Advertisement
ಬೆಂಗಳೂರಿನ ವಿವಿಧ ಕ್ರೀಡಾಂಗಣದಲ್ಲಿ ಒಟ್ಟು ಎಂಟು ಪಂದ್ಯಗಳು ರಾಜ್ಸ್ ಕ್ರಿಕೆಟ್ ಅಕಾಡೆಮಿ ತಂಡವು ಆಡಿದ್ದು, ಆ ಪೈಕಿ 7 ಪಂದ್ಯಗಳಲ್ಲಿ ಜಯಗಳಿಸಿ ಫ್ರೆಂಡ್‌ಶಿಪ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ. ಫ್ರೆಂಡ್‌ಶಿಪ್ ಟ್ರೋಫಿ ಸರಣಿಯಲ್ಲಿ ಬೆಸ್ಟ್ ಬೌಲರ್ ಪ್ರಶಸ್ತಿಯನ್ನು ರಾಜ್ಸ್ ಕ್ರಿಕೆಟ್ ಅಕಾಡೆಮಿಯ ದಿಯಾ ನವೀನ್ ಇನ್ನ ಹಾಗೂ ಬೆಸ್ಟ್ ಬ್ಯಾಟ್ಸ್‌ಮೆನ್ ಪ್ರಶಸ್ತಿಯನ್ನು ಕರಣ್ ಕುಮಾರ್ ಹಾಗೂ ಸರಣಿ ಶ್ರೇಷ್ಟ ಪ್ರಶಸ್ತಿಯನ್ನು ಜೋಗೆಂಧರ ಸಿಂಗ್ ಮತ್ತು ಅತೀ ಭರವಸೆಯ ಆಟಗಾರ ಪ್ರಶಸ್ತಿಯನ್ನು ಸಂಚಿತ್ ಲೋದಾ ಅವರು ಪಡೆದುಕೊಂಡರು.
ಸರಣಿಯಲ್ಲಿ ಬಾಲಕರ ತಂಡದ ಸದಸ್ಯೆಯಾಗಿ ಆಡಿರುವ ತುಳು-ಕನ್ನಡಿಗರಾದ ದಿಯಾ ನವೀನ್ ಇನ್ನ ಅವರು ಬೌಲಿಂಗ್‌ನಲ್ಲಿ ಗಮನಾರ್ಹ ಸಾಧನೆ ಮಾಡಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಕಳೆದೊಂದು ವರ್ಷದಿಂದ ಥಾಣೆಯ ರಾಜ್ಸ್ ಕ್ರಿಕೆಟ್ ಅಕಾಡೆಮಿಯಲ್ಲಿ ಕನ್ನಡಿಗರಾದ ಬಾಲ ಶೆಟ್ಟಿ ಅವರಿಂದ ಕ್ರಿಕೆಟ್ ತರಭೇತಿಯನ್ನು ಪಡೆಯುತ್ತಿರುವ ದಿಯಾ ಇನ್ನಾ ಅವರು ಮುಂಬಯಿಯ ಆಜಾದ್ ಮೈದಾನದಲ್ಲಿ ಹಾಗೂ ಓವಲ್ ಮೈದಾನದಲ್ಲಿ ಜರಗಿದ ಧರಂವೀರ್ ಕ್ರಿಕೆಟ್ ಅಕಾಡೆಮಿಯ ಹಾಗೂ ದಿಲೀಪ್ ವೆಂಗ್‌ಸರ್ಕರ್ ಕ್ರಿಕೆಟ್ ಅಕಾಡೆಮಿ ತಂಡದ ವಿರುದ್ಧ ನಡೆದ ಪಂದ್ಯಗಳಲ್ಲೂ ಬೌಲಿಂಗ್ ಗಮನಾರ್ಹ ಸಾಧನೆ ಮಾಡಿದ್ದರು. ಇವರು ಮುಂಬಯಿ ಪತ್ರಕರ್ತ ನವೀನ್ ಇನ್ನಾ ಅವರ ಪುತ್ರಿ.