Advertisement
ಅಂಗನವಾಡಿ ಕೇಂದ್ರಗಳಿಗೆ ಇದೇ ಮೊದಲ ಬಾರಿಗೆ ಗರಿಷ್ಠ ರಜೆ ಘೋಷಿಸಲಾಗಿದೆ. ಹೀಗಾಗಿ ಬಿಸಿಲಿನ ಧಗೆಯಲ್ಲಿ ಮಕ್ಕಳು ಅಂಗವಾಡಿಗೆ ಹೋಗಿಬರುವ ಸಂಕಷ್ಟದಿಂದ ಪಾರಾಗಿದ್ದಾರೆ.
ಪ್ರತೀ ವರ್ಷದಂತೆ ಈ ಬಾರಿಯು 15 ದಿನಗಳ ಅವಧಿಗೆ ಅಂಗನವಾಡಿಗಳಿಗೆ ರಜೆ ನೀಡಲು ನಿರ್ಧರಿಸಲಾಗಿತ್ತು. ಆದರೆ ಪುಟಾಣಿಗಳ ಹಿತದೃಷ್ಟಿಯಿಂದ ಸಮಯ ಪರಿಷ್ಕರಿಸಿ ಎ. 15ರಿಂದ ಮೇ 26ರ ತನಕ ಬೇಸಗೆ ರಜೆ ಘೋಷಿಸಲಾಗಿದೆ. ಅಂದರೆ ಒಟ್ಟು 41 ದಿನಗಳರಜೆ ದೊರೆತಿದೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯ ರಿಗೆ ಎ. 15ರಿಂದ ಮೇ 11ರ ತನಕ 8ರಿಂದ ಮಧ್ಯಾಹ್ನ 12 ಗಂಟೆ ತನಕ ಕೇಂದ್ರಗಳಲ್ಲಿ ಇರುವಂತೆ ಸೂಚನೆ ನೀಡಲಾಗಿದ್ದು ಮೇ 11 ರಿಂದ 26 ರ ತನಕ ಅಂಗನವಾಡಿ ಸಿಬಂದಿ ಗಳಿಗೆ ರಜೆ ಘೋಷಿಸಲಾಗಿದೆ. ಬಿಸಿಲ ಝಳ
ಈ ಬಾರಿ ವಯಸ್ಕರಿಗೆ ಬಿಸಿಲಿನ ಝಳ ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಂತಹವು ದರಲ್ಲಿ ಪುಟಾಣಿಗಳು ಅಂಗನವಾಡಿಗೆಗಳಿಗೆ ಹೋಗಿ ಬರಬೇಕಾದ ಪರಿಸ್ಥಿತಿ ತೀರಾ ಕಷ್ಟಕರವಾದದು. ಹೀಗಾಗಿ ಕೆಲವು ಜಿಲ್ಲೆಗಳ ಅಂಗನವಾಡಿ ಕಾರ್ಯ ಕರ್ತೆ ಯರ ಮತ್ತು ಸಹಾ ಯಕಿ ಯರ ಸಂಘಟನೆಗಳ ದೀರ್ಘ ರಜೆ ನೀಡು ವಂತೆ ಮನವಿ ಸಲ್ಲಿಸಿದ್ದರು. ಅದರಂತೆ ಕಲ್ಯಾಣ ಕರ್ನಾಟಕದ ಜಿಲ್ಲೆಗಳಿಗೆ ಕಾರ್ಯನಿರ್ವಹಣ ಸಮಯ ಪರಿಷ್ಕರಿಸಲಾಗಿತ್ತು. ಉಳಿದ ಜಿಲ್ಲೆಗಳಿಗೂ ಇದನ್ನು ವಿಸ್ತರಿಸಬೇಕು ಎನ್ನುವ ಬೇಡಿಕೆಗೆ ಇಲಾಖೆ ಅಸ್ತು ನೀಡಿದೆ. ಏರುತ್ತಿರುವ ತಾಪಮಾನದ ಜತೆಗೆ ಲೋಕಸಭಾ ಚುನಾವಣೆಯಲ್ಲಿ ಅಂಗನವಾಡಿ ಕಾರ್ಯಕರ್ತರಿಗೆ ಕೆಲಸ ನಿರ್ವಹಣೆ ಇರುವುದು, ಅಂಗನವಾಡಿ ಕೇಂದ್ರಗಳನ್ನು ಮತಗಟ್ಟೆಗಳನ್ನಾಗಿ ಗುರುತಿಸಿರುವುದು ಕೂಡ ರಜೆ ಪರಿಷ್ಕರಣೆಗೆ ಕಾರಣಗಳಲ್ಲಿ ಒಂದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
Related Articles
ರಜಾ ಅವಧಿಯಲ್ಲಿ ಅಂಗನವಾಡಿ ಕೇಂದ್ರದ ಫಲಾನುಭವಿಗಳಿಗೆ ನಿಯಮ ಅನುಸಾರ ಆಹಾರ ಪೂರೈಕೆ ಮಾಡಬೇಕು. ಪೂರಕ ಪೌಷ್ಟಿಕ ಆಹಾರ ವಿತರಣೆಯಲ್ಲಿ ಯಾವುದೇ ಅಡಚಣೆ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ.
Advertisement
ಬಿಸಿಲಿನ ತೀವ್ರತೆ, ಚುನಾವಣ ಕಾರಣಗಳಿಂದ ಈ ಬಾರಿ ಎ. 15ರಿಂದ ಮೇ 26ರ ತನಕ ಅಂಗನವಾಡಿ ಮಕ್ಕಳಿಗೆ ವಿಶೇಷ ರಜೆ ನೀಡಲಾಗಿದೆ. ಇದರಲ್ಲಿ ಮೇ 15ರಿಂದ 26ರ ತನಕ ಬೇಸಗೆ ರಜೆಯು ಸೇರಿದೆ. ಆಹಾರವನ್ನು ಮಕ್ಕಳ ಮನೆಗೆ ನೀಡಲಾಗುತ್ತದೆ. ಇಷ್ಟು ದೀರ್ಘ ರಜೆ ನೀಡಿರುವುದು ಇದೇ ಮೊದಲು.– ಕುಮಾರಕೃಷ್ಣ, ಮಕ್ಕಳ ರಕ್ಷಣ ಅಧಿಕಾರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ದ.ಕ. ಜಿಲ್ಲೆ -ಕಿರಣ್ ಪ್ರಸಾದ್ ಕುಂಡಡ್ಕ