Advertisement

ಅಂಡರ್‌-19 ಕ್ರಿಕೆಟ್‌ ಸರಣಿ ಭಾರತ ಸೋಲಿನ ಆರಂಭ

03:45 AM Jan 31, 2017 | |

ಮುಂಬಯಿ: ಪ್ರವಾಸಿ ಇಂಗ್ಲೆಂಡ್‌ ಎದುರಿನ ಅಂಡರ್‌-19 ಏಕದಿನ ಕ್ರಿಕೆಟ್‌ ಸರಣಿಯಲ್ಲಿ ಭಾರತ ಸೋಲಿನ ಆರಂಭ ಮಾಡಿದೆ. ಸೋಮವಾರ ಇಲ್ಲಿನ ವಾಂಖೇಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯವನ್ನು ಇಂಗ್ಲೆಂಡ್‌ ಕಿರಿಯರು 23 ರನ್ನುಗಳಿಂದ ಜಯಿಸಿ 5 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದ್ದಾರೆ.

Advertisement

ಬ್ಯಾಟಿಂಗಿಗೆ ಇಳಿಸಲ್ಪಟ್ಟ ಇಂಗ್ಲೆಂಡ್‌ 7 ವಿಕೆಟಿಗೆ 256 ರನ್‌ ಬಾರಿಸಿದರೆ, ಅಭಿಷೇಕ್‌ ಶರ್ಮ ನಾಯಕತ್ವದ ಭಾರತ 42.5 ಓವರ್‌ಗಳಲ್ಲಿ 233ಕ್ಕೆ ಆಲೌಟ್‌ ಆಯಿತು.

ಆರಂಭಕಾರ ಹಿಮಾಂಶು ರಾಣ ಶತಕ ಬಾರಿಸಿ ಅಮೋಘ ಹೋರಾಟ ಸಂಘಟಿಸಿದರೂ ಅವರಿಗೆ ಇನ್ನೊಂದು ತುದಿಯಿಂದ ಸೂಕ್ತ ಬೆಂಬಲ ಲಭಿಸಲಿಲ್ಲ. ರಾಣ 87 ಎಸೆತ ಎದುರಿಸಿ 101 ರನ್‌ ಕೊಡುಗೆ ಸಲ್ಲಿಸಿದರು (12 ಬೌಂಡರಿ, 1 ಸಿಕ್ಸರ್‌). 36ನೇ ಓವರ್‌ ಮುಕ್ತಾಯಕ್ಕೆ ಸರಿಯಾಗಿ, 7ನೇ ವಿಕೆಟ್‌ ರೂಪದಲ್ಲಿ ರಾಣ ಪೆವಿಲಿಯನ್‌ ಸೇರುವಾಗ ಭಾರತ 198 ರನ್‌ ಮಾಡಿತ್ತು. ಇಲ್ಲಿಗೆ ಆತಿಥೇಯರ ಹೋರಾಟ ಬಹುತೇಕ ಕೊನೆಗೊಂಡಿತ್ತು.

ರಾಣ ಹೊರತುಪಡಿಸಿದರೆ ಬೌಲರ್‌ ಕಮಲೇಶ್‌ ನಾಗರ್ಕೋಟಿ (37), ವನ್‌ಡೌನ್‌ ಬ್ಯಾಟ್ಸ್‌ಮನ್‌ ಶುಭಮಾನ್‌ ಗಿಲ್‌ (29) ಮಾತ್ರ ಒಂದಿಷ್ಟು ಹೋರಾಟ ನಡೆಸಿದರು.

ಇಂಗ್ಲೆಂಡಿನ ದೊಡ್ಡ ಮೊತ್ತಕ್ಕೆ ಕಾರಣರಾದವರು ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಡೆಲಾÅಯ್‌ ರಾಲಿನ್ಸ್‌. ಆಕ್ರಮಣಕಾರಿ ಆಟಕ್ಕೆ ಇಳಿದ ರಾಲಿನ್ಸ್‌ 88 ಎಸೆತಗಳಿಂದ 107 ರನ್‌ ಬಾರಿಸಿದರು. ಈ ಅವಧಿಯಲ್ಲಿ 8 ಬೌಂಡರಿ ಹಾಗೂ ಇಂಗ್ಲೆಂಡ್‌ ಸರದಿಯ ಎಲ್ಲ 5 ಸಿಕ್ಸರ್‌ ಸಿಡಿಯಲ್ಪಟ್ಟಿತು. ಆರಂಭಕಾರ ಹ್ಯಾರ್ರಿ ಬ್ರೂಕ್‌ 51 ರನ್‌ ಮಾಡಿದರು.

Advertisement

ಸಂಕ್ಷಿಪ್ತ ಸ್ಕೋರ್‌: ಇಂಗ್ಲೆಂಡ್‌ ಕಿರಿಯರು-7 ವಿಕೆಟಿಗೆ 256 (ರಾಲಿನ್ಸ್‌ ಔಟಾಗದೆ 107, ಬ್ರೂಕ್‌ 51, ಪೋಪ್‌ 37, ನಾಗರ್ಕೋಟಿ 36ಕ್ಕೆ 2, ಅಭಿಷೇಕ್‌ 52ಕ್ಕೆ 2). ಭಾರತದ ಕಿರಿಯರು-42.5 ಓವರ್‌ಗಳಲ್ಲಿ 233 (ರಾಣ 101, ನಾಗರ್ಕೋಟಿ 37, ಗಿಲ್‌ 29, ಫಿಶರ್‌ 41ಕ್ಕೆ 4, ಬ್ರೂಕ್ಸ್‌ 29ಕ್ಕೆ 2, ಹೋಲ್ಡನ್‌ 42ಕ್ಕೆ 2, ರಾಲಿನ್ಸ್‌ 46ಕ್ಕೆ 2).

Advertisement

Udayavani is now on Telegram. Click here to join our channel and stay updated with the latest news.

Next