ಗುವಾಹಟಿ/ಗೋವಾ: ಯುರೋಪಿಯನ್ ಚಾಂಪಿಯನ್ ಸ್ಪೇನ್ ಅಂಡರ್-17 ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ಅದು ಎಂಟರ ಸುತ್ತಿನಲ್ಲಿ ಏಶ್ಯದ “ಅಚ್ಚರಿಯ ತಂಡ’ ಇರಾನನ್ನು ಎದುರಿಸಲಿದೆ.
ಮಂಗಳವಾರದ ಪ್ರೀ-ಕ್ವಾರ್ಟರ್ ಫೈನಲ್‌ನಲ್ಲಿ ಸ್ಪೇನ್ 2-1 ಗೋಲುಗಳಿಂದ ಫ್ರಾನ್ಸ್‌ಗೆ ಸೋಲುಣಿಸಿದರೆ, ಇರಾನ್ ಇಷ್ಟೇ ಅಂತರದಿಂದ ಮೆಕ್ಸಿಕೋಗೆ ಆಘಾತವಿಕ್ಕಿತು.
ಗುವಾಹಟಿಯಲ್ಲಿ ನಡೆದ ಮೇಲಾಟದಲ್ಲಿ ಗೋಲಿನ ಖಾತೆ ತೆರೆದದ್ದು ಫ್ರಾನ್ಸ್ ಆದರೂ ಈ ಮೇಲುಗೈಯನ್ನು ಉಳಿಸಿಕೊಳ್ಳಲು ಸ್ಪೇನ್ ಅವಕಾಶ ನೀಡಲಿಲ್ಲ. 34ನೇ ನಿಮಿಷದಲ್ಲಿ ಲೆನ್ನಿ ಪಿಂಟರ್ ಫ್ರಾನ್ಸ್‌ಗೆ ಮುನ್ನಡೆ ಒದಗಿಸಿದರು. ಆದರೆ ಹತ್ತೇ ನಿಮಿಷದಲ್ಲಿ ಜುವಾನ್ ಮಿರಾಂಡ ಪಂದ್ಯವನ್ನು ಸಮಬಲಕ್ಕೆ ತಂದರು. ಇಲ್ಲಿಂದ ಮುಂದೆ ಇತ್ತಂಡಗಳು ಸಮಬಲದ ಹೋರಾಟ ನಡೆಸುತ್ತ ಸಾಗಿದ್ದರಿಂದ ಪಂದ್ಯ ಡ್ರಾಗೊಳ್ಳುವ ಸಾಧ್ಯತೆ ನಿಚ್ಚಳವಾಯಿತು. ಆದರೆ ಅಂತಿಮ ಕ್ಷಣದಲ್ಲಿ (90ನೇ ನಿಮಿಷ) ಅಬೆಲ್ ರಿಝ್ ಗೋಲೊಂದನ್ನು ಬಾರಿಸಿ ಸ್ಪೇನ್ ಗೆಲುವು ಘೋಷಿಸಿದರು. ಕಾಕತಾಳೀಯವೆಂದರೆ, ಯುರೋಪಿಯನ್ ಚಾಂಪಿಯನ್‌ಶಿಪ್ ನಾಕೌಟ್ ಹಂತದಲ್ಲೂ ಫ್ರಾನ್ಸ್ ತಂಡ ಸ್ಪೇನಿಗೆ ಶರಣಾಗಿತ್ತು.
ಗೆಲುವಿನ ವಿಶ್ವಾಸದಲ್ಲಿ ಬ್ರಝಿಲ್, ಘಾನಾಕೊಚ್ಚಿ, ಅ. 17: ಲೀಗ್ ಹಂತದಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ಗೆದ್ದಿರುವ ದಕ್ಷಿಣ ಅಮೆರಿಕದ ಬಲಿಷ್ಠ ತಂಡ ಬ್ರಝಿಲ್ ಫಿಫಾ ಅಂಡರ್ 17 ವಿಶ್ವಕಪ್ ಫುಟ್ಬಾಲ್ ಕೂಟದ ಪ್ರೀ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಹೊಂಡುರಾಸ್ ತಂಡವನ್ನು ಎದುರಿಸಲಿದ್ದು ಗೆಲುವಿನ ವಿಶ್ವಾಸದಲ್ಲಿದೆ.
ಎರಡು ಬಾರಿಯ ಚಾಂಪಿಯನ್ ಘಾನಾ ತಂಡವು ಬುಧವಾರದ ಇನ್ನೊಂದು ಪ್ರೀ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ನೈಗರ್ ತಂಡವನ್ನು ಎದು ರಿಸಲಿದ್ದು ಗೆಲುವಿನ ಫೇವರಿಟ್ ತಂಡವಾಗಿದೆ.
ಇಂದಿನ ಪಂದ್ಯಗಳು
ಘಾನಾ-ನೈಗರ್
ಸ್ಥಳ: ನವಿಮುಂಬಯಿ
ಆರಂಭ: 5.00
ಬ್ರಝಿಲ್
-ಹೊಂಡುರಾಸ್
ಸ್ಥಳ: ಕೊಚ್ಚಿ
ಆರಂಭ: ರಾತ್ರಿ 8.00