Advertisement

ಮೋದಿ ನೇತೃತ್ವದಲ್ಲಿ ಬಿಜೆಪಿ ಕೇವಲ ರಾಜಕೀಯ ಪಕ್ಷವಾಗಿಲ್ಲ: ನಡ್ಡಾ

09:54 PM Sep 17, 2022 | Team Udayavani |

ನವದೆಹಲಿ: ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಬಿಜೆಪಿ ಮಾನವೀಯತೆಗಾಗಿ ಕೆಲಸ ಮಾಡುವ ಸಂಘಟನೆಯಾಗಿ ಹೊರಹೊಮ್ಮಿದೆ ಎಂದು ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಅವರು ಶನಿವಾರ ಪ್ರಧಾನಿಯವರ ಜನ್ಮದಿನದ ಅಂಗವಾಗಿ ವಿವಿಧ ಕಲ್ಯಾಣ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಹೇಳಿದ್ದಾರೆ.

Advertisement

ಇದನ್ನೂ ಓದಿ: ಭಾರತ ಜೋಡೋ ಅಲ್ಲ ಕಾಂಗ್ರೆಸ್‌ ಜೋಡೋ ಯಾತ್ರೆ: ಸಚಿವ ಆನಂದ ಸಿಂಗ್‌

ಬಿಜೆಪಿ ಪ್ರಧಾನ ಕಚೇರಿಯಲ್ಲಿ ವಸ್ತು ಪ್ರದರ್ಶನ, ರಕ್ತದಾನ ಶಿಬಿರ ಮತ್ತು ಇತರ ಕಾರ್ಯಕ್ರಮಗಳನ್ನು ಉದ್ಘಾಟಿಸಿ, ಕಾರ್ಯಕರ್ತರು ‘ಸೇವಾ ಪಾಕ್ಷಿಕ ಆಯೋಜಿಸುವ ಮೂಲಕ ಮೋದಿ ಅವರ ಜನ್ಮದಿನವನ್ನು ಆಚರಿಸುತ್ತಿದ್ದಾರೆ. ಹದಿನೈದು ದಿನಗಳ ಅಂಗವಾಗಿ, ಪಕ್ಷವು ಅಂಗವಿಕಲರಿಗೆ ಉಪಕರಣಗಳನ್ನು ವಿತರಿಸುತ್ತಿದೆ, ಖಾದಿ ಉತ್ಪನ್ನಗಳ ಪ್ರಚಾರ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸುತ್ತದೆ.ಪ್ರಧಾನಿ ಮೋದಿಯವರ ಜೀವನ ಮಾನವ ಸೇವೆಗೆ ಮುಡಿಪಾಗಿದೆ. ಅವರ ನಾಯಕತ್ವದಲ್ಲಿ ಬಿಜೆಪಿ ಕೇವಲ ರಾಜಕೀಯ ಪಕ್ಷವಾಗದೆ ಮಾನವೀಯತೆಯ ಸೇವೆ ಮಾಡುವ ಸಂಘಟನೆಯಾಗಿ ಹೊರಹೊಮ್ಮಿದೆ” ಎಂದರು.

ಬಿಜೆಪಿಯು ಸ್ವಚ್ಛತಾ ಆಂದೋಲನಗಳನ್ನು ಆಯೋಜಿಸುತ್ತಿದೆ, ಪ್ರಧಾನಿಯವರ ಬಾಲ್ಯದ ಸಾಹಸಗಳಿಂದ ಅವರ ರಾಜಕೀಯ ವೃತ್ತಿಜೀವನದವರೆಗೆ ಎಲ್ಲವನ್ನೂ ತೋರಿಸುವ ಪ್ರದರ್ಶನಗಳು ಮತ್ತು ದೇಶಾದ್ಯಂತ ಉಚಿತ ಆರೋಗ್ಯ ತಪಾಸಣೆ ಶಿಬಿರಗಳನ್ನು ಆಯೋಜಿಸುತ್ತಿ ದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next