ಆರಂಭದಲ್ಲಿ ಕೆಲವು ಆಟಗಾರರು ಭರವಸೆ ಮೂಡಿಸುತ್ತಾರೆ. ವೃತ್ತಿ ಜೀವನದ ಆರಂಭದಲ್ಲಿಯೇ ತನ್ನ ಆಟದಿಂದ ಆಯ್ಕೆ ಸಮಿತಿ, ಮಾಧ್ಯಮಗಳ ಗಮನ ಸೆಳೆಯುತ್ತಾರೆ. ಆದರೆ ಮುಂದೆ ಬಂದಂತೆ ಅದೇ ಆಟವನ್ನು ಮುಂದುವರಿಸಲು ವಿಫಲರಾಗುತ್ತಾರೆ. ಅಂತಹ ಕೆಲವು ಆಟಗಾರರ ಪಟ್ಟಿ ಇಲ್ಲಿದೆ.
ತನ್ಮಯ್ ಶ್ರೀವಾಸ್ತವ್
2008 ಅಂಡರ್ 19 ತಂಡದ ಸದಸ್ಯ ಈ ತನ್ಮಯ್ ಶ್ರೀವಾಸ್ತವ್. ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ ಮತ್ತು ಮನೀಷ್ ಪಾಂಡೆ ಕೂಡಾ ಇದೇ ತಂಡದ ಸದಸ್ಯರಾಗಿದ್ದರು. ಕೂಟದ ಫೈನಲ್ ಪಂದ್ಯದಲ್ಲಿ ಉಪಯುಕ್ತ 43 ರನ್ ಬಾರಿಸಿದ್ದರು. ಅಂದಹಾಗೆ ತನ್ಮಯ್ ಶ್ರೀವಾಸ್ತವ್ ಕೂಟದಲ್ಲಿ 262 ರನ್ ಗಳಿಸಿ ಕೂಟದ ಗರಿಷ್ಠ ರನ್ ಗಳಿಸದ ಸಾಧನೆ ಮಾಡಿದ್ದರು.
2008 ಮತ್ತು 2009ರಲ್ಲಿ ಐಪಿಎಲ್ ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರವಾಗಿ ಆಡುವ ಅವಕಾಶ ಪಡೆದಿದ್ದರು. ಆದರೆ ಉತ್ತಮ ಪ್ರದರ್ಶನ ನೀಡಲು ವಿಫಲರಾಗಿದ್ದರು. ಆಡಿದ ಏಳು ಪಂದ್ಯದಲ್ಲಿ ಗಳಿಸಿದ್ದು ಕೇವಲ ಎಂಟು ರನ್! ಅಂಡರ್ 19 ತಂಡದಲ್ಲಿ ವಿರಾಟ್ ಕೊಹ್ಲಿ, ಜಡೇಜಾ, ಮನೀಷ್ ಪಾಂಡೆ ಸದ್ಯ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಆದರೆ ತನ್ಮಯ್ ಶ್ರೀವಾಸ್ತವ್ ಮಾತ್ರ ಅವಕಾಶಗಳನ್ನು 2020ರಲ್ಲಿ ವೃತ್ತಿಪರ ಕ್ರಿಕೆಟ್ ನಿಂದ ನಿವೃತ್ತರಾದರು.
ವಿಜಯ್ ಕುಮಾರ್ ಯೋ ಮಹೇಶ್
ತಮಿಳುನಾಡಿನ ವೇಗಿ ವಿಜಯ್ ಕುಮಾರ್ ಯೋ ಮಹೇಶ್ ಕೂಡಾ ಅಂಡರ್ 19 ಕ್ರಿಕೆಟ್ ನಲ್ಲಿ ಬೆಳಕಿಗೆ ಬಂದವರು. 2006ರ ಅಂಡರ್ 19 ವಿಶ್ವಕಪ್ ಕೂಟದಲ್ಲಿ ಆಡಿದ್ದ ಯೋ ಮಹೇಶ್ 11 ವಿಕೆಟ್ ಪಡೆದಿದ್ದರು. 2008ರಲ್ಲಿ ಚೊಚ್ಚಲ ಐಪಿಎಲ್ ಕೂಟದಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ಪರ ಆಡುವ ಅವಕಾಶ ಪಡೆದಿದ್ದರು. ಆ ಋತುವಿನಲ್ಲಿ 11 ಪಂದ್ಯಗಳಿಂದ ಯೋ ಮಹೇಶ್ 16 ವಿಕೆಟ್ ಕಬಳಿಸಿದ್ದರು. ಆದರೆ ಮುಂದೆ ಸ್ಥಿರ ಪ್ರದರ್ಶನ ನೀಡಲು ವಿಫಲರಾದ ವಿಜಯ್ ಕುಮಾರ್ ಯೋ ಮಹೇಶ್ ಮತ್ತೆ ಹೆಚ್ಚಿನ ಅವಕಾಶ ಪಡೆಯಲಿಲ್ಲ.
ಗೌರವ್ ಧಿಮಾನ್
ಕ್ರಿಕೆಟ್ ದುನಿಯಾ ಹೆಚ್ಚಾಗಿ ಕೇಳಿರದ ಹೆಸರಿದು. 2006ರಲ್ಲಿ ಅಂಡರ್ 19 ವಿಶ್ವಕಪ್ ಕೂಟದಲ್ಲಿ ಆಡಿದ ಗೌರವ್ ಧಿಮಾನ್ ಒಬ್ಬ ಅದ್ಭುತ ಆಲ್ ರೌಂಡರ್. ಬಲಗೈ ಬ್ಯಾಟ್ಸ್ ಮನ್ ಆಗಿದ್ದ ಗೌರವ್ ಉತ್ತಮ ಬೌಲರ್ ಆಗಿದ್ದರು. ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರಿದ್ದ ಗೌರವ್ ಧಿಮಾನ್ ದುರದೃಷ್ಟವೆಂಬಂತೆ ಯಾವುದೇ ಪಂದ್ಯದಲ್ಲಿ ಆಡುವ ಅವಕಾಶ ಪಡೆದಿಲ್ಲ.
ಒಂದು ಕಾಲದಲ್ಲಿ ಟೀಂ ಇಂಡಿಯಾದ ಭವಿಷ್ಯದ ಆಲ್ ರೌಂಡರ್ ಎಂದು ಭರವಸೆ ಮೂಡಿಸಿದ್ದ ಗೌರವ್ ಧಿಮಾನ್ ತನಗೆ ಸಿಕ್ಕ ಅವಕಾಶಗಳನ್ನು ಸದಪಯೋಗ ಪಡಿಸಲಿಲ್ಲ.
ಉನ್ಕುಕ್ತ್ ಚಾಂದ್
2012ರ ವಿಶ್ವಕಪ್ ಫೈನಲ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಬಾರಿಸಿದ್ದ ಅಜೇಯ ಶತಕ ಈ ಡೆಲ್ಲಿ ಹುಡುಗನನ್ನು ಮನೆಮಾತಾಗಿಸಿತ್ತು. ತಂಡದ ನಾಯಕನಾಗಿದ್ದ ಉನ್ಮುಕ್ತ್ ಚಾಂದ್ ಮತ್ತೊಬ್ಬ ವಿರಾಟ್ ಕೊಹ್ಲಿಯಾಗುವ ಭರವಸೆ ಮೂಡಿಸಿದ್ದ. ಅಷ್ಟೊಂದು ಪ್ರಸಿದ್ದಿ ಪಡೆದಿತ್ತು ಚಾಂದ್ ಹೆಸರು. ಮುಂದೆ 2013ರ ಐಪಿಎಲ್ ನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ಪರ ಆಡುವ ಅವಕಾಶ ಪಡೆದ ಚಾಂದ್ ಮಾತ್ರ ಹೇಳಿಕೊಳ್ಳುವಂತಹ ಪ್ರದರ್ಶನ ತೋರಿಸಿಲ್ಲ.
ಸತತವಾಗಿ ವಿಫಲನಾದ ಚಾಂದ್ ಮುಂದೆ ಮುಂಬೈ ಇಂಡಿಯನ್ಸ್ ಬಳಗ ಸೇರಿದರೂ ಅಲ್ಲೂ ನಿರೀಕ್ಷಿತ ಪ್ರದರ್ಶನ ತೋರಲಿಲ್ಲ. ದೇಶಿ ಕ್ರಿಕೆಟ್ ನಲ್ಲೂ ಚಾಂದ್ ಬೆಳಗಲಿಲ್ಲ. ಭಾರತ ತಂಡದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಬೇಕಿದ್ದ ಅಂಡರ್ 19 ವಿಶ್ವಕಪ್ ವಿಜೇತ ನಾಯಕ ಸದ್ಯ ಸುದ್ದಿಯಲ್ಲೇ ಇಲ್ಲ.
ಕೀರ್ತನ್ ಶೆಟ್ಟಿ ಬೋಳ