Advertisement
ಸುಲ್ತಂಗಂಜ್‌ನಿಂದ ಅಗುವಾನಿ ಘಾಟ್ ಕಡೆಯ ಒಂಬತ್ತು ಮತ್ತು ಹತ್ತನೇ ಕಂಬಗಳ ನಡುವಿನ ಭಾಗವು ಕುಸಿದು ಬಿದ್ದಿದೆ. ಎಸ್. ಪಿ. ಸಿಂಗ್ಲಾ ಕಂಪನಿ ಕಳೆದ ಒಂಬತ್ತು ವರ್ಷಗಳಿಂದ ಈ ಸೇತುವೆ ನಿರ್ಮಾಣ ಕಾರ್ಯ ನಡೆಸುತ್ತಿದ್ದು. ಖಗರಿಯಾ ಮತ್ತು ಭಾಗಲ್ಪುರ್ ಜಿಲ್ಲೆಗಳನ್ನು ಸಂಪರ್ಕಿಸಲು ಭಾಗಲ್ಪುರ ಜಿಲ್ಲೆಯ ಸುಲ್ತಂಗಂಜ್ನಲ್ಲಿ ಈ ಸೇತುವೆಯನ್ನು ನಿರ್ಮಿಸಲಾಗುತ್ತಿದೆ.
ಈ ಸೇತುವೆ ಏಪ್ರಿಲ್ 27, 2022 ರಂದು ಮೊದಲ ಬಾರಿಗೆ ಕುಸಿದು ಬಿದ್ದಿತ್ತು, ಈ ವೇಳೆ ನಿರ್ಮಾಣ ಹಂತದಲ್ಲಿರುವ ಸೇತುವೆಯ ಸೂಪರ್ ಸ್ಟ್ರಕ್ಚರ್ ನದಿಗೆ ಬಿದ್ದಿತ್ತು. ಇದಾದ ಬಳಿಕ ಜೂನ್ 4, 2023ರಂದು ಮತ್ತೆ ಸೇತುವೆಯ ಒಂದು ಭಾಗ ಕುಸಿದು ಬಿದ್ದಿದೆ ಅದೇ ಸಮಯದಲ್ಲಿ, ಸೇತುವೆಯ ಮೇಲೆ ಕರ್ತವ್ಯದಲ್ಲಿದ್ದ ಇಬ್ಬರು ಸಿಬ್ಬಂದಿ ಕೂಡ ನಿರುಪಾಲಾಗಿದ್ದರು. ಇದೀಗ ಮತ್ತೆ ಒಂಬತ್ತು ಮತ್ತು ಹತ್ತನೇ ಪಿಲ್ಲರ್ ನಡುವಿನ ಭಾಗ ಕುಸಿದು ಬಿದ್ದಿದೆ ಇದರೊಂದಿಗೆ ಒಟ್ಟು ಮೂರನೇ ಬಾರಿ ಸೇತುವೆ ಕುಸಿದು ಬಿದ್ದಂತಾಗಿದೆ. ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ
ಭಾಗಲ್ಪುರ್-ಸುಲ್ತಂಗಂಜ್ ಅಗುವಾನಿ ಸೇತುವೆಯು ಉತ್ತರ ಮತ್ತು ದಕ್ಷಿಣ ಬಿಹಾರವನ್ನು ಸಂಪರ್ಕಿಸುವ ಬಿಹಾರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ಈ ಯೋಜನೆಯ ಆರಂಭಿಕ ಮೌಲ್ಯ 1710.77 ಕೋಟಿ ರೂ. ಮುಖ್ಯಮಂತ್ರಿ ನಿತೀಶ್ ಕುಮಾರ್ 23 ಫೆಬ್ರವರಿ 2014 ರಂದು ಸೇತುವೆ ಕಾಮಗಾರಿಗೆ ಚಾಲನೆ ನೀಡಿದ್ದರು. ಈ ಸೇತುವೆ ಮತ್ತು ರಸ್ತೆ ನಿರ್ಮಾಣದೊಂದಿಗೆ, NH 31 ಮತ್ತು NH 80 ಸಂಪರ್ಕಗೊಳ್ಳಲಿದೆ. ಈ ಸೇತುವೆಯ ಒಟ್ಟು ಉದ್ದವು 3.160 ಕಿಲೋಮೀಟರ್ ಆಗಿದೆ.
Related Articles
Advertisement