Advertisement
ತಾಲೂಕಿನಿಂದ 7 ಕಿ.ಮೀ. ದೂರದಲ್ಲಿರುವ ತೊರೆ ಪಾಳ್ಯ ಗ್ರಾಮದ ಮುಖ್ಯರಸ್ತೆ ಸಂಪೂರ್ಣ ಕೆಸರು ಗದ್ದೆಯಾಗಿದ್ದು, ಗುಂಡಿಗಳ ನಿರ್ಮಾಣವಾಗಿ ವಾಹನ ಸವಾರರು, ಗ್ರಾಮದ ಜನರು, ವಿದ್ಯಾರ್ಥಿಗಳು ಓಡಾಡಲು ಬಹಳಷ್ಟು ಸಮಸ್ಯೆ ಎದುರಾಗಿದೆ. ಹತ್ತಾರು ವರ್ಷಗಳಿಂದ ಭರವಸೆಯಲ್ಲಿಯೇ ಜೀವನ ಮಾಡುತ್ತಿದ್ದ ಗ್ರಾಮದ ಜನರು ಭಾನುವಾರ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳಿಗೆ ಪೂಜೆ ಮಾಡುವ ಮೂಲಕ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು.
Related Articles
Advertisement
ವಿನೂತನ ಪ್ರತಿಭಟನೆ: ತೊರೆಪಾಳ್ಯಗ್ರಾಮದ ರಸ್ತೆಯ ಗುಂಡಿಗಳಿಗೆ ಮಹಿಳೆಯರು ಪೂಜೆ ಮಾಡಿದ್ದು, ಗ್ರಾಮಕ್ಕೆ ಈಗಲಾದರೂ ಶಾಸಕರು ಬಂದು ರಸ್ತೆ ಸರಿಪಡಿಸಬೇಕೆಂದು ಮನವಿ ಮಾಡಿದ್ದಾರೆ. ಮೂರು ತಲೆಮಾರುಗಳೇ ಕಳೆದಿವೆ. ಆದರೆ, ಗ್ರಾಮದ ರಸ್ತೆಗೆ ಮಾತ್ರ ಡಾಂಬರ್ ಕಾಣಲಿಲ್ಲ. ಭರವಸೆಯಲ್ಲಿಯೇ ಜೀವನ ಮಾಡುತ್ತಿದ್ದು, ನಗರ ಸಮೀಪವಿದ್ದರು ನಾವು ನತದೃಷ್ಟರಾಗಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನೆಲಮಂಗಲದಿಂದ 7 ಕಿ.ಮೀ. ಇರುವ ನಮ್ಮ ಗ್ರಾಮಕ್ಕೆ ಉತ್ತಮ ರಸ್ತೆ ಆಗಿಲ್ಲ. ಶಾಸಕರೇ ಬನ್ನಿ ನಮ್ಮ ಗ್ರಾಮಕ್ಕೆ ಒಂದು ಬಾರಿ ಓಡಾಡಿ ನಂತರ ತೊರೆಪಾಳ್ಯ ರಸ್ತೆ ಮಾಡಿಸಿ. ನಾವು ಸುಳ್ಳು ಹೇಳುತ್ತಿಲ್ಲ ಭರವಸೆ ಯಲ್ಲಿ ಸೋತು ಹೋಗಿದ್ದೇವೆ. -ರಾಜಮ್ಮ, ತೊರೆಪಾಳ್ಯ ಗ್ರಾಮಸ್ಥೆ
ಶಾಸಕರೇ ನಿಮ್ಮ ಪಾದಪೂಜೆ ಮಾಡುತ್ತೇವೆ. ನಮ್ಮ ಗ್ರಾಮಕ್ಕೆ ಉತ್ತಮ ರಸ್ತೆ ಮಾಡಿಸಿ ಕೊಡಿ. ನಾನು ಶಾಲೆಗೆ ಹೋಗುವ ಹಂತದಿಂದ ಕೆಸರು ಗದ್ದೆಯ ರಸ್ತೆಯೇ ಕಾಣುವಂತಾಗಿದೆ. ಈಗಲಾದರೂ ರಸ್ತೆ ಸಮಸ್ಯೆ ಬಗೆಹರಿಸಿ. -ವೆಂಕಟೇಶ್, ಗ್ರಾಮದ ಯುವಕ