೆಯ ಚುನಾವಣಾಧಿಕಾರಿ ಜಿ. ಜಗದೀಶ್ ಮನವಿ ಮಾಡಿದರು.
ಮಂಗಳವಾರ ಸಂಜೆ ನಂಜನಗೂಡಿನ ತಹಶೀಲ್ದಾರ್ ಕಚೇರಿಯಲ್ಲಿ ವಿವಿಧ ಪಕ್ಷಗಳ ಪ್ರತಿನಿಧಿಗಳ ಸಭೆಯಲ್ಲಿ ಮಾತನಾಡುತ್ತಿದ್ದ ಅವರು, ಉಪ ಚುನಾವಣೆಯ ನೀತಿ ಸಂಹಿತೆ ಮಾ.12 ರಿಂದಲೇ ಜಾರಿಯಾಗಿದ್ದು, ನೀತಿ ಸಂಹಿತೆಯು ಚುನಾವಣೆ ನಡೆಯುವ ಕ್ಷೇತ್ರಕ್ಕೆ ಮಾತ್ರ ಅನ್ವಯವಾಗದೆ ಇಡೀ ಜಿಲ್ಲೆಗೆ ಅನ್ವಯವಾಗಲಿದೆ ಎಂದರು.
ಚುನಾವಣಾಧಿಕಾರಿಗಳ ಅನುಮತಿ ಪಡೆಯದೆ ಯಾವ ವಾಹನಗಳೂ ಪ್ರಚಾರ ನಡೆಸುವಂತಿಲ್ಲ. ಧಾರ್ಮಿಕ ಸ್ಥಳಗಳು, ಶಾಲಾ-ಕಾಲೇಜುಗಳು ಹಾಗೂ ಸರ್ಕಾರಿ ಕಚೇರಿಗಳ ಆವರಣ ಗಳಲ್ಲಿ ಚುನಾವಣಾ ಸಭೆ ನಡೆಸು ವಂತಿಲ್ಲ. ಜಾತಿ, ಮತ, ಪಂಥಗಳ ಹೆಸರಿನಲ್ಲಿ ಮತಯಾಚನೆ ಮಾಡು ವಂತಿಲ್ಲ. ವೈಯಕ್ತಿಕ ನಿಂದನೆ ಮಾಡು ವಂತಿಲ್ಲ, ಜನಸಮೂಹವನ್ನು ಪ್ರಚೋದಿ ಸುವಂತಹ, ಜಾತಿ, ಕೋಮು ಗಳನ್ನು ಕೆಣಕುವ, ಉದ್ರೇಕಿಸುವ, ಒತ್ತಡಗಳನ್ನು ಹೇರುವಂತಿಲ್ಲ ಎಂದು ತಿಳಿಸಿದರು.
ಅಭ್ಯರ್ಥಿಯ ಒಟ್ಟು ಚುನಾವಣಾ ವೆಚ್ಚವನ್ನು 28 ಲಕ್ಷಕ್ಕೆ ನಿಗದಿಪಡಿಸ ಲಾಗಿದ್ದು, ಅಭ್ಯರ್ಥಿ ಜೇಬಿನಲ್ಲಿ 50 ಸಾವಿರ ರೂ. ಗಿಂತ ಹೆಚ್ಚು ಹಣ ಇರು ವಂತಿಲ್ಲ. ಆಯಾದಿನದ ಲೆಕ್ಕಪತ್ರಗಳನ್ನು ಸಂಜೆ 5 ಗಂಟೆಯೊಳಗೆ ಸಲ್ಲಿಸಬೇಕು. ಇಲ್ಲವಾದರೆ ಅಂದೇ ನೋಟಿಸ್ ಜಾರಿ ಮಾಡಲಾಗುವುದು. ಚುನಾವಣಾ ಕಾನೂನು ಮೀರಿದರೆ ಪ್ರಕರಣ ದಾಖಲಿಸಲಾಗುವುದು ಎಂದರು.ಜೆಡಿಎಸ್ ತಾಲೂಕು ಅಧ್ಯಕ್ಷ ಆರ್. ವಿ. ಮಹದೇವಸ್ವಾಮಿ, ಬಿಜೆಪಿಯಿಂದ ಸಿದ್ದರಾಜು ಹಾಗೂ ಕಾಂಗ್ರೆಸ್ ಪಕ್ಷದ ಅಕºರ್ ಅಲಿ ಭಾಗವಹಿಸಿದ್ದರು.
ನಂಬಿಕೆ ಇರಬಹುದು: ಸಾಮಾನ್ಯವಾಗಿ ಉಪವಿಭಾಗಾಧಿಕಾರಿಗಳು ಚುನಾ ವಣಾಧಿಕಾರಿಯಾಗಿರುತ್ತಿದ್ದರು. ಈ ಬಾರಿ ಹೊಸ ಸಂಪ್ರದಾಯ ಹುಟ್ಟು ಹಾಕಿರುವುದರ ಬಗ್ಗೆ ಪ್ರಶ್ನಿಸಿ ದಾಗ, ಅಧಿಕಾರಿ ಬದಲಾವಣೆ ಚುನಾವಣಾ ಆಯೋಗದ ನಿರ್ಧಾರ. ಅವರ ನಂಬಿಕೆಯಂತೆ ನ್ಯಾಯಯುತವಾದ ಚುನಾ ವಣಾ ನಿರ್ವಹಣೆ ಜವಾಬ್ದಾರಿಯನ್ನು ಕಾರ್ಯ ನಿರ್ವಹಿಸುವುದಾಗಿ ತಿಳಿಸಿದರು.