ಪೊಚೆಫ್ಸೂಮ್: ಅಂಡರ್-19 ವನಿತಾ ಟಿ20 ವಿಶ್ವಕಪ್ನಲ್ಲಿ ಭಾರತದ ಅಜೇಯ ಓಟವು ಸೂಪರ್ ಸಿಕ್ಸ್ ಹಂತದಲ್ಲಿ ಅಂತ್ಯಗೊಂಡಿದೆ.
ಶನಿವಾರ ನಡೆದ ಸೂಪರ್ ಸಿಕ್ಸ್ ಹಂತದ ಪಂದ್ಯದಲ್ಲಿ ಭಾರತವು ಆಸ್ಟ್ರೇಲಿಯ ವಿರುದ್ಧ 7 ವಿಕೆಟ್ಗಳಿಂದ ಸೋಲನ್ನು ಕಂಡಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಭಾರತ ವನಿತೆಯರು 18.5 ಓವರ್ಗಳಲ್ಲಿ ಕೇವಲ 87 ರನ್ನಿಗೆ ಆಲೌಟಾದರು. ಇದಕ್ಕುತ್ತರವಾಗಿ ಆಸ್ಟ್ರೇಲಿಯ ವನಿತೆ ಯರು 13.5 ಓವರ್ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು 88 ರನ್ ಗಳಿಸಿ ಜಯ ಸಾಧಿಸಿತು. ಈ ಸೋಲಿನಿಂದ ಭಾರತದ ರನ್ಧಾರಣೆಗೆ ಹೊಡೆತ ಬಿದ್ದಿದೆ.
ಸೂಪರ್ ಸಿಕ್ಸ್ ಬಣ ಒಂದರಲ್ಲಿ ಆಸ್ಟ್ರೇಲಿಯ, ಭಾರತ, ದಕ್ಷಿಣ ಆಫ್ರಿಕಾ ಮತ್ತು ಬಾಂಗ್ಲಾದೇಶ ತಲಾ ನಾಲ್ಕು ಅಂಕ ಹೊಂದಿದೆ. ಉತ್ತಮ ರನ್ಧಾರಣೆಯ ಆಧಾರದಲ್ಲಿ ಆಸ್ಟ್ರೇಲಿಯ ಅಗ್ರಸ್ಥಾನ ಮತ್ತು ಭಾರತ ದ್ವಿತೀಯ ಸ್ಥಾನದಲ್ಲಿದೆ.