Advertisement

Delhi Capitals: ಮೊದಲ ಗೆಲುವಿನ ಸಂತಸದಲ್ಲಿದ್ದ ರಿಷಭ್ ಪಂತ್ ಗೆ ಶಾಕ್: ಭಾರಿ ದಂಡ!

01:56 PM Apr 01, 2024 | Team Udayavani |

ಹೊಸದಿಲ್ಲಿ: ದೊಡ್ಡ ಗ್ಯಾಪ್ ನ ನಂತರ ಮತ್ತೆ ಸ್ಪರ್ಧಾತ್ಮಕ ಕ್ರಿಕೆಟ್ ಗೆ ಮರಳಿರುವ ರಿಷಭ್ ಪಂತ್ ಅವರಿಗೆ ರವಿವಾರ ಭಾರಿ ಪ್ರಮಾಣದ ದಂಡ ವಿಧಿಸಲಾಗಿದೆ. 17ನೇ ಸೀಸನ್ ನ ಐಪಿಎಲ್ ನಲ್ಲಿ ಮೂರನೇ ಪಂದ್ಯದಲ್ಲಿ ಮೊದಲ ಗೆಲುವು ಕಂಡ ಡೆಲ್ಲಿ ನಾಯಕನಿಗೆ 12 ಲಕ್ಷ ರೂ ದಂಡ ವಿಧಿಸಲಾಗಿದೆ.

Advertisement

ವಿಶಾಖಪಟ್ಟಣಂನಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 20 ರನ್ ಗಳಿಂದ ಸೋಲಿಸಿತು. ಈ ಪಂದ್ಯದಲ್ಲಿ ರಿಷಭ್ ಪಂತ್ ಅವರು 32 ಎಸೆತಗಳಲ್ಲಿ 51 ರನ್ ಗಳಿಸಿದರು.

ಪಂದ್ಯದಲ್ಲಿ ಡೆಲ್ಲಿ ತಂಡವು ಸ್ಲೋ ಓವರ್ ರೇಟ್ ಕಾಯ್ದುಕೊಂಡ ಕಾರಣದಿಂದ ನಾಯಕ ಪಂತ್ ಗೆ ದಂಢ ವಿಧಿಸಲಾಗಿದೆ. ಈ ಸೀಸನ್ ನಲ್ಲಿ ಡೆಲ್ಲಿ ತಂಡದ ನಾಯಕನ ಇದು ಮೊದಲ ತಪ್ಪಾಗಿದೆ.

ವಿಶಾಖಪಟ್ಟಣಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಡೆಲ್ಲಿ ಪೃಥ್ವಿ ಶಾ, ರಿಷಭ್ ಪಂತ್ ಮತ್ತು ಡೇವಿಡ್ ವಾರ್ನರ್ ಆಟದ ನೆರವಿನಿಂದ 20 ಓವರ್ ಗಳಲ್ಲಿ 191 ರನ್ ಗಳಿಸಿತು. ಉತ್ತರವಾಗಿ ಚೆನ್ನೈ ಆರು ವಿಕೆಟ್ ಕಳೆದುಕೊಂಡು 171 ರನ್ ಮಾತ್ರ ಗಳಿಸಿತು.

Advertisement

Udayavani is now on Telegram. Click here to join our channel and stay updated with the latest news.

Next