ಬ್ಲೋಮ್‌ಫಾಂಟೇನ್: ಅಂಡರ್-19 ವಿಶ್ವಕಪ್ ಕ್ರಿಕೆಟ್ ಕೂಟವು ಶುಕ್ರವಾರದಿಂದ ದಕ್ಷಿಣ ಆಫ್ರಿಕಾದ ವಿವಿಧ ತಾಣಗಳಲ್ಲಿ ಆರಂಭವಾಗಲಿದೆ. ಮೊದಲ ದಿನ ಆತಿಥೇಯ ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್‌ಇಂಡೀಸ್ ಹಾಗೂ ಅಮೆರಿಕ ಮತ್ತು ಐರ್ಲೆಂಡ್ ನಡುವೆ ಪಂದ್ಯ ಗಳು ನಡೆಯಲಿವೆ. ಐದು ಬಾರಿಯ ಚಾಂಪಿಯನ್ ಭಾರತವು ಶುಕ್ರವಾರ ನಡೆಯುವ ಪಂದ್ಯದಲ್ಲಿ ಬಾಂಗ್ಲಾ ದೇಶವನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ.
ಈ ಕೂಟದಲ್ಲಿ ಒಟ್ಟಾರೆ 16 ತಂಡಗಳು ಭಾಗವಹಿಸಲಿವೆ. ಇವು ಗಳನ್ನು ನಾಲ್ಕು ಬಣಗಳನ್ನಾಗಿ ವಿಂಗ ಡಿಸಲಾಗಿದೆ. ಮೊದಲ ಸುತ್ತಿನ ಹೋರಾಟದ ಬಳಿಕ 12 ತಂಡಗಳು ಸೂಪರ್ ಸಿಕ್ಸ್ ಹಂತಕ್ಕೇರಲಿವೆ. ಇಲ್ಲಿ ಎರಡು ಬಣಗಳಲ್ಲಿ ಪಂದ್ಯ ಗಳು ನಡೆಯಲಿದ್ದು ಪ್ರತಿ ಬಣದ ಅಗ್ರ ಎರಡು ತಂಡಗಳು ಸೆಮಿ ಫೈನಲಿಗೇರಲಿವೆ. ಸೆಮಿಫೈನಲ್ ಪಂದ್ಯಗಳು ಬೆನೋನಿಯಲ್ಲಿ ಫೆ. 6 ಮತ್ತು 8ರಂದು ನಡೆಯಲಿದ್ದು ಫೆ. 11ರಂದು ಫೈನಲ್ ಜರಗಲಿದೆ.
ದಾಖಲೆ ಐದು ಬಾರಿಯ ಚಾಂಪಿಯನ್ ಆಗಿರುವ ಭಾರತದ ಮೇಲೆ ಎಲ್ಲರ ದೃಷ್ಟಿ ಬಿದ್ದಿದೆ. ಭಾರತ ತಂಡವನ್ನು ಈ ಬಾರಿ ಪಂಜಾಬ್‌ನ ಉದಯ್ ಸಹರನ್ ಅವರನ್ನು ಮುನ್ನಡೆಸುತ್ತಿದ್ದಾರೆ. “ಎ’ ಬಣದಲ್ಲಿರುವ ಭಾತರವು ಶನಿವಾರ ನಡೆಯುವ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಎದುರಿಸುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ. ಅಮೆರಿಕ ಮತ್ತು ಐರ್ಲೆಂಡ್ ಈ ಬಣದಲ್ಲಿರುವ ಇನ್ನೆರಡು ತಂಡಗಳು. ಈ ಎರಡು ತಂಡಗಳು ಮೊದಲ ದಿನವೇ ಮುಖಾಮುಖಿಯಾಗಲಿವೆ.
ಈ ಬಾರಿ ಭಾರತ ತಂಡ ಭಾರೀ ಸಿದ್ಧತೆ ಮಾಡಿಕೊಂಡು ಬಂದ ಹಾಗಿಲ್ಲ. ರಾಷ್ಟ್ರೀಯ ಕ್ರಿಕೆಟ್ ಅಕಾಡೆ ಮಿಯಲ್ಲಿ ಶಿಬಿರದಲ್ಲಿ ಪಾಲ್ಗೊಂಡ ಬಳಿಕ ತಂಡ ಕೇವಲ ಎರಡು ಕೂಟಗಳಲ್ಲಿ ಆಡಿ ಇಲ್ಲಿಗೆ ಬಂದಿದೆ. ಏಷ್ಯಾ ಕಪ್ ಮತ್ತು ದ.ಆಫ್ರಿಕಾದಲ್ಲಿ ನಡೆದ ತ್ರಿಕೋನ ಸರಣಿಯಲ್ಲಿ ಭಾರತೀಯ ತಂಡ ಭಾಗವಹಿಸಿತ್ತು. ಏಷ್ಯಾ ಕಪ್‌ನಲ್ಲಿ ಭಾರತ ಸೆಮಿಫೈನಲ್‌ನಲ್ಲಿ ಸೋತಿದ್ದರೆ ತ್ರಿಕೋನ ಸರಣಿಗೆ ಮಳೆ ತೊಂದರೆ ನೀಡಿತ್ತು.
ಅಂಡರ್-19 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯ ಎರಡನೇ ಶ್ರೇಷ್ಠ ತಂಡ ವಾಗಿದೆ. ಮೂರು ಬಾರಿ ಪ್ರಶಸ್ತಿ ಗೆದ್ದಿ ರುವ ಆಸ್ಟ್ರೇಲಿಯ ನೆಚ್ಚಿನ ತಂಡಗಳಲ್ಲಿ ಒಂದಾಗಿದೆ. ಪಾಕಿಸ್ಥಾನ ಎರಡು ಬಾರಿ ಗೆದ್ದಿದ್ದರೆ ಬಾಂಗ್ಲಾದೇಶ, ದ. ಆಫ್ರಿಕಾ, ವೆಸ್ಟ್‌ಇಂಡೀಸ್ ಮತ್ತು ಇಂಗ್ಲೆಂಡ್ ಒಮ್ಮೆ ಜಯಿಸಿತ್ತು.
ನಾಲ್ಕು ಬಣಗಳು
“ಎ’ ಬಣ: ಭಾರತ, ಬಾಂಗ್ಲಾದೇಶ, ಐರ್ಲೆಂಡ್, ಅಮೆರಿಕ
“ಬಿ’ ಬಣ: ಇಂಗ್ಲೆಂಡ್, ಸ್ಕಾಟ್ಲೆಂಡ್, ದಕ್ಷಿಣ ಆಫ್ರಿಕಾ, ವೆಸ್ಟ್‌ಇಂಡೀಸ್
“ಸಿ’ ಬಣ: ಆಸ್ಟ್ರೇಲಿಯ, ನಮೀಬಿಯ, ಶ್ರೀಲಂಕಾ, ಜಿಂಬಾಬ್ವೆ
“ಡಿ’ ಬಣ: ಅಘಾ^ನಿಸ್ಥಾನ, ನೇಪಾಲ, ನ್ಯೂಜಿಲ್ಯಾಂಡ್, ಪಾಕಿಸ್ಥಾನ