Advertisement
ರಾಜ್ಯಪಾಲರ ವಜಾ ಮಾಡಿ: ರಾಷ್ಟ್ರಪತಿಗೆ ಮನವಿ ತಮಿಳುನಾಡಿನ ರಾಜ್ಯಪಾಲ ಕೆ.ಎನ್.ರವಿ ಅವರಿಂದ “ಶಾಂತಿಗೆ ಧಕ್ಕೆ’ ಎಂದು ಆಡಳಿತಾರೂಢ ಡಿಎಂಕೆ ನೇತೃತ್ವದ ಮೈತ್ರಿಕೂಟ ಆರೋಪಿಸಿದೆ. ಜತೆಗೆ ಅವರನ್ನು ಕೂಡಲೇ ವಜಾಮಾಡಬೇಕು ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಮನವಿ ಮಾಡಿದೆ. “2021ರಿಂದ ಇದುವರೆಗೆ 20 ವಿಧೇಯಕಗಳಿಗೆ ರಾಜ್ಯಪಾಲರು ಅಂಗೀಕಾರ ನೀಡಿಲ್ಲ. ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾಗಿರುವ ಸರ್ಕಾರಕ್ಕೆ ಅಧಿಕಾರ ನಡೆಸಲು ರಾಜ್ಯಪಾಲರು ಅವಕಾಶ ಕೊಡುತ್ತಿಲ್ಲ’ ಎಂದು ಮನವಿಯಲ್ಲಿ ಆರೋಪ ಮಾಡಲಾಗಿದೆ.
ಕೇರಳದಲ್ಲಿ ವಿವಿಗಳ ನೇಮಕ ವಿಚಾರದಲ್ಲಿ ಎಲ್‌ಡಿಎಫ್ ಸರ್ಕಾರ ಮತ್ತು ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ನಡುವಿನ ಭಿನ್ನಾಭಿಪ್ರಾಯ ಮತ್ತೂಂದು ಮಜಲು ಪ್ರವೇಶಿಸಿದೆ. ರಾಜ್ಯಗಳ ವಿವಿಗಳ ಕುಲಾಧಿಪತಿ ಹುದ್ದೆಯಿಂದ ರಾಜ್ಯಪಾಲರನ್ನು ಮುಕ್ತಿಗೊಳಿಸುವ ಸುಗ್ರೀವಾಜ್ಞೆಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.
Related Articles
Advertisement
ಪಶ್ಚಿಮ ಬಂಗಾಳದಲ್ಲಿ ಕೂಡ ಟಿಎಂಸಿ ಸರ್ಕಾರ ರಾಜ್ಯಪಾಲರಿಗೆ ಇರುವ ಅಧಿಕಾರವನ್ನು ಕಿತ್ತುಕೊಳ್ಳುವ ತೀರ್ಮಾನ ಕೈಗೊಂಡಿತ್ತು. ಅದಕ್ಕೆ ಸಂಬಂಧಿಸಿದ ವಿಧೇಯಕವೂ ಅಂಗೀಕಾರವಾಗಿದೆ.
ಫೋನ್ ಕದ್ದಾಲಿಕೆ ಮಾಡಲಾಗುತ್ತಿದೆ: ತಮಿಳ್ಸೈತೆಲಂಗಾಣದ ಕೆ.ಚಂದ್ರಶೇಖರ ರಾವ್ ನೇತೃತ್ವದ ಸರ್ಕಾರ ಕೂಡ ರಾಜ್ಯಪಾಲೆ ತಮಿಳ್‌ಸೈ ಸುಂದರರಾಜನ್ ಹಲವು ವಿಚಾರಗಳ ಬಗ್ಗೆ ಭಿನ್ನಾಭಿಪ್ರಾಯ ಹೊಂದಿದೆ. ಅದಕ್ಕೆ ಪುಷ್ಟಿ ಎಂಬಂತೆ ಬುಧವಾರ ಮಾತನಾಡಿದ ರಾಜ್ಯಪಾಲೆ “ನನ್ನ ಫೋನ್ ಅನ್ನು ಕದ್ದಾಲಿಸಲಾಗುತ್ತಿರುವ ಬಗ್ಗೆ ಸಂಶಯಗಳು ಉಂಟಾಗಿವೆ’ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಪೂರಕವಲ್ಲದ ವ್ಯವಸ್ಥೆ ಇದೆ. ವಿಶೇಷವಾಗಿ ರಾಜ್ಯಪಾಲರಿಗೆ ನೀಡಬೇಕಾಗಿರುವ ಮಾನ್ಯತೆ ನೀಡಲಾಗುತ್ತಿಲ್ಲ ಎಂದು ದೂರಿದ್ದಾರೆ. ಇತ್ತೀಚೆಗೆ ಸುದ್ದಿಯಾದ್ದ ಟಿಆರ್‌ಎಸ್ ಶಾಸಕರಿಗೆ ಆಮಿಷ ವಿಚಾರದಲ್ಲಿ ಕೆಲವೊಂದು ಜಾಲತಾಣಗಳಲ್ಲಿ ರಾಜಭವನವನ್ನು ಟ್ಯಾಗ್ ಮಾಡಿ, ಅಪ್‌ಲೋಡ್ ಮಾಡಲಾಗಿರುವ ಪೋಸ್ಟ್‌ಗಳ ಬಗ್ಗೆ ಪ್ರತಿಕ್ರಿಯೆ ನೀಡಲು ತಮಿಳ್‌ಸೈ ಸುಂದರರಾಜನ್ ನಿರಾಕರಿಸಿದ್ದಾರೆ.