Advertisement

ಬದಲಾಗದ ರೆಪೊ ದರ

06:00 AM Dec 06, 2018 | Team Udayavani |

ಮುಂಬಯಿ: ಆರ್‌ಬಿಐನ  ದ್ವೆ„ಮಾಸಿಕ ವಿತ್ತ ನೀತಿ ಬುಧವಾರ ಪ್ರಕಟವಾಗಿದ್ದು, ರೆಪೊ ದರಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಆದರೆ ಹಣದುಬ್ಬರ ಇನ್ನಷ್ಟು ಏರಿಕೆಯಾದರೆ ರೆಪೊ ದರ ಇಳಿಕೆ ಮಾಡುವುದಾಗಿ ಹೇಳಿದೆ. ಆರ್ಥಿಕತೆ ನಿಧಾನ ಗತಿಯಲ್ಲಿ ಸಾಗುತ್ತಿರುವುದರಿಂದ ಬ್ಯಾಂಕ್‌ಗಳು ಸಾಲ ನೀಡುವಿಕೆಯನ್ನು ಹೆಚ್ಚಿಸ ಬೇಕು ಎಂದೂ ಆರ್‌ಬಿಐ ಗವರ್ನರ್‌ ಬ್ಯಾಂಕ್‌ಗಳಿಗೆ ಸೂಚಿಸಿದ್ದಾರೆ. ಚರ್ಚೆಗೀಡಾಗಿದ್ದ ಕೇಂದ್ರ ಮತ್ತು ಆರ್‌ಬಿಐ ಮಧ್ಯದ ತಿಕ್ಕಾಟದ ಬಗ್ಗೆ  ಪಟೇಲ್‌ ಪ್ರತಿಕ್ರಿಯೆ ನೀಡಲು ನಿರಾಕರಿಸಿ ದರು. ಆರ್‌ಬಿಐ ರೆಪೊ ದರ ಪ್ರಕಟಿಸು ತ್ತಿದ್ದಂತೆಯೇ ಮುಂಬೈ ಷೇರು ಪೇಟೆಯಲ್ಲಿ ಕುಸಿತ ಕಾಣಲಾರಂಭಿಸಿತು. ದಿನದ ಅಂತ್ಯಕ್ಕೆ ಬಿಎಸ್‌ಇ ಸೆನ್ಸೆಕ್ಸ್‌ 249.90 ಅಂಕ ಕುಸಿದು, 35,884.41 ಕ್ಕೆ ತಲುಪಿದೆ. ಇನ್ನೊಂದೆಡೆ ಎನ್‌ಎಸ್‌ಇ ನಿಫ್ಟಿ ಕೂಡ 84.55 ಅಂಕ ಕುಸಿದು 10,784.95 ಕ್ಕೆ ಕೊನೆಯಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next