Advertisement

Under-19 ಏಷ್ಯಾ ಕಪ್‌; ಭಾರತ, ಪಾಕ್‌ಗೆ ಆಘಾತ: ಬಾಂಗ್ಲಾ vs ಯುಎಇ ಫೈನಲ್‌

11:30 PM Dec 15, 2023 | Team Udayavani |

ದುಬಾೖ: ಎಸಿಸಿ ಅಂಡರ್‌-19 ಏಷ್ಯಾ ಕಪ್‌ ಕ್ರಿಕೆಟ್‌ ಪಂದ್ಯಾವಳಿಯ ಸೆಮಿಫೈನಲ್‌ನಲ್ಲಿ ಅಚ್ಚರಿಯ ಫ‌ಲಿತಾಂಶಗಳು ದಾಖಲಾಗಿವೆ. ಭಾರತ ಮತ್ತು ಪಾಕಿಸ್ಥಾನ ಸೋಲನುಭವಿಸಿ ನಿರ್ಗಮಿಸಿವೆ. ಈ ತಂಡಗಳನ್ನು ಮಣಿಸಿದ ಬಾಂಗ್ಲಾದೇಶ ಮತ್ತು ಯುಎಇ ತಂಡಗಳು ಫೈನಲ್‌ನಲ್ಲಿ ಎದುರಾಗಲಿವೆ.

Advertisement

ಶುಕ್ರವಾರದ ಮುಖಾಮುಖೀಯಲ್ಲಿ ಭಾರತ 42.4 ಓವರ್‌ಗಳಲ್ಲಿ 188ಕ್ಕೆ ಕುಸಿದರೆ, ಬಾಂಗ್ಲಾ 42.5 ಓವರ್‌ಗಳಲ್ಲಿ 6 ವಿಕೆಟಿಗೆ 189 ರನ್‌ ಮಾಡಿ ಫೈನಲ್‌ಗೆ ನೆಗೆಯಿತು. ಇನ್ನೊಂದು ಸೆಮಿಫೈನಲ್‌ನಲ್ಲಿ ಯುಎಇ 11 ರನ್ನುಗಳಿಂದ ಪಾಕಿಸ್ಥಾನಕ್ಕೆ ಆಘಾತವಿಕ್ಕಿತು.

ಭಾರತದ ಪರ ಎಂ. ಅಭಿಷೇಕ್‌ 62, ಮುಶೀರ್‌ ಖಾನ್‌ 50 ರನ್‌ ಹೊಡೆದರೂ ಉಳಿದವರಿಂದ ನಿರೀಕ್ಷಿತ ಪ್ರದರ್ಶನ ಹೊರಹೊಮ್ಮಲಿಲ್ಲ. ಬಾಂಗ್ಲಾ ಪರ ಮರೂಫ್ ರಿಧ 41ಕ್ಕೆ 4 ವಿಕೆಟ್‌ ಕಿತ್ತರು. ಚೇಸಿಂಗ್‌ ವೇಳೆ ಅರೀಫ‌ುಲ್‌ ಇಸ್ಲಾಮ್‌ 94 ರನ್‌ ಬಾರಿಸಿ ಬಾಂಗ್ಲಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಯುಎಇ ಪರಾಕ್ರಮ
ಮೊದಲ ಸೆಮಿಫೈನಲ್‌ನಲ್ಲಿ ಯುಎಇ 47.5 ಓವರ್‌ಗಳಲ್ಲಿ 193 ರನ್‌ ಗಳಿಸಿದರೆ, ಪಾಕಿಸ್ಥಾನ 49.3 ಓವರ್‌ಗಳಲ್ಲಿ 182ಕ್ಕೆ ಆಲೌಟಾಯಿತು.

Advertisement

Udayavani is now on Telegram. Click here to join our channel and stay updated with the latest news.

Next